Home
ಮೊಬೈಲ್

ಮಾರುಕಟ್ಟೆ ನಡುಗಿಸಲಿದೆ ಆಪಲ್: ಅರ್ಧ ಬೆಲೆಗೆ, ಡ್ಯುಯಲ್ ಸಿಮ್ ಐಫೋನ್..!

By Srinidhi

ಮಾರುಕಟ್ಟೆಯಲ್ಲಿ ತನ್ನದೇ ಸ್ಟಾಂಡರ್ಡ್ ಕ್ರಿಯೇಟ್ ಮಾಡಿಕೊಂಡಿರುವ ಆಪಲ್ ಕಂಪನಿ ಶೀಘ್ರವೇ ಮಾರುಕಟ್ಟೆಗೆ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಐಫೋನ್‌ವೊಂದನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಕಾರ್ಯದಲ್ಲಿ ಆಪಲ್ ಮಗ್ನವಾಗಿದ್ದು, ಶೀಘ್ರವೇ ಡ್ಯುಯಲ್ ಸಿಮ್ ಐಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ.

ಮಾರುಕಟ್ಟೆ ನಡುಗಿಸಲಿದೆ ಆಪಲ್: ಅರ್ಧ ಬೆಲೆಗೆ, ಡ್ಯುಯಲ್ ಸಿಮ್ ಐಫೋನ್..!

ಈ ಹಿಂದೆಯೇ ಆಪಲ್ ಡ್ಯುಯಲ್ ಸಿಮ್ ಐಫೋನ್ ಬಿಡುಗಡೆ ಮಾಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು, ಆದರೆ ಇದುವರೆಗೂ ಅದು ಸಾಧ್ಯವಾಗಿರಲಿಲ್ಲ. ಆದರೆ ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಮಾರುಕಟ್ಟೆ ಟ್ರೆಂಡ್ ಪಾಲಿಸಲು ಆಪಲ್ ಮುಂದಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಓದಿರಿ: ಈ ಚುನಾವಣೆಯಲ್ಲಿ ನೀವು ಓಟ್‌ ಮಾಡಬಹುದಾ Or ಇಲ್ವಾ..? ಈಗಲೇ ಆನ್‌ಲೈನಿನಲ್ಲಿ ಚೆಕ್ ಮಾಡಿ..!

ಮಾರುಕಟ್ಟೆ ಟ್ರೆಂಟ್:

ಮಾರುಕಟ್ಟೆ ಟ್ರೆಂಟ್:

ಮಾರುಕಟ್ಟೆಯಲ್ಲಿ ಸದ್ಯ ಆಪಲ್ ಬಿಟ್ಟರೇ ಉಳಿದೆಲ್ಲಾ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಸಿಮ್‌ ಹಾಕಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿವೆ, ಅಲ್ಲದೇ ಟಾಪ್ ಎಂಡ್ ಫೋನ್‌ ಗಳು ಇದೇ ಮಾದರಿಯ ಆಯ್ಕೆಯನ್ನು ಹೊಂದಿವೆ. ಇದೇ ಮಾದರಿಯಲ್ಲಿ ಆಪಲ್ ಸಹ ಮಾರುಕಟ್ಟೆಯ ಟ್ರೆಂಡ್ ಅನ್ನು ಫಾಲೋ ಮಾಡುವ ಸಲುವಾಗಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಐಫೋನ್ ಅನ್ನು ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ.

ಐಫೋನ್ X ಮಾದರಿಯಲ್ಲಿ:

ಐಫೋನ್ X ಮಾದರಿಯಲ್ಲಿ:

ಆಪಲ್ ಬಿಡುಗಡೆ ಮಾಡಲಿರುವ ನೂತನ ಐಫೋನ್ ನಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡುವುದಲ್ಲದೇ, ನೋಡಲು ಈ ಫೋನ್ ಐಫೋನ್ X ಮಾದರಿಯಲ್ಲಿಯೇ ಕಾಣಿಸಿಕೊಳ್ಳಲಿದೆ. ಬೆಲಯೂ ಕಡಿಮೆ ಇರಲಿದೆ.

ಐಫೋನ್ ಬೆಲೆ ಭಾರೀ ಕಡಿಮೆ:

ಐಫೋನ್ ಬೆಲೆ ಭಾರೀ ಕಡಿಮೆ:

ಇದಲ್ಲದೇ ಈ ಹೊಸ ಐಫೋನ್ ಬೆಲೆಯಯೂ ಐಫೋನ್ X ಬೆಲೆಯಲ್ಲಿ ಅದರ್ಧಷ್ಟು ಇರಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್‌ಫೋನ್‌ಗಳಿಗೆ ಇದು ಭರ್ಜರಿ ಬೇಡಿಕೆಯನ್ನು ನೀಡುವ ಸಾಧ್ಯತೆ ಇದ್ದು, ಮಾರುಕಟ್ಟೆಯನ್ನು ತಲ್ಲಣಿಸಲಿದೆ.

ಹೊಸ ಆಯ್ಕೆಗಳು:

ಹೊಸ ಆಯ್ಕೆಗಳು:

ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿರುವ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಸ್ಮಾರ್ಟ್‌ಫೋನಿನಲ್ಲಿ 6.1 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, OLED ಡಿಸ್‌ಪ್ಲೇ ಆಗಿರಲಿದ್ದು, ಟ್ರೂಡೆಪ್ತ್ ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ.

ಆಪಲ್ ಗೇಮ್ ಚೆಂಜರ್:

ಆಪಲ್ ಗೇಮ್ ಚೆಂಜರ್:

ಈಗಾಗಲೇ ಮಾರುಕಟ್ಟೆಯಲ್ಲಿ ಡ್ಯುಯಲ್ ಸಿಮ್ ಐಫೋನ್ ಕುರಿತು ನಿರೀಕ್ಷೆ ಹೆಚ್ಚಾಗಿದ್ದು, ಅದರಲ್ಲಿಯೂ ಬೆಲೆ ಕಡಿಮೆ ಎನ್ನುವುದು ಬೇಡಿಕೆಯನ್ನು ಹೆಚ್ಚಿಸಲಿದ್ದು, ಮಾರುಕಟ್ಟೆಯಲ್ಲಿ ಆಪಲ್ ಗೇಮ್ ಚೇಂಜರ್ ಆಗಲಿದೆ ಎಂದರೂ ತಪ್ಪಾಗುವುದಿಲ್ಲ.

What is Jio Cricket Gold Pass? How to Buy it
ಭಾರತಕ್ಕೆ ಮಾತ್ರ..?

ಭಾರತಕ್ಕೆ ಮಾತ್ರ..?

ಮೂಲಗಳ ಪ್ರಕಾರ ಈ ಕಡಿಮೆ ಬೆಲೆಯ ಐಫೋನ್ ಭಾರತದಲ್ಲಿ ಮಾತ್ರವೇ ಇಲ್ಲವಾದರೆ ಏಷ್ಯಾದಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅಲ್ಲದೇ ಇದು ಐಫೋನ್ SE 2 ಅಥವಾ ಐಫೋನ್ SE X ಆಗಿರಬಹುದು ಎನ್ನುವ ಮಾತು ಕೇಳಿಬಂದಿದೆ.

Best Mobiles in India

English summary
Apple launch dual SIM iPhones for the first time - entry level iPhone. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+