ನಿಮಗೆ ಓದುವ ಹವ್ಯಾಸ ಇದ್ರೆ ನಿಮ್ಮ ಫೋನಿನಲ್ಲಿರಲಿ 'ಇ-ಸಾರ್ವಜನಿಕ ಗ್ರಂಥಾಲಯ' ಆಪ್!

|

ಡೆಡ್ಲಿ ಕೊರೊನಾ ವಕ್ಕರಿಸಿ ಇಡೀ ಜಗತ್ತನ್ನೇ ಕಂಗಾಲು ಮಾಡಿದೆ. ದೇಶದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡದಂತೆ ತಡೆಯಲು ಸರ್ಕಾರ ಲಾಕ್‌ಡೌನ್‌ ಅನ್ನು ಮೇ, 3ರ ವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಮನೆಯಲ್ಲಿಯೇ ಇರಬೇಕಿದೆ. ಲಾಕ್‌ಡೌನ್‌ ಬೇಸರ ಕಳೆಯಲು ಅನೇಕರು ತಮ್ಮ ಹವ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಅನೇಕರು ಗೇಮ್ಸ್‌ ಆಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ಓದುವ ಹವ್ಯಾಸ ಇರುವವರಿಗೆ ಇ-ಗ್ರಂಥಾಲಯದ ಪುಸ್ತಕಗಳು ನೆರವಾಗಿದೆ.

ಡಿಜಿಟಲ್ ಜಮಾನ

ಹೌದು, ಇಂದಿನ ಡಿಜಿಟಲ್ ಜಮಾನದಲ್ಲಿ ಬಹುತೇಕ ಸೇವೆಗಳು ಆಪ್‌ ರೂಪದಲ್ಲಿ ಲಭ್ಯವಾಗುತ್ತಿವೆ. ಅದೇ ರೀತಿ ಇತ್ತೀಚಿಗೆ ಇ-ಬುಕ್ಸ್‌, ಡಿಜಿಟಲ್ ಬುಕ್ಸ್ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲಿಯೇ ಕಥೆ, ಕಾದಂಬರಿ ಪುಸ್ತಕಗಳನ್ನು ಓದಬೇಕೆನ್ನುವವರಿಗೆ ಕರ್ನಾಟಕ ಸರ್ಕಾರದ 'ಇ-ಸಾರ್ವಜನಿಕ ಗ್ರಂಥಾಲಯ' (e-Sarvajanika Granthalaya) ಅಪ್ಲಿಕೇಶನ್ ಒಂದು ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಇ-ಸಾರ್ವಜನಿಕ ಗ್ರಂಥಾಲಯ ಆಪ್‌ನಲ್ಲಿ ಯಾವೆಲ್ಲಾ ಪುಸ್ತಕಗಳು ಲಭ್ಯ ಹಾಗೂ ಇತರೆ ವಿಶೇಷತೆಗಳು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಮೂರು ಕೆಟಗೇರಿಯ ಆಯ್ಕೆ

ಮೂರು ಕೆಟಗೇರಿಯ ಆಯ್ಕೆ

ಇ-ಸಾರ್ವಜನಿಕ ಗ್ರಂಥಾಲಯ ಆಪ್‌ ಮೂರು ಕೆಟಗೇರಿ ಆಯ್ಕೆ ಹೊಂದಿದೆ. ಅವುಗಳು ಕ್ರಮವಾಗಿ ಇ-ಪುಸ್ತಕ ಅಂದರೇ ಡಿಜಿಟಲ್ ಬುಕ್ಸ್, ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಡಿಯೊಗಳು ಮತ್ತು Simulations(ಸಂವಾದಾತ್ಮಕ ಪ್ರಯೋಗಗಳು) ಆಯ್ಕೆಗಳಿವೆ. ಓದುಗರು ಡಿಜಿಟಲ್ ಪುಸ್ತಕ ಓದಬಹುದು ಹಾಗೂ ವಿಡಿಯೊ ವೀಕ್ಷಿಸಬಹುದಾದ ಸೌಲಭ್ಯಗಳು ಇವೆ.

ಕಥೆ-ಕಾದಂಬರಿ ಪುಸ್ತಕಗಳು

ಕಥೆ-ಕಾದಂಬರಿ ಪುಸ್ತಕಗಳು

ಇ-ಸಾರ್ವಜನಿಕ ಗ್ರಂಥಾಲಯ ಆಪ್‌ನಲ್ಲಿ ಕನ್ನಡ ಹಾಗೂ ಇಂಗ್ಲಿಷ ಭಾಷೆಯ ಪುಸ್ತಕಗಳು ಲಭ್ಯ ಇವೆ. ಹಾಗೂ ಕನ್ನಡ ಸಾಹಿತ್ಯದ ಪುಸ್ತಕಗಳು, ಪ್ರಮುಖ ಲೇಖಕರ ಕಥೆ, ಕವನ, ಕಾದಂಬರಿ ಸೇರಿದಂತೆ ಹಲವು ಬಗೆಯ ವಿಷಯಗಳ ಪುಸ್ತಕಗಳು ಡಿಜಿಟಲ್ ಮಾದರಿಯಲ್ಲಿ ದೊರೆಯುತ್ತವೆ.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಹಾಯಕ

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಹಾಯಕ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಅಗತ್ಯ ಪುಸ್ತಕಗಳು ಸಹ ಇ-ಸಾರ್ವಜನಿಕ ಗ್ರಂಥಾಲಯ ಆಪ್‌ನಲ್ಲಿ ಲಭ್ಯವಾಗುತ್ತವೆ. ಎಸ್‌ಡಿಎ, ಎಫ್‌ಡಿಎ, ಕೆಎಎಸ್‌ ಹಾಗೂ ಐಎಎಸ್‌ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ.

ಆಪ್‌ ಇನ್‌ಸ್ಟಾಲ್‌ ಮಾಹಿತಿ

ಆಪ್‌ ಇನ್‌ಸ್ಟಾಲ್‌ ಮಾಹಿತಿ

ಓದುಗರು ಗೂಗಲ್ ಪ್ಲೇ ಸ್ಟೋರ್‌ನಿಂದ ಇ-ಸಾರ್ವಜನಿಕ ಗ್ರಂಥಾಲಯ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್‌ 5.0 ಓಎಸ್‌ ಹಾಗೂ ಅದಕ್ಕಿಂತ ಮೇಲ್ಪಟ್ಟ ಆಂಡ್ರಾಯ್ಡ್ ಓಸ್ ಫೋನ್‌ಗಳು ಈ ಆಪ್‌ ಅನ್ನು ಬೆಂಬಲಿಸುತ್ತವೆ.

Most Read Articles
Best Mobiles in India

English summary
e-Sarvajanika Granthalaya has the following types of curated contents in Kannada and English.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X