Home
Apps

2022ರ ಕೆಲವು ಅತ್ಯುತ್ತಮ ಫೋಟೊ ಎಡಿಟಿಂಗ್ ಆಪ್ಸ್‌ ಲಿಸ್ಟ್‌ ಇಲ್ಲಿದೆ!

ಸದ್ಯ ಇಂದಿನ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್‌ ನೀಡಲಾಗುತ್ತಿದೆ. ಹಾಗೆಯೇ ಉನ್ನತ ಸೆನ್ಸಾರ್ ಇರುತ್ತವೆ, ಹೀಗಾಗಿ ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಅದಾಗ್ಯೂ ಗ್ರಾಹಕರು ಬಳಕೆದಾರರು ಫೋನಿನಲ್ಲಿ ಸೆರೆ ಹಿಡಿದ ಫೋಟೊಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೊದಲು ಎಡಿಟ್‌ ಮಾಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಬಳಕೆದಾರರು ಅತ್ಯುತ್ತಮ ಫೋಟೊ ಎಡಿಟ್‌ ಅಪ್ಲಿಕೇಶನ್‌ ಹುಡುಕಾಟ ನಡೆಸುತ್ತಾರೆ.

2022ರ ಕೆಲವು ಅತ್ಯುತ್ತಮ ಫೋಟೊ ಎಡಿಟಿಂಗ್ ಆಪ್ಸ್‌ ಲಿಸ್ಟ್‌ ಇಲ್ಲಿದೆ!

ಪ್ರಸ್ತುತ ಅನೇಕ ಫೋಟೊ ಎಡಿಟಿಂಗ್‌ ಅಪ್ಲಿಕೇಶನ್ ಗಳು ಬೇಸಿಕ್ ಎಡಿಟಿಂಗ್ ಫೀಚರ್ಸ್‌ಗಳಾದ ಕ್ರಾಪ್‌, ಬ್ಲರ್‌, ಕಲರ್‌, ಬ್ರೈಟ್ನೆಸ್‌ ಆಯ್ಕೆಗಳನ್ನು ಒಳಗೊಂಡಿರುತ್ತವೆ. ಇದರೊಂದಿಗೆ ಕೆಲವು ಆಪ್‌ಗಳು ನೂತನ ಎಡಿಟಿಂಗ್ ಫೀಚರ್ಸ್‌ಗಳನ್ನು ಹೊಂದಿವೆ. ಈ ಆಯ್ಕೆಗಳ ಮೂಲಕ ಬಳಕೆದಾರರು ಸರಳವಾಗಿ ಫೋಟೋಗಳನ್ನು ಎಡಿಟ್‌ ಮಾಡಬಹುದಾಗಿದೆ. ಹಾಗಾದರೇ 2022ರ ಕೆಲವು ಬೆಸ್ಟ್‌ ಫೋಟೊ ಎಡಿಟಿಂಗ್ ಆಪ್‌ಗಳ ಯಾವುವು ಹಾಗೂ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ನೋಡೋಣ ಬನ್ನಿರಿ.

ಪಿಕ್ಸ್ಲರ್‌ ಆಪ್‌
ಬೆಸ್ಟ್ ಫೋಟೋ ಎಡಿಟಿಂಗ್ ಆಪ್‌ ಆಗಿದ್ದು, 2 ಮಿಲಿಯನ್ ಉಚಿತ ಎಫೆಕ್ಟ್ಸ್‌ಗಳ, ಫೀಲ್ಟರ್ಸ್‌ ಸಹ ದೊರೆಯಲಿದೆ. ಕೋಲಾಜ್‌ ಮಾಡಲು ಹಲವು ಲೈನ್‌ಔಟ್‌ ಮಾದರಿಗಳು ಮತ್ತು ಬ್ಯಾಕ್‌ಗ್ರೌಂಡ್‌ ಲಭ್ಯವಿದ್ದು, ಸುಮಾರು 25 ಫೋಟೋಗಳನ್ನು ಕೋಲಾಜ್‌ಗೆ ಬಳಸಿಕೊಳ್ಳುವ ಆಯ್ಕೆ ಇದೆ. ಫೋಟೋ ಆಟೋ ಬ್ಯಾಲೆನ್ಸ್‌ ಆಯ್ಕೆಗಳನ್ನು ಹೊಂದಿದ್ದು, ಶೇರ್‌ ಮಾಡುವ ಆಯ್ಕೆಗಳು ಇವೆ.

2022ರ ಕೆಲವು ಅತ್ಯುತ್ತಮ ಫೋಟೊ ಎಡಿಟಿಂಗ್ ಆಪ್ಸ್‌ ಲಿಸ್ಟ್‌ ಇಲ್ಲಿದೆ!

ಸ್ನ್ಯಾಪ್‌ಸೀಡ್‌ ಆಪ್‌
ಸ್ನ್ಯಾಪ್‌ಸೀಡ್‌ ಆಪ್‌ ಅನ್ನು ಗೂಗಲ್ ಅಭಿವೃದ್ಧಿ ಪಡಿಸಿದ್ದು, ಆಂಡ್ರಾಯ್ಡ್‌ ಮಾದರಿಯಲ್ಲಿ ಅತ್ಯುತ್ತಮ ಫೋಟೋ ಎಡಿಟಿಂಗ್ ಆಪ್‌ ಎಂದು ಗುರುತಿಸಿಕೊಂಡಿದೆ. ಸ್ಕ್ರೀನ್‌ ಟ್ಯಾಪ್‌ ಮಾಡುವ ಮೂಲಕ ಗ್ಯಾಲರಿಯಿಂದ ಎಡಿಟಿಂಗ್‌ಗೆ ಫೋಟೋ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, 29 ಎಡಿಟಿಂಗ್ ಟೂಲ್ಸ್‌ಗಳನ್ನು ಒಳಗೊಂಡಿದೆ. ಎಡಿಟ್‌ ಮಾಡಿದ ಫೋಟೋಗಳನ್ನು ಗ್ಯಾಲರಿಗೆ ಸೇವ್‌ ಮಾಡಬಹುದು ಮತ್ತು ಸಾಮಾಜಿಕ ತಾಣಗಳಿಗೆ ನೇರವಾಗಿ ಶೇರ್‌ ಸಹ ಮಾಡಬಹುದಾಗಿದೆ.

ಅಡೊಬ್ ಲೈಟ್‌ರೂಮ್‌ ಆಪ್‌
ಅಡೊಬ್ ಲೈಟ್‌ರೂಮ್‌ ಫೋಟೊ ಎಡಿಟರ್ ಆಪ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈ ಆಪ್‌ ನೂತನ ಎಡಿಟಿಂಗ್ ಆಯ್ಕೆಗಳ ಜೊತೆಗೆ ಬೇಸಿಕ್ ಆಯ್ಕೆಗಳನ್ನು ಹೊಂದಿದೆ.

2022ರ ಕೆಲವು ಅತ್ಯುತ್ತಮ ಫೋಟೊ ಎಡಿಟಿಂಗ್ ಆಪ್ಸ್‌ ಲಿಸ್ಟ್‌ ಇಲ್ಲಿದೆ!

ಫೋಟೊ ಗ್ರೀಡ್‌ ಅಪ್ಲಿಕೇಶನ್‌
ಈ ಅಪ್ಲಿಕೇಶನ್‌ನಲ್ಲಿ ನೀವು 20,000 ಕ್ಕೂ ಹೆಚ್ಚು ಕೊಲಾಜ್ ಟೆಂಪ್ಲೆಟ್ಗಳನ್ನು ಕಾಣಬಹುದು, ಆದರೂ ಅವುಗಳಲ್ಲಿ ಬೆರಳೆಣಿಕೆ ಯಷ್ಟು ಮಾತ್ರ ಉಚಿತ ಎಂದು ಗಮನಿಸಿ. 100 ಕ್ಕೂ ಹೆಚ್ಚು ಬಣ್ಣ ಆಯ್ಕೆಗಳೊಂದಿಗೆ 1,000 ಕ್ಕೂ ಹೆಚ್ಚು ಪಠ್ಯ ಶೈಲಿಗಳು ಮತ್ತು ಫಾಂಟ್‌ಗಳನ್ನು ಈ ಆಪ್‌ ನಲ್ಲಿ ಸೇರಿಸಲಾಗಿದೆ.

ಫೋಟರ್ ಆಪ್‌
ಫೋಟರ್‌ ನಲ್ಲಿ 200 ಕ್ಕೂ ಹೆಚ್ಚು ಸ್ಟಿಕ್ಕರ್‌ ಗಳು ಲಭ್ಯವಿದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ವೈಯಕ್ತಿಕಗೊಳಿಸಿದ ಕೊಲಾಜ್‌ಗಳನ್ನು ಮಾಡಬಹುದು, ಆದರೆ ಕೆಲವು ವೃತ್ತಿಪರ ಫೋಟೋ ಎಡಿಟಿಂಗ್ ಪರಿಕರಗಳನ್ನು ಸಹ ಸೇರಿಸಲಾಗಿದೆ. ನೀವು ವಿಷಯಗಳನ್ನು ಸರಳವಾಗಿಡಲು ಬಯಸಿದರೆ ಒಂದು ಕ್ಲಿಕ್ ವರ್ಧನೆಗಳು ಪ್ಯಾಕೇಜಿನ ಒಂದು ಭಾಗವಾಗಿದೆ.

ಫೋಟೊ ಎಡಿಟರ್ ಪ್ರೊ ಅಪ್ಲಿಕೇಶನ್‌
ಈ ಅಪ್ಲಿಕೇಶನ್‌ನಲ್ಲಿ 100 ಕ್ಕೂ ಹೆಚ್ಚು ಫಿಲ್ಟರ್‌ಗಳು ಲಭ್ಯವಿದೆ. ಲೋಮೋ, ಪಿಂಕ್, ವಿಗ್ನೆಟ್, ನ್ಯಾಚುರಲ್, ವಾರ್ಮ್, ಡ್ಯೂ. ಮತ್ತು ಇನ್ನೂ ಅನೇಕ ಆಯ್ಕೆಗಳನ್ನು ಸೇರಿಸಲಾಗಿದೆ. ಅದರ ಮೇಲೆ, ನೀವು ಇಲ್ಲಿ ಕೆಲವು ಗ್ಲಿಚ್ ಪರಿಣಾಮಗಳನ್ನು ಪ್ರವೇಶಿಸಬಹುದು, ಮತ್ತು ಪರವಾಗಿ ನಿಮ್ಮ ಚಿತ್ರಗಳ ಹಿನ್ನೆಲೆಯನ್ನು ಸಹ ನೀಲಿ ಮಾಡಬಹುದು.

Best Mobiles in India

English summary
Few Best Mobile Photo Editing Apps for 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+