BSNL 4GB ಡೇಟಾ, ಏರ್‌ಟೆಲ್ 1000GB ಡೇಟಾ ಮತ್ತು ಜಿಯೋ 20% ಹೆಚ್ಚುವರಿ ಡೇಟಾ ಆಫರ್ ಹಾಗೂ ಇನ್ನು ಹಲವು..!!!!!!
ಟೆಲಿಕಾಂ ಕಂಪನಿಗಳು ತಾವು ನಾವು ಎಂದು ಗ್ರಾಹಕರಿಗೆ ಉಚಿತ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಯಾವ ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತಿವೆ ಎಂಬುದ ಸಣ್ಣ ಪರಿಚಯ ಇಲ್ಲಿದೆ.
ಜಿಯೋ ಶುರುವಾದ ನಂತರದಲ್ಲಿ ಆರಂಭವಾದಂತಹ ದರ ಸಮಯ ಇನ್ನು ನಿಂತಿಲ್ಲ. ಒಂದರ ಹಿಂದೆ ಒಂದರಂತೆ ಟೆಲಿಕಾಂ ಕಂಪನಿಗಳು ತಾವು ನಾವು ಎಂದು ಗ್ರಾಹಕರಿಗೆ ಉಚಿತ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಯಾವ ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತಿವೆ ಎಂಬುದ ಸಣ್ಣ ಪರಿಚಯ ಇಲ್ಲಿದೆ.

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?
ಏರ್‌ಟೆಲ್, ವೊಡಾಫೋನ್, ಐಡಿಯಾ ಸೇರಿದಂತೆ ಸರಕಾರಿ ಸ್ವಾಮ್ಯದ BSNL ಸಹ ಗ್ರಾಹಕರ ಮನವೊಲಿಕೆಗೆ ಮುಂದಾಗಿವೆ. ತಮ್ಮ ಚಂದಾರಿಕೆಯನ್ನು ಹೆಚ್ಚು ಮಾಡಿಕೊಳ್ಳಲು ಆಚ್ಚರಿ ಅಫರ್ ಗಳನ್ನು ಘೋಷಣೆ ಮಾಡುತ್ತಿವೆ, ಈ ಹಿನ್ನಲೆಯಲ್ಲಿ ಯಾವ ಯಾವ ಟೆಲಿಕಾಂ ಕಂಪನಿಗಳ ಬೆಸ್ಟ್ ಪ್ಲಾನ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಜಿಯೋ ಆಫರ್:
ಜಿಯೋ ಇಷ್ಟು ದಿನ ಸುಮ್ಮನಿದ್ದು, ಈಗ ತನ್ನ ಗ್ರಾಹಕರಿಗೆ 20% ಹೆಚ್ಚಿನ ಡೇಟಾವನ್ನು ನೀಡುವ ಘೋಷಣೆಯನ್ನು ಮಾಡಿದೆ. ಆದರೆ ಇದಕ್ಕಾಗಿ ತನ್ನ ಲೈಫ್ ಫೋನ್‌ಗಳನ್ನು ಕೊಂಡುಕೊಳ್ಳಬೇಕು ಎನ್ನುವ ಷರತ್ತು ವಿವಿಧಿಸಿದೆ. ಒಟ್ಟಿನಲ್ಲಿ ಹೊಸ ಸ್ಮಾರ್ಟ್‌ಫೋನ್ ಕೊಳ್ಳಬೇಕು ಎಂದವರಿಗೆ ಇದು ಸುಪರ್ ಪ್ಲಾನ್ ಆಗಿದೆ. ಅಲ್ಲದೇ ರೂ.309 ಮತ್ತು ರೂ.509 ಪ್ಲಾನ್ ಸಹ ಇನ್ನು ಜಾರಿಯಲ್ಲಿಯೇ ಇದೆ.

BSNL ಆಫರ್:
ಸರಕಾರಿ ಸ್ವಾಮ್ಯದ BSNL ಸಹ ಇಂದು ಹೊಸದಾಗಿ 444 ಆಫರ್ ಬಿಟ್ಟಿದ್ದು, ಮೂರು ತಿಂಗಳು ಕಾಲ ಪ್ರತಿ ನಿತ್ಯ 4 GB ಡೇಟಾವನ್ನು ಗ್ರಾಹಕರಿಗೆ ನೀಡುವ ಘೋಷಣೆಯನ್ನು ಮಾಡಿದೆ. ಈ ಹಿಂದೆ 333 ಆಫರ್ ನಲ್ಲಿ ಪ್ರತಿ ನಿತ್ಯ 3 GB ಡೇಟಾವನ್ನು ನೀಡುವ ಮಾದರಿಯಲ್ಲಿ ಈ ಬಾರಿ 4GB ಡೇಟಾ ಆಫರ್ ಮಾಡಿದೆ.

ವೊಡಾಪೋನ್:
ರಂಜಾನ್ ಅಂಗವಾಗಿ ವೊಡಾಪೋನ್ ಸಹ ಅತ್ಯುತ್ತಮ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ರೂ. 786ಕ್ಕೆ ಪ್ರೀಪೆಯ್ಡ್ ಬಳಕೆ ದಾರರಿಗೆ ಆಫರ್ ನೀಡಲು ಮುಂದಾಗಿದೆ. ಇದರಲ್ಲಿ ಉಚಿತ ಅನ್‌ಲಿಮಿಟೆಡ್ ಕರೆ ಮಾಡುವ ಸೇವೆಯನ್ನು ನೀಡಿದ್ದು, ಇದರೊಂದಿಗೆ ಪ್ರತಿ ನಿತ್ಯ ಒಂದು GB ಡೇಟಾ ಬಳಕೆಗೆ ದೊರೆಯಲಿದೆ.

ಐಡಿಯಾ ಆಫರ್:
ದರ ಸಮರದಲ್ಲಿ ತನ್ನ ಪಾಲನ್ನು ಹೊಂದಿರುವ ಐಡಿಯಾ, ರೂ. 396ಕ್ಕೆ 70 GB ಡೇಟಾವನ್ನು ನೀಡಿಲು ಮುಂದಾಗಿದೆ. ಅದುವೇ 70 ದಿನಗಳ ವಾಲಿಡಿಟಿಯನ್ನು ಹೊಂದಿದ್ದು, ಉಚಿತವಾಗಿ ಐಡಿಯಾ ಟು ಐಡಿಯಾ ಕರೆಗಳನ್ನು ಮಾಡಬಹುದಾಗಿದ್ದು, ಬೇರೆ ಕಂಪನಿಗಳಿಗೆ 3000 ನಿಮಿಷಗಳ ಉಚಿತವಾಗಿ ಮಾತನಾಡಬಹುದಾಗಿದೆ.

ಏರ್‌ಟೆಲ್ ಆಫರ್:
ಈಗಾಗಲೇ ಮೊಬೈಲ್ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡಿರುವ ಏರ್‌ಟೆಲ್ ಈ ಭಾರಿ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಗಾಳ ಹಾಕಿದ್ದು, ಏಕ್ಸ್ ಕ್ಲೂಸಿವ್ ವೆಬ್ ಆಫರ್ ಬಿಟ್ಟಿದ್ದು, 1000 GB ಡೇಟಾ ಕೊಡುಗೆಯನ್ನು ನೀಡಲು ಮಂದಾಗಿದೆ. ಇದು ಒಂದು ವರ್ಷಗಳ ಕಾಲದ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಜಿಯೋ ಶುರುವಾದ ಮೇಲೆ ಎಲ್ಲಾ ಕಂಪನಿಗಲು ಒಂದರ ಹಿಂದೆ ಒಂದರೆ ಆಫರ್ ನೀಡುತ್ತಿವೆ.


Click it and Unblock the Notifications








