Subscribe to Gizbot

ಈ ಆಪ್‌ಗಳು ಇಂಡೋ-ಪಾಕ್ ಕದನದ ಬಿಸಿಯನ್ನು ಮತ್ತಷ್ಟು ಹೆಚ್ಚಿಸಲಿವೆ...!!!!!

Written By:

ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತಿಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವನ್ನು ಬಡಿಸಿದೆ. ಅದರಲ್ಲೂ ಕೊನೆಯ ಫೈನಲ್ ಪಂದ್ಯವಂತೂ ಹಬ್ಬದೂಟ. ಫೈನಲ್ ನಲ್ಲಿ ಇಂಡೋ- ಪಾಕ್ ಕದನವನ್ನು ನೋಡಲು ಅಭಿಮಾನಿಗಳು ತುದಿಗಾಲಿನಿಂತು ಕಾಯುತ್ತಿದ್ದಾರೆ.

ಈ ಆಪ್‌ಗಳು ಇಂಡೋ-ಪಾಕ್ ಕದನದ ಬಿಸಿಯನ್ನು ಮತ್ತಷ್ಟು ಹೆಚ್ಚಿಸಲಿವೆ...!!!!!

ಓದಿರಿ: BSNL 4GB ಡೇಟಾ, ಏರ್ಟೆಲ್ 1000GB ಡೇಟಾ ಮತ್ತು ಜಿಯೋ 20% ಹೆಚ್ಚುವರಿ ಡೇಟಾ ಆಫರ್ ಹಾಗೂ ಇನ್ನು ಹಲವು..!!!!!!

ಈ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಮ್ಯಾಚ್ ನೋಡಲು ಸಹಾಯವಾಗುವಂತಹ ಕೇಲವು ಆಪ್ ಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು, ಈ ಆಪ್‌ಗಳು ಫೈನಲ್ ಪಂದ್ಯವನ್ನು ಮತ್ತಷ್ಟು ಸ್ಮರಣಿಯವಾಗಿಸುವದರಲ್ಲಿ ಯಾವುದೇ ಡೌಟ್ ಇಲ್ಲ ಎನ್ನಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾಟ್ ಸ್ಟಾರ್:

ಹಾಟ್ ಸ್ಟಾರ್:

ಹಾಟ್ ಸ್ಟಾರ್ ಆಪ್ ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಲೈವ್ ರಿಲೆ ಪ್ರಸಾರವಾಗಲಿದೆ. ಪ್ರೀಮಿಯಮ್ ಚಂದದಾರರು ಲೈವ್ ನೋಡಬಹುದಾಗಿದ್ದು, ಇತರರು ಕೊಂಚ ನಿಧಾನವಾದ ಪ್ರಸಾರದ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದು ಏಲ್ಲಿದ್ದರೂ ಮ್ಯಾಚ್ ಮಿಸ್ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ.

ಕ್ರಿಕ್ ಬುಸ್:

ಕ್ರಿಕ್ ಬುಸ್:

ಸ್ಮಾರ್ಟ್‌ಫೋನಿನಲ್ಲಿ ಲೈವ್ ರಿಲೇ ನೋಡಲು ಸಾಧ್ಯವಾಗದವರಿಗೆ ಕ್ರಿಕ್ ಬುಕ್ ಲೈವ್ ಸ್ಕೋರ್ ಆಪ್‌ಡೇಟ್ ಮಾಡುವುದಲ್ಲದೇ ರನ್ನಿಂಗ್ ಕಾಮೆಂಟ್ರಿಯನ್ನು ನೀಡಲಿದೆ. ಇದು ಸಹ ನಿಮಗೆ ಟ್ರಾವಲಿಂಗ್ ಸಂದರ್ಭದಲ್ಲಿ ಸಹಾಯ ಮಾಡಲಿದೆ.

ಫ್ಲಿಪ್ ಕಾರ್ಟ್:

ಫ್ಲಿಪ್ ಕಾರ್ಟ್:

ನಿಮ್ಮ ಮನೆಯಲ್ಲೇ ಕುಳಿತು ಮ್ಯಾಚ್ ನೋಡಿದರೂ ಸ್ಟೇಡಿಯಂ ಫಿಲ್ ಬೇಕು ಎಂದರೇ ಟೀಂ ಇಂಡಿಯಾದ ಜೆರ್ಸಿ ತೊಡಲೇ ಬೇಕು ಇದಕ್ಕಾಗಿ ಫ್ಲಿಪ್ ಕಾರ್ಟ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇಲ್ ಆರಂಭಿಸಿದ್ದು, ಇಲ್ಲಿ ಕ್ರಿಕೆಟ್ ಸಲಕರಣೆಗಳ ಮೇಲೆ ಆಫರ್ ನೀಡುತ್ತಿದೆ.

ಡಿನ್ ಔಟ್:

ಡಿನ್ ಔಟ್:

ಈ ಆಪ್ ನಿಮ್ಮ ಸುತ್ತಮುತ್ತ ಕ್ರಿಕೆಟ್ ಲೈವ್ ಪ್ರಸಾರ ಮಾಡುತ್ತಿರುವ ರೆಸ್ಟೋರೆಂಟ್ ಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ. ಸುಮಾರು 3000 ರೆಸ್ಟೋರೆಂಟ್ ಗಳ ಮಾಹಿತಿ ಇದರಲ್ಲಿದ್ದು, ನೀವು ಮ್ಯಾಚ್ ನೋಡುತ್ತಲೇ ನಿಮ್ಮ ಊಟವನ್ನು ಸವಿಯುವ ಅವಕಾಶವನ್ನು ಮಾಡಿಕೊಡಲಿದೆ.

ಸ್ವ್ಯಾಗಿ:

ಸ್ವ್ಯಾಗಿ:

ಮನೆಯಲ್ಲೇ ಕುಳಿತು ಮ್ಯಾಚ್ ನೋಡುತ್ತಿರುವ ಸಂದರ್ಭದಲ್ಲಿ ಏನಾದರು ತಿನ್ನಬೇಕು ಎನ್ನುವ ಮನಸಾದರೆ ಈ ಆಪ್ ಹಾಕಿಕೊಳ್ಳಿ ಆರಾಮವಾಗಿ ನಿಮ್ಮ ಇಷ್ಟದ ಫುಡ್ ಆರ್ಡರ್ ಮಾಡಿಕೊಳ್ಳಿ. ಮ್ಯಾಚ್ ನೋಡುತ್ತಾ ನಿಮ್ಮಷ್ಟಿದ ತಿನಿಸುಗಳನ್ನು ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Finally, the ICC Champions Trophy 2017 is all set to reach its climax as Pakistan takes on India on June 18, which is tomorrow. to know more visit kannada.gizbot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot