300 ಗ್ರಾಮ್ ತೂಕದ ಈ ಪ್ರೊಜೆಕ್ಟರ್ ಇದ್ದರೆ ಮನೆಯೇ ಮಲ್ಟಿಪ್ಲೆಕ್ಸ್!!

ಮನೆಯಲ್ಲಿಯೇ ಕುಳಿತು ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?

|

ಮಲ್ಟಿಪ್ಲೆಕ್ಸ್‌ಗಳಲ್ಲಿ ಕುಳಿತು ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?.ಅಂತಹದೇ ಅನುಭವವನ್ನು ಮನೆಯಲ್ಲಿಯೇ ಪಡೆದರೆ ಹೇಗಿರುತ್ತದೆ.!? ಹೌದು, ಇಂತಹದೊಂದು ಕನಸನ್ನು ನನಸು ಮಾಡಲು ಬಂದತಹ ಎಲೆಕ್ಟ್ರಾನಿಕ್ ಸಾಧನವೇ ಪ್ರೊಜೆಕ್ಟರ್.!!

ಮೊಬೈಲ್, ಟ್ಯಾಬ್ಲೆಟ್, ಸೆಟ್‌ಟಾಪ್ ಬಾಕ್ಸ್ ಯಾವುದೇ ಸಾಧನಗಳನ್ನೂ ಸುಲಭವಾಗಿ ಸಂಪರ್ಕಿಸಬಹುದಾದ ಪ್ರೊಜೆಕ್ಟರ್‌ಗಳನ್ನು ಖರೀದಿಸಿ ನಾವು ಮನೆಯಲ್ಲಿಯೇ ಮಲ್ಟಿಪ್ಲೆಕ್ಸ್ ನಿರ್ಮಿಸಿಕೊಳ್ಳಬಹುದು.! ಅದರಲ್ಲಿಯೂ ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ಹೊಸ ಏಸುಸ್ ಪ್ರೊಜೆಕ್ಟರ್ ಥಿಯೇಟರ್‌ ಅನುಭವವನ್ನು ನೀಡುತ್ತವೆ.!!

ಅತ್ಯುತ್ತಮ ಎಲ್​ಇಡಿ ಲೈಟ್‌ಗಳು ಮತ್ತು ಅತ್ಯುತ್ತಮ ಬ್ಯಾಟರಿ ಗುಣಮಟ್ಟ ಹೊಂದಿರುವ ನೂತನ ಪ್ರೊಜೆಕ್ಟರ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಾಗಾದರೆ, ಆ ಪ್ರೊಜೆಕ್ಟರ್ ಯಾವುದು? ಏನೆಲ್ಲಾ ವಿಶೇಷತೆ ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

’ಜೆನ್​ಬೀಮ್ ಗೋ ಇ1ಜೆಡ್ ಪ್ರೊಜೆಕ್ಟರ್.!! (ASUS ZenBeam Go E1Z)

’ಜೆನ್​ಬೀಮ್ ಗೋ ಇ1ಜೆಡ್ ಪ್ರೊಜೆಕ್ಟರ್.!! (ASUS ZenBeam Go E1Z)

ಏಸುಸ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ 'ಜೆನ್​ಬೀಮ್ ಗೋ ಇ1ಜೆಡ್' ಥಿಯೇಟರ್‌ ಅನುಭವವನ್ನು ನೀಡುವ ಪ್ರೊಜೆಕ್ಟರ್ ಆಗಿದೆ.!! ಮೊಬೈಲ್ ಜೊತೆಗೆ ಸರಾಗವಾಗಿ ಬಳಸಬಹುದಾದ ಈ ಪ್ರೊಜೆಕ್ಟರ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರಿ ವಿಶೆಷತೆಗಳನ್ನು ಹೊಂದಿದೆ.!!

ಕಡಿಮೆ ಗಾತ್ರ ಹೊಂದಿದೆ ಇ1ಜೆಡ್ ಪ್ರೊಜೆಕ್ಟರ್!!

ಕಡಿಮೆ ಗಾತ್ರ ಹೊಂದಿದೆ ಇ1ಜೆಡ್ ಪ್ರೊಜೆಕ್ಟರ್!!

ಸಾಮಾನ್ಯ ಪ್ರೊಜೆಕ್ಟರುಗಳ ಹೋಲಿಕೆಯಲ್ಲಿ ಇ1ಜೆಡ್ ಪ್ರೊಜೆಕ್ಟರ್ ಅನೇಕ ಪಟ್ಟು ಕಡಿಮೆ ಗಾತ್ರ ಹೊಂದಿದೆ. ಎಲ್ಲಿ ಬೇಕಾದರೂ ಕ್ಯಾರಿ ಮಾಡಬಹುದಾದ ಪ್ರೊಜೆಕ್ಟರ್ ಇದಾಗಿದ್ದು, ಸುಮಾರು 300 ಗ್ರಾಮ್ ಈ ಪ್ರೊಜೆಕ್ಟರಿಗೆ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್​ಗಳನ್ನು ಯುಎಸ್​ಬಿ ಮೂಲಕ ಸುಲಭವಾಗಿ ಸಂರ್ಪಸಬಹುದು.

120 ಇಂಚಿನಷ್ಟು ದೊಡ್ಡ ಗಾತ್ರದಲ್ಲಿ ಚಿತ್ರ!!

120 ಇಂಚಿನಷ್ಟು ದೊಡ್ಡ ಗಾತ್ರದಲ್ಲಿ ಚಿತ್ರ!!

'ಜೆನ್​ಬೀಮ್ ಗೋ ಇ1ಜೆಡ್' ಪ್ರೊಜೆಕ್ಟರ್ ಮೂಲಕ 4 ಮೀಟರ್ ದೂರದಿಂದ 120 ಇಂಚಿನಷ್ಟು ದೊಡ್ಡ ಗಾತ್ರದಲ್ಲಿ ಚಿತ್ರ ನೋಡಬಹುದಾಗಿದ್ದು, ಚಿತ್ರದ ಗುಣಮಟ್ಟ ಕೂಡ ಉತ್ತಮವಾಗಿಯೇ ಇದೆ. ಇನ್ನು 6000 ಎಂಎಎಚ್ ಬ್ಯಾಟರಿ ಕೂಡ ಪ್ರೊಜೆಕ್ಟರ್‌ನಲ್ಲಿ ಲಭ್ಯವಿದೆ.!!

ಸ್ಪೀಕರ್,ಮೊಬೈಲ್ ಚಾರ್ಜ್!!

ಸ್ಪೀಕರ್,ಮೊಬೈಲ್ ಚಾರ್ಜ್!!

ಏಸುಸ್‌ನ ಈ ಪ್ರೊಜೆಕ್ಟರ್ ಅತ್ಯುತ್ತಮ ಎನ್ನಲು ಹಲವು ಕಾರಣಗಳಲ್ಲಿ ಸ್ಪೀಕರ್ ಮತ್ತು ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದಾದ ಆಯ್ಕೆಯೂ ಕೂಡ ಒಂದು.!! ಪವರ್‌ಬ್ಯಾಂಕ್ ರೀತಿಯಲ್ಲಿಯೂ ಉಪಯೋಗಿಸಬಹುದಾದ ಈ ಪ್ರೊಜೆ ಹಲವು ಕಾರ್ಯಗಳನ್ನು ಪೂರೈಸುತ್ತದೆ.!!

ಬೆಲೆ ಮಾತ್ರ ಹೆಚ್ಚು.!!

ಬೆಲೆ ಮಾತ್ರ ಹೆಚ್ಚು.!!

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಪ್ರೊಜೆಕ್ಟರ್ ಬೆಲೆ ಮಾತ್ರ ಗಗನದಲ್ಲಿದ್ದು, 18 ಸಾವಿರ ರೂಪಾಯಿಗಳಿಗೆ ಆನ್‌ಲೈನ್‌ನಲ್ಲಿ ಈ ಪ್ರೊಜೆಕ್ಟರ್ ಲಭ್ಯವಿದೆ.!! ಗುಣಮಟ್ಟದಲ್ಲಿ ಹೆಚ್ಚು ಹೆಸರಾಗಿರುವ ಏಸುಸ್ ಕಂಪೆನಿಯ ಅತ್ಯಾಧುನಿಕ ಪ್ರಾಡೆಕ್ಟ್‌ಗಳಲ್ಲಿ ಇದು ಕೂಡ ಒಂದು.!!

ಓದಿರಿ:ಹೊಸ ಜಿಯೋ ಸಿಮ್​ ಖರೀದಿಸಿದರೆ ಭಾರಿ ಆಫರ್...ಮತ್ತೆ ಕ್ಯಾಶ್‌ಬ್ಯಾಕ್!!

Best Mobiles in India

Read more about:
English summary
ASUS ZenBeam Go E1Z review Pricey, portable and oh so desirable

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X