ಈ ಆಪ್‌ ಇದ್ದರೆ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ತಿಳಿಯಬಹುದು.!!

Written By:

ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಆ ಜಾಗದಲ್ಲಿ ಸಿಗಬಹುದಾದ ಸೌಕರ್ಯಗಳೇನು ಎಂಬುದನ್ನು ಯಾರಾನ್ನಾದರೂ ಕೇಳಿ ತಿಳಿಯಬೇಕಾಗುತ್ತದೆ. ಆದರೆ, ಒಂದೇ ಒಂದು ಆಪ್‌ ಮೂಲಕ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ತಿಳಿದುಕೊಂಡರೆ ಹೇಗಿರುತ್ತದೆ.!?

ಅಂತಹದೇ ಒಂದು ಗೂಗಲ್‌ ಮ್ಯಾಪ್‌ಗಿಂತಲೂ ವಿಭಿನ್ನವಾದ ಆಪ್ ನಮಗೆ ಲಭ್ಯವಿದೆ. ಆ ಆಪ್ ನೀವು ಎಲ್ಲಿದ್ದೀರಿ ಎಂಬುದನ್ನು ಪತ್ತೆ ಹಚ್ಚಿ, ನೀವಿರುವ ಸ್ಥಳದ ಸುತ್ತ ಏನೆಲ್ಲ ಸೌಲಭ್ಯಗಳಿವೆ ಎಂಬ ಮಾಹಿತಿಯನ್ನು ಒದಗಿಸುತ್ತದೆ. ಅದರ ಹೆಸರೇ "ಅರೌಂಡ್ ಮಿ"(Around me)

ಈ ಆಪ್‌ ಇದ್ದರೆ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ತಿಳಿಯಬಹುದು.!!

ನಿಮ್ಮ ಸಮೀಪದ ಬ್ಯಾಂಕ್‌, ಪೆಟ್ರೋಲ್ ಬಂಕ್ , ಸಿನಿಮಾ ಥಿಯೇಟರ್‌ಆಸ್ಪತ್ರೆ, ಹೋಟೆಲ್‌, ಸೂಪರ್‌ ಮಾರ್ಕೆಟ್, ಟ್ಯಾಕ್ಸಿ ಕೊನೆಗೆ ಬಾರ್ ಎಲ್ಲಿದೆ ಎಂಬುದರ ಮಾಹಿತಿಯನ್ನು ಈ ಅರೌಂಡ್‌ಮಿ ಎಂಬ ಆಪ್ ನಿಮಗೆ ನೀಡುತ್ತದೆ. ಹಾಗಾಗಿ, ಈ ಮಾಹಿತಿಯನ್ನು ಬಳಸಿಕೊಂಡು ನೀವು ನಿಮ್ಮ ಅಗತ್ಯಗಳನ್ನು ಬಹುಬೇಗ ಪೂರೈಸಿಕೊಳ್ಳಬಹುದು .

ಈ ಆಪ್‌ ಇದ್ದರೆ ನಿಮ್ಮ ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ತಿಳಿಯಬಹುದು.!!

ಇನ್ನು ನೀವು ಪ್ರಯಾಣಿಸುವಾಗ ಅಥವಾ ಅಪರಿಚಿತ ನಗರಗಳಿಗೆ ಹೋದಾಗಲಂತೂ ಈ ಆಪ್‌ ಅತ್ಯಂತ ಉಪಕಾರಿಯಾಗಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅರೌಂಡ್ ಮಿ"(Around me)ಎಂದು ಸರ್ಚ್ ಮಾಡಿ ಉಪಯೋಗಕರವಾದ ಆಪ್‌ ಅನ್ನು ಡೌನ್‌ಲೋಡ್ ಮಾಡಿ.!!

ಓದಿರಿ: 300 ಗ್ರಾಮ್ ತೂಕದ ಈ ಪ್ರೊಜೆಕ್ಟರ್ ಇದ್ದರೆ ಮನೆಯೇ ಮಲ್ಟಿಪ್ಲೆಕ್ಸ್!!Read more about:
English summary
find nearby places by using around me app.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot