'ಸೂಪರ್ ಮಾರಿಯೋ' ಗೇಮ್‌ ಪಾತ್ರಧಾರಿ ಇನ್ಮುಂದೆ 'ಡಾ.ಮಾರಿಯೋ'.!!

|

ಗೇಮ್ಸ್ ಆಡವುದೆನಿದ್ದರು ಅದು ಮಕ್ಕಳಷ್ಟೆ ಎನ್ನುವ ಕಾಲ ಒಂದಿತ್ತು. ಆದರೆ ಈಗ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಸ್ಮಾರ್ಟ್‌ಫೋನ್‌ನಲ್ಲಿ ಗೇಮ್ಸ್ ಆಡುವುದು ಸಾಮಾನ್ಯವಾಗಿದೆ. ಮೊದಲಿನಿಂದಲೂ ಜನಪ್ರಿಯ ಗೇಮ್ಸ್ ಗಳನ್ನು ಪರಿಚಯಿಸುವ ಮೂಲಕ ಚಿರಪರಿಚಿತವಾಗಿರುವ ಜನಪ್ರಿಯ 'ನಿಂಟೆಂಡೊ' ಕಂಪನಿ ಇದೀಗ ಗೇಮ್ಸ್ ಪ್ರಿಯರಿಗಾಗಿ ಸಿಹಿಸುದ್ದಿಯೊಂದನ್ನು ನೀಡಿದೆ.

'ಸೂಪರ್ ಮಾರಿಯೋ' ಗೇಮ್‌ ಪಾತ್ರಧಾರಿ ಇನ್ಮುಂದೆ 'ಡಾ.ಮಾರಿಯೋ'.!!

ನಿಂಟೆಂಡೊ ಸಂಸ್ಥೆಯು 'ಡಾ.ಮಾರಿಯೋ ವರ್ಲ್ಡ್' ಹೆಸರಿನ ಹೊಸ ಆಟವನ್ನು ಪರಿಚಯಿಸಲಿದ್ದು, ಇದೇ ವರ್ಷದ ಬೇಸಿಗೆ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈಗಾಗಲೇ ನಿಂಟೆಂಡೊ ಸಂಸ್ಥೆಯ ಮಾರಿಯೊ ಸರಣಿಯ ಆಟಗಳು ಅತೀ ಜನಪ್ರಿಯ ಆಗಿದ್ದು, ಹೀಗಾಗಿ ತನ್ನ ಹೊಸ ಡಾ.ಮಾರಿಯೋ ವರ್ಲ್ಡ್ ಆಟವನ್ನು ಮಾರಿಯೊ ಸರಣಿಯಲ್ಲಿಯೇ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.

'ಸೂಪರ್ ಮಾರಿಯೋ' ಗೇಮ್‌ ಪಾತ್ರಧಾರಿ ಇನ್ಮುಂದೆ 'ಡಾ.ಮಾರಿಯೋ'.!!

ಗೇಮ್ಸ್ ಪ್ರಿಯರಲ್ಲಿ ಭಾರೀ ಕುತೂಹಲ ಹೆಚ್ಚಿಸಿರುವ ಡಾ.ಮಾರಿಯೋ ವರ್ಲ್ಡ್ ಆಟವು 'ಆಕ್ಷನ್ ಪಜಲ್' ಮಾದರಿಯಲ್ಲಿರಲಿದೆ. ಬುದ್ದಿಬಳಸಿ ಆಡುವ ಆಟವಾಗಿದ್ದು, ಗೇಮ್ಸ್ ಪ್ರಿಯರು ಸಖತ್ ಎಂಜಾಯ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಆಟವು ಸುಲಭ ಹಂತದಿಂದ ಆರಂಭವಾಗಿ ಮುಂದುವರೆದಂತೆ ಆಟದಲ್ಲಿ ಕಠಿಣ ಮತ್ತು ಅತೀ ಕಠಿಣ ಹಂತಗಳು ಎದುರಾಗಲಿವೆ. ರೋಚಕ ಅನುಭವ ದೊರೆಯಲಿದೆ.

'ಸೂಪರ್ ಮಾರಿಯೋ' ಗೇಮ್‌ ಪಾತ್ರಧಾರಿ ಇನ್ಮುಂದೆ 'ಡಾ.ಮಾರಿಯೋ'.!!

ಸ್ಮಾರ್ಟ್‌ಫೋನ್‌ ಬರುವ ಪೂರ್ವದಲ್ಲಿ, ಮನೆಗಳಲ್ಲಿ ವಿಡಿಯೊ ಗೇಮ್ಸ್ ಆಡುವ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ನಿಂಟೆಂಡೊ ಕಂಪನಿ ಸಲ್ಲುತ್ತದೆ. ನಿಂಟೆಂಡೊ ಗೆಮ್ಸ್‌ಗಳಲ್ಲಿ ಬರುವ ಆ ಟೋಪಿದಾರಿ 'ಮಾರಿಯೊ' ಪಾತ್ರವನ್ನು ಗೇಮ್ಸ್ ಪ್ರಿಯರು ಮರೆಯಲು ಸಾಧ್ಯವೆ.? ಖಂಡಿತಾ ಇಲ್ಲಾ. ಹಾಗಾಗಿ ಅದೇ ಪಾತ್ರದನ್ನು ಡಾ. ಮಾರಿಯೊ ವರ್ಲ್ಡ್ ಆಟದಲ್ಲಿಯೂ ಮುಂದುವರೆಸಿದ್ದಾಗಿ ಕಂಪನಿ ತಿಳಿಸಿದೆ.

'ಸೂಪರ್ ಮಾರಿಯೋ' ಗೇಮ್‌ ಪಾತ್ರಧಾರಿ ಇನ್ಮುಂದೆ 'ಡಾ.ಮಾರಿಯೋ'.!!

ಪಜಲ್ ಮಾದರಿಯಲ್ಲಿರುವ ಡಾ.ಮಾರಿಯೋ ವರ್ಲ್ಡ್ ಆಟವನ್ನು ಸುಮಾರು ಜಪಾನ ಮತ್ತು US ಸೇರಿದಂತೆ 60 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಕಂಪನಿ ಉದ್ದೇಶಿಸಿದ್ದು, ಇದೇ ಮಾರ್ಚ ತಿಂಗಳಿಂದ ಆಟವಾಡಲು ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ. ಇನ್ನೂ ಆಟವು ಆಂಡ್ರಾಯ್ಡ್ ಮತ್ತು IOS ಸ್ಮಾರ್ಟ್‌ಫೋನ್‌ ಬಳಕೆದಾರರಿಬ್ಬರಿಗೂ ಲಭ್ಯವಿರಲಿದೆ. ಜಪಾನಿಸ್ ಮತ್ತು ಇಂಗ್ಲೀಷ್ ಭಾಷೆಗಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
The Dr Mario World follows a similar mode to another of Nintendo's games, "Super Mario Run." The side-scrolling game was free to download but required users to pay for additional levels.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X