ಯಾವುದಕ್ಕೂ ಸರ್ಕಾರದ ಈ ಆಪ್ಸ್‌ಗಳು ನಿಮ್ಮ ಫೋನಿನಲ್ಲಿ ಇರಲಿ!

|

ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್‌ ಆಗಿದ್ದು, ಫೋನ್ ಮೂಲಕವೇ ಇಂದಿನ ಬಹುತೇಕ ಎಲ್ಲ ಕೆಲಸಗಳನ್ನು ನಿರ್ವಹಿಸುವಂತಾಗಿದೆ. ಸರ್ಕಾರ ಸಹ ಡಿಜಿಟಲ್ ಇಂಡಿಯಾಗೆ ಪರಿಕಲ್ಪನೆಯನ್ನು ಸೂಚಿಸಿದೆ. ಈ ನಿಟ್ಟಿನಲ್ಲಿ ಪ್ರತಿ ಅಗತ್ಯ ಕೆಲಸಕ್ಕೂ ಹಲವು ಅಪ್ಲಿಕೇಶನ್‌ಗಳ ಲಭ್ಯವಾಗಿವೆ. ಅದೇ ರೀತಿ ಅಗತ್ಯ ಸರ್ಕಾರಿ ಸೇವೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪುವಲ್ಲಿ ಸರ್ಕಾರದ ಕೆಲವು ಆಪ್ಸ್‌ಗಳು ಪೂರಕವಾಗಿವೆ.

ಡಿಜಿಟಲ್ ಇಂಡಿಯಾ

ಹೌದು, ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ಸರ್ಕಾರ ನಾಗರೀಕರಿಗಾಗಿ ಹಲವು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ನಾಗರಿಕರು ಮೊಬೈಲ್ ಆಪ್‌ಗಳ ಮೂಲಕವೇ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರು, ರೈತರು, ಶಿಕ್ಷಕರು ಹೀಗೆ ವಿವಿಧ ವರ್ಗಗಳ ಜನರಿಗೂ ಅನುಕೂಲವಾಗಲು ಪ್ರತ್ಯೇಕ ಅಪ್ಲಿಕೇಶನ್‌ ಅನ್ನು ಸರ್ಕಾರ ರೂಪಿಸಿದೆ. ಈ ರೀತಿ ಪ್ರತಿಯೊಬ್ಬರ ಫೋನಿನಲ್ಲಿ ಅಗತ್ಯವಾಗಿ ಇರಬೇಕಾದ ಕೆಲವು ಸರ್ಕಾರಿ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಎಂಪರಿವಾಹನ-mParivahan

ಎಂಪರಿವಾಹನ-mParivahan

ಪ್ರತಿಯೊಬ್ಬ ವಾಹನ ಚಾಲಕರಿಗೂ ಈ ಆಪ್ ಉಪಯುಕ್ತವಾಗಿದೆ. ಚಾಲನಾ ಪರವಾನಗಿಯ ಪ್ರತಿ, ವಾಹನ ನೋಂದಣಿ ಪ್ರಮಾಣ ಪತ್ರಗಳ ಡಿಜಿಟಲ್ ಪ್ರತಿಯನ್ನು ಈ ಆಪ್‌ನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಟ್ರಾಫಿಕ್ ಪೊಲೀಸ್‌ರು ತಪಾಸಣೆಗೆ ತಡೆದಾಗ ಈ ಆಪ್‌ನಲ್ಲಿನ ಡಿಜಿಟಲ್ ದಾಖಲೆಗಳನ್ನು ತೋರಿಸಬಹುದಾಗಿದೆ.

ಕೃಷಿ ಕಿಸಾನ್-Krishi Kisan

ಕೃಷಿ ಕಿಸಾನ್-Krishi Kisan

ಕೃಷಿ ಕಿಸಾನ್ ಆಪ್ ರೈತರಿಗಾಗಿ ರೂಪಿಸಲಾಗಿದೆ. ಈ ಆಪ್‌ನಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಬಗ್ಗೆ, ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹಾಗೆಯೇ ರೈತರಿಗೆ ಬೆಳೆಗಳ ಬಗ್ಗೆ, ಬೀಜ ಬಿತ್ತುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜಿಯೋ-ಫೆನ್ಸಿಂಗ್ ಹಾಗೂ ಜಿಯೋ ಟ್ಯಾಗಿಂಗ್ ಕುರಿತಾಗಿಯು ಅಗತ್ಯ ನೆರವು ನೀಡಲಿದೆ.

ಖೇಲೋ ಇಂಡಿಯಾ-Khelo India

ಖೇಲೋ ಇಂಡಿಯಾ-Khelo India

ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಸಕ್ತರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಕ್ರೀಡೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಈ ಆಪ್‌ ಒದಗಿಸುತ್ತದೆ. ಹಾಗೂ ಬಳಕೆದಾರರ ಲೊಕೇಶನ್‌ ಹತ್ತಿರದಲ್ಲಿ ಕ್ರೀಡೆಗೆ ಅಗತ್ಯ ಇರುವ ಕ್ರೀಡಾಂಗಣದ ಬಗ್ಗೆ ಮಾಹಿತಿ ನೀಡುತ್ತದೆ. ಇದರೊಂದಿಗೆ ಫಿಟ್ನೆಸ್ ಬಗ್ಗೆಯು ಅಗತ್ಯ ಮಾಹಿತಿ ಸೂಚಿಸುತ್ತದೆ.

ಕನ್ಸೂಮರ್ ಆಪ್-Consumer app

ಕನ್ಸೂಮರ್ ಆಪ್-Consumer app

ಕನ್ಸೂಮರ್ ಆಪ್ ಒಂದು ಗ್ರಾಹಕ ಸ್ನೇಹಿ ಆಪ್ ಆಗಿದ್ದು, ಈ ಆಪ್‌ನಲ್ಲಿ ಗ್ರಾಹಕರು ಅವರ ಕುಂದು ಕೊರತೆಗಳನ್ನು ಹಾಗೂ ತೊಂದರೇ ಆಗಿದ್ದರೇ ಆ ಬಗ್ಗೆ ದೂರು ಸಲ್ಲಿಸಬಹುದಾಗಿದೆ. ಹಿಂದಿ ಮತ್ತು ಇಂಗ್ಲಿಷ ಭಾಷೆಗಳ ಬೆಂಬಲ ಪಡೆದಿರುವ ಈ ಆಪ್‌ ಸುಮಾರು 60 ದಿನಗಳಲ್ಲಿ ಗ್ರಾಹಕರ ಕಂಪ್ಲೈಂಟ್ ಕ್ಲಿಯರ್ ಮಾಡುವ ವ್ಯವಸ್ಥೆಯನ್ನು ಹೊಂದಿದೆ.

ಇ-ಪಾಠಶಾಲಾ-ePathshala

ಇ-ಪಾಠಶಾಲಾ-ePathshala

ಇ-ಪಾಠಶಾಲಾ ಆಪ್‌ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಬಹಳ ಉಪಯುಕ್ತವಾಗಿದೆ. ಬಳಕೆದಾರರು ಮೊಬೈಲ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಈ ಆಪ್‌ ಅನ್ನು ತೆರೆಯಬಹುದಾದ ಆಯ್ಕೆ ಇದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸುಲಭವಾಗಿ ಇ-ಪುಸ್ತಕಗಳನ್ನು ಆಕ್ಸಸ್ ಮಾಡಲು ಈ ಆಪ್ ಉತ್ತಮ ಪ್ಲಾಟ್‌ಫಾರ್ಮ್‌ ಒದಗಿಸಿದೆ.

ಸಿವಿಜಿಲ್-cVigil

ಸಿವಿಜಿಲ್-cVigil

ಸಿವಿಜಿಲ್ ಆಪ್ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದಾಗಿದೆ. ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದರೇ, ನಾಗರೀಕರು ಆ ಬಗ್ಗೆ ಈ ಆಪ್‌ ಮೂಲಕ ಅಧಿಕಾರಿಗಳ ಗಮನಕ್ಕೆ ತರಬಹುದು.

ಮೈಗೋವ್-MyGov

ಮೈಗೋವ್-MyGov

ಈ ಆಪ್ ಸರ್ಕಾರದ ಕೆಲಸಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಬಿಡುಗಡೆಯಾಗಿದೆ. ಬಳಕೆದಾರರು ವಿವಿಧ ಮಂತ್ರಾಲಯಗಳಿಗೆ ಮತ್ತು ಸಹಭಾಗಿತ್ವದ ಸಂಸ್ಥೆಗಳಿಗೆ ಹೊಸ ಐಡಿಯಾಗಳನ್ನು, ಕಮೆಂಟ್ , ಸಲಹೆಗಳನ್ನು ನೀಡಬಹುದಾಗಿದೆ. ಅದಲ್ಲದೇ ಹೊಸ ಯೋಜನೆಯ ಅಥವಾ ಕಾಯ್ದೆಯ ರೂಪಿಸುವಲ್ಲಿ ನೇರವಾಗಿ ಭಾಗವಹಿಸಬಹುದು.

ಮೈ ಸ್ಪೀಡ್-MySpeed (TRAI)

ಮೈ ಸ್ಪೀಡ್-MySpeed (TRAI)

ಮೈ ಸ್ಪೀಡ್ ಆಪ್‌ ಡೇಟಾ ವೇಗವನ್ನು ಮಾಹಿತಿಯನ್ನು ಟ್ರಾಯ್‌ಗೆ ನೀಡುತ್ತದೆ. ಬಳಕೆದಾರರ ಡಿವೈಸ್ ಮತ್ತು ಲೊಕೇಶನ್ ವಿವರ ಸೇರಿ ಡೇಟಾ ವೇಗ ಮತ್ತು ನೆಟ್‌ವರ್ಕ್‌ ಮಾಹಿತಿಯನ್ನು ಟ್ರಾಯ್‌ಗೆ ನೀಡುತ್ತದೆ. ಆದರೆ, ಈ ಆಪ್ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡುವುದಿಲ್ಲ.

Best Mobiles in India

English summary
Here we list out few government apps that one should download.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X