ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆದ ಫೇಸ್‌ಬುಕ್: ಶೀಘ್ರವೇ FB ಪೇಮೆಂಟ್ ಸೇವೆ..!
ದೇಶಿಯ ಮಾರುಕಟ್ಟೆಯಲ್ಲಿ ಪೇಮೆಂಟ್ ಆಪ್ ಗಳ ಭರಾಟೆ ಜೋರಾಗಿಯೇ ಇದೆ. ಹಾಗಾಗಿಯೇ ಹೆಚ್ಚಿನ ಪ್ರಮಾಣದ ಪೇಮೆಂಟ್ ಆಪ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಲಾಂಚ್ ಮಾಡಿದ್ದು, ಪೂರ್ಣ ಪ್ರಮಾಣದಲ್ಲಿ ಶೀಘ್ರವೇ ಲಾಂಚ್ ಆಗಲಿದೆ. ವಾಟ್ಸ್‌ಆಪ್ ಪೇಮೆಂಟ್ ಶುರುವಾದರೆ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಯಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಬೆನ್ನಲೇ ಮತ್ತೊಂದು ಸುದ್ದಿಯೊಂದು ಲಭ್ಯವಿದೆ.

ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಿರುವ ಬೆನ್ನಲ್ಲೇ, ವಾಟ್ಸ್‌ಆಪ್ ಒಡೆತವನ್ನು ಹೊಂದಿರುವ ಫೇಸ್‌ಬುಕ್ ಸಹ ಪೇಮೆಂಟ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಈ ಹಿಂದೆಯಂತೆ ಫೇಸ್‌ಬುಕ್ ತನ್ನ ಒಡೆತದ ಆಪ್ ವೊಂದರಲ್ಲಿ ಕಾಣಿಸಿಕೊಂಡ ಆಯ್ಕೆಯನ್ನು ಬೇರೆ ಆಪ್ ಗಳಲ್ಲಿಯೂ ನೀಡಲಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಮೇಸೆಂಜರ್ ಆಪ್ ನಲ್ಲಿಯೂ ನೀಡಲಿದೆ ಎನ್ನಲಾಗಿದೆ.
ಓದಿರಿ: ಮಾರುಕಟ್ಟೆ ನಡುಗಿಸಲಿದೆ ಆಪಲ್: ಅರ್ಧ ಬೆಲೆಗೆ, ಡ್ಯುಯಲ್ ಸಿಮ್ ಐಫೋನ್..!

ವಾಟ್ಸ್‌ಆಪ್‌ನಿಂದ ಮಾಹಿತಿ:
ಈ ಹಿಂದೆಯೇ ವಾಟ್ಸ್‌ಆಪ್ ತನ್ನ ಪೇಮೆಂಟ್ ಮಾಹಿತಿಯನ್ನು ಪೇರೆಂಟ್ ಕಂಪನಿ ಫೇಸ್‌ಬುಕ್ ನೊಂದಿಗೆ ಹಂಚಿಕೊಳ್ಳುವುದಾಗಿ ಅಧಿಕೃತ ಮಾಹಿತಿಯನ್ನು ನೀಡಿತ್ತು. ಇದು ಯಾವ ಕಾರಣಕ್ಕೆ ಎನ್ನುವುದು ಬಹಿರಂಗಗೊಂಡಿದ್ದು, ಫೇಸ್‌ಬುಕ್ ಪೇಮೆಂಟ್ ಸೇವೆಯನ್ನು ಆರಂಭಿಸುತ್ತಿದ್ದು ಇದಕ್ಕಾಗಿಯೇ ಮಾಹಿತಿಯನ್ನು ಪಡೆಕೊಳ್ಳುತ್ತಿದೆ.

ಮೆಸೆಂಜರ್ ನಲ್ಲಿ ಪೇಮೆಂಟ್:
ಈಗಾಗಲೇ ಫೇಸ್‌ಬುಕ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ಫೇಸ್‌ಬುಕ್ ಮೆಸೆಂಜರ್ ಆಪ್‌ನಲ್ಲಿಯೇ ಪೇಮೆಂಟ್ ಸೇವೆಯನ್ನು ನೀಡಲು ಫೇಸ್‌ಬುಕ್ ಯೋಜನೆಯೊಂದನ್ನು ರೂಪಿಸುತ್ತಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ಪರೀಕ್ಷೆ ನಡೆದಿದೆ:
ಈಗಾಗಲೇ ಫೇಸ್‌ಬುಕ್ ತನ್ನ ಮೆಸೆಂಜರ್ ಆಪ್ ನಲ್ಲಿ ಪೇಮೆಂಟ್ ಸೇವೆಯನ್ನು ನೀಡುವ ಸಲುವಾಗಿ ಪರೀಕ್ಷೆಯನ್ನು ಆರಂಭಿಸಿದೆ ಎನ್ನಲಾಗಿದೆ. ಈಗಾಗಲೇ ವಾಟ್ಸ್‌ಆಪ್ ನಲ್ಲಿ UPI ಪೇಮೆಂಟ್ ಆಯ್ಕೆಯನ್ನು ನೀಡುರುವ ಅನುಭವನ್ನು ಹೊಂದಿರುವ ಹಿನ್ನಲೆಯಲ್ಲಿ ಶೀಘ್ರವೇ ಮೆಸೆಂಜರ್ ಪೇಮೆಂಟ್ ಬಳಕೆಗೆ ದೊರೆಯಲಿದೆ.

ಅನೇಕ ಸೇವೆಗಳು:
ಫೇಸ್‌ಬುಕ್ ಪೇಮೆಂಟ್ ಸೇವೆಯನ್ನು ಮೆಸೆಂಜರ್ ನಲ್ಲಿ ನೀಡಲಿದ್ದು, ಇದರಲ್ಲಿ ಬಳಕೆದಾರರಿಗೆ ರಿಚಾರ್ಜ್ ಮಾಡಿಕೊಳ್ಳುವ ಅವಕಾಶವಲ್ಲದೇ, DTH, ಬ್ರಾಡ್ ಬ್ಯಾಂಡ್ ಸೇರಿದಂತೆ ಹಲವು ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಫೇಸ್‌ಬುಕ್ ಆಪ್‌ನಲ್ಲಿಯೂ:
ಮೂಲಗಳ ಪ್ರಕಾರ ಫೇಸ್‌ಬುಕ್ ಆಪ್‌ನಲ್ಲಿಯೂ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಫೇಸ್‌ಬುಕ್ ನಲ್ಲಿ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಶೀಘ್ರವೇ ಫೇಸ್‌ಬುಕ್ ಆಪ್‌ನಲ್ಲಿ ಪೇಮೆಂಟ್ ಮಾಡಬಹುದಾಗಿದೆ.

ಒಂದೇ ಸೂರಿನಲ್ಲಿ ಎಲ್ಲಾ:
ಈಗಾಗಲೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಮಾರ್ಕೆಟ್ ಪ್ಲೇಸ್ ಎನ್ನುವ ಸೇವೆಯೊಂದನ್ನು ನೀಡುತ್ತಿದ್ದು, ಇದಕ್ಕೆ ಸಹಾಯವಾಗುವಂತೆ ಮೆಸೆಂಜರ್ ವಿನ್ಯಾಸ ಮಾಡಿದೆ. ಈಗ ಪೇಮೆಂಟ್ ಸಹ ಆರಂಭಿಸುತ್ತಿದ್ದು, ಆನ್‌ಲೈನಿಲ್ಲಿ ಒಂದೇ ಸೂರಿನಲ್ಲಿ ಎಲ್ಲವನ್ನು ನೀಡಲು ಮುಂದಾಗುತ್ತಿದೆ ಎನ್ನಲಾಗಿದೆ.

ವಾಟ್ಸ್‌ಆಪ್ ಪ್ರತಿ ಸ್ಪರ್ಧಿ:
ಈಗಾಗಲೇ ಮಾರುಕಟ್ಟೆಯಲ್ಲಿ 250 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್, ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುವ ಪೇಮೆಂಟ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್‌ಗೆ ತಾನೇ ಸೆಡ್ಡು ಹೊಡೆಯುವ ಎನ್ನುವ ಯೋಜನೆಗೆ ಫೇಸ್‌ಬುಕ್ ಮುಂದಾಗಿದೆ.


ಎಲ್ಲರಿಗೂ ಹೊಡೆತ:
ಫೇಸ್‌ಬುಕ್ ಆಪ್ ನಲ್ಲಿ ಪೇಮೆಂಟ್ ಸೇವೆಯನ್ನು ನೀಡುವ ಮೂಲಕ ವಾಟ್ಸ್‌ಆಪ್ ಪೇಮೆಂಟ್ ಸೇರಿದಂತೆ, ಗೂಗಲ್ ತೇಜ್, ಪೇಟಿಎಂ, ಪೇನ್‌ಪೇ, ಭೀಮ್ ಸೇರಿದಂತೆ UPI ಆಧಾರಿತ ಸೇವೆಯನ್ನು ನೀಡುತ್ತಿರುವ ಆಪ್‌ಗಳಿಗೆ ಭಾರಿ ಹೊಡೆತವನ್ನು ನೀಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.


Click it and Unblock the Notifications








