Subscribe to Gizbot

ಸೆಪ್ಟೆಂಬರ್ ನಿಂದ ಜಿಯೋ DTH ಶುರು: ಒಂದು ವರ್ಷ ಉಚಿತ ಸೇವೆ?

Written By:

ಬಹುದಿನಗಳಿಂದ ಕಾಯುತ್ತಿರುವ ಜಿಯೋ DTH ಸೇವೆಯೂ ಶೀಘ್ರವೇ ಆರಂಭವಾಗುವ ಲಕ್ಷಣಗಳು ಕಾಣುತ್ತಿದೆ. ಈ ಹಿಂದೆಯೇ ಜಿಯೋ ತನ್ನ DTH ಸೆಟಪ್ ಬ್ಯಾಕ್ಸ್ ಅನ್ನು ತಯಾರು ಮಾಡಿದ್ದು, ಈಗಾಗಲೇ ಟೆಸ್ಟಿಂಗ್ ಸೇವೆಯೂ ಆರಂಭವಾಗಲಿದ್ದು, ಶೀಘ್ರವೇ ಸಾಮಾನ್ಯ ಸೇವೆಯೂ ಆರಂಭವಾಗಲಿದೆ.

ಸೆಪ್ಟೆಂಬರ್ ನಿಂದ ಜಿಯೋ DTH ಶುರು: ಒಂದು ವರ್ಷ ಉಚಿತ ಸೇವೆ?

ಓದಿರಿ: ವಾಟ್ಸ್‌ಆಪ್ ಪೇಮೆಂಟ್ ಬಳಸುವ ಮುನ್ನ ಎಷ್ಟು ಸೇಫ್ ಎಂದು ತಿಳಿಯಿರಿ..!

ಈಗಾಗಲೇ ಜಿಯೋ ಫೋನ್ ಲಾಂಚ್ ಆಗಿದ್ದು, ಇದರ ಹಿಂದೆಯೇ ಜಿಯೋ ಬ್ರಾಡ್ ಬ್ಯಾಂಡ್ ಸಹ ಸೇವೆಯನ್ನು ಆರಂಭವಾಗುವ ಸೂಚನೆಯೂ ದೊರೆತಿದೆ. ಈ ಹಿನ್ನಲೆಯಲ್ಲಿ ಜಿಯೋ DTH ಸೇವೆಯೂ ಸಹ ಶೀಘ್ರವೇ ಶುರುವಾಗಲಿದ್ದು, ಸೆಪ್ಟೆಂಬರ್ ಮೊದಲ ವಾರವೇ ಶುರುವಾಗುವ ಸಾಧ್ಯತೆ ಇದೆ. ಇದಾದ ನಂತರ ಎಲ್ಲಡೇ ಜಿಯೋ ಆಬ್ಬರವೇ ಕೇಳಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆರಂಭಿಕ ಕೊಡುಗೆ:

ಆರಂಭಿಕ ಕೊಡುಗೆ:

ಜಿಯೋ ಸೇವೆಯೂ ಆರಂಭವಾಗುವ ಮುನ್ನವೇ ಉಚಿತ ಸೇವೆಯ ಕುರಿತ ರೂಮರ್ ಗಳು ಶುರುವಾಗಿದ್ದು, ಮೂಲಗಳ ಪ್ರಕಾರ ಜಿಯೋ DTH ಸೆಟಪ್ ಬಾಕ್ಸ್ ಕೊಂಡರೆ ಮೂರರಿಂದ ಆರು ತಿಂಗಳು ಉಚಿತ ಸೇವೆಯನ್ನು ಪಡೆಯಬಹುದು ಎನ್ನಲಾಗಿದೆ.

ಒಂದು ವರ್ಷ ಉಚಿತವಾದರೂ ಆಶ್ಚರ್ಯವಿಲ್ಲ:

ಒಂದು ವರ್ಷ ಉಚಿತವಾದರೂ ಆಶ್ಚರ್ಯವಿಲ್ಲ:

ಇನ್ನು ಕೆಲವು ಅನಧಿಕೃತ ಮೂಲಗಳು ಸನ್ ಟಿವಿ ಶುರುವಾದ ಮಾದರಿಯಲ್ಲಿ ಒಂದು ವರ್ಷದ ಸೇವೆಯೂ ಉಚಿತವಾಗಬಹುದು ಎನ್ನುವ ಮಾತುಗಳು ಕೇಳಿಬಂದಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಹುಟ್ಟು ಹಾಕುವ ಜಿಯೋ ಸೇವೆಯಿಂದ ಇದನ್ನು ನಿರೀಕ್ಷಿಸಬಹುದಾಗಿದೆ.

ಎಲ್ಲಾದಕ್ಕಿಂತ ಹೆಚ್ಚಿನ ಚಾನಲ್:

ಎಲ್ಲಾದಕ್ಕಿಂತ ಹೆಚ್ಚಿನ ಚಾನಲ್:

ಬೇರೆ ಎಲ್ಲಾ DTH ಸೇವೆಗಳಿಗೆ ಹೋಲಿಕೆ ಮಾಡಿಕೊಂಡರೆ ಜಿಯೋದಲ್ಲಿ ಹೆಚ್ಚಿನ ಚಾನಲ್ ಗಳನ್ನು ಜಿಯೋ ಟಿವಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಅಧಿಕ HD ಚಾನಲ್ ಗಳು ಸೇರಿದಂತೆ ಪ್ರಾದೇಶಿಕ ಚಾನಲ್ ಗಳ ಸಂಖ್ಯೆಯೂ ತೀರಾ ಇರಲಿದೆ.

ಜಿಯೋ ಆಪ್ ಸೇವೆಯೂ ಇರಲಿದೆ:

ಜಿಯೋ ಆಪ್ ಸೇವೆಯೂ ಇರಲಿದೆ:

ಮೂಲಗಳ ಪ್ರಕಾರ ಜಿಯೋ ಕಡಿಮೆ ಬೆಲೆಗೆ ಸ್ಮಾರ್ಟ್ ಸೆಟಪ್ ಬಾಕ್ಸ್ ನೀಡಲಿದ್ದು, ಅದರಲ್ಲಿ ಜಿಯೋ ಆಪ್ ಸೇವೆಗಳು ದೊರೆಯಲಿದೆ. ಇದು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇಂಟರ್ನೆಟ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.

ಯೂಸೆಬಿ:

ಯೂಸೆಬಿ:

ಜಿಯೋ DTH ಅನ್ನು ಯೂಸೆಬಿ ಡ್ರೈವ್ ಹಾಕುವ ಮೂಲಕ ನಿಮ್ಮ ಪೆನ್‌ಡ್ರೈವ್ ಇಲ್ಲವೇ ಹಾರ್ಡ್ ಡಿಸ್ಕ್ ನಲ್ಲಿರುವ ವಿಡಿಯೋ ಪೋಟೊಗಳನ್ನು ಪ್ಲೇ ಮಾಡುವ ಅವಕಾಶವನ್ನು ನೀಡಲಾಗುವುದು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
we have been hearing numerous rumours relating to Reliance Jio’s entry into the dish TV segment with the Jio Set-Top Box. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot