Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸಪ್‌ನ ಈ 5 ಕುತೂಹಲಕಾರಿ ಫೀಚರ್ಸ್‌ಗಳ ಬಗ್ಗೆ ನೀವು ತಿಳಿಯಲೇಬೇಕು!
ವಿಶ್ವದಲ್ಲಿಯೇ ಅತೀ ಹೆಚ್ಚು ಬಳಕೆಯಲ್ಲಿರುವ 'ವಾಟ್ಸಪ್' ಮೆಸೆಜಿಂಗ್ ಆಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರಿಗಾಗಿ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಪ್ ಇತ್ತೀಚಿಗೆ ಮತ್ತೆ ಕೆಲವು ನೂತನ ಕುತೂಹಲಕಾರಿ ಫೀಚರ್ಸ್‌ಗಳನ್ನು ಅಳವಡಿಸಿದೆ. ಅವುಗಳು ಬಳಕೆದಾರರ ಚಾಟಿಂಗ್‌ಗೆ ಮತ್ತು ಪ್ರೈವೆಸಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತವೆ.

ಹೌದು, ಫೇಸ್‌ಬುಕ್ ಒಡೆತನದ ವಾಟ್ಸಪ್ ಮೆಸೆಜ್ ಅಪ್ಲಿಕೇಶನ್ ಇತ್ತೀಚಿಗೆ ಕೆಲವು ಮಹತ್ತರ ಫೀಚರ್ಸ್‌ಗಳನ್ನು ತನ್ನ ಅಪ್‌ಡೇಟ್ ವರ್ಷನ್‌ಗಳಲ್ಲಿ ಸೇರಿಸಿಕೊಂಡಿದೆ. ಅವುಗಳಲ್ಲಿ ಡಾರ್ಕ್ ಮೋಡ್, ಫಿಂಗರ್‌ಪ್ರಿಂಟ್ ಲಾಕ್ ಮತ್ತು ವಾಟ್ಸಪ್ ಪೇಮೆಂಟ್ ಆಯ್ಕೆಗಳು ಬಹುನಿರೀಕ್ಷಿತವಾಗಿವೆ. ಇವುಗಳೊಂದಿಗೆ ಇನ್ನು ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಅನುಕೂಲಕರವಾಗಿವೆ. ಹಾಗಾದರೇ ಭಾರೀ ಗಮನ ಸೆಳೆದಿರುವ ವಾಟ್ಸಪ್ ಆಪ್‌ನ ಪ್ರಮುಖ 5 ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಾಟ್ಸಪ್ ಪೇ
ವಾಟ್ಸಾಪ್ ಪೇ ಬಹುನಿರೀಕ್ಷಿತ ಫೀಚರ್ ಆಗಿದ್ದು, ಈಗಾಗಲೇ ವಾಟ್ಸಪ್ ಬೇಟಾ ವರ್ಷನ್‌ನಲ್ಲಿ ಲಭ್ಯವಿದೆ. ಪ್ರಾಯೋಗಿಕ ಹಂತದಲ್ಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ವಾಟ್ಸಪ್ ಬಳಕೆದಾರರಿಗೆ ಮುಕ್ತವಾಗಲಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ ಮತ್ತು ಪೇಮೆಂಟ್ಸ್‌ಗಳನ್ನು ಸಹ ಭರ್ತಿ ಮಾಡಬಹುದಾಗಿದೆ. UPI ಆಧಾರದಲ್ಲಿ ಈ ಸೇವೆಯು ಕಾರ್ಯನಿರ್ವಹಿಸಲಿದೆ.

ಬೂಮರಾಂಗ್ ವಿಡಿಯೊ
ವಾಟ್ಸಾಪ್ ಹೊಸದಾಗಿ ಬೂಮರಾಂಗ್ ವಿಡಿಯೊಗಳು ಆಯ್ಕೆಯನ್ನು ವಾಟ್ಸಪ್ ಪರಿಚಯಿಸಲಿದೆ. ಈ ಆಯ್ಕೆಯು ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯತೆ ಹೊಂದಿದೆ. ಇದರಲ್ಲಿ ವಿಡಿಯೊಗಳನ್ನು GIF ಗೆ ಕನ್ವರ್ಟ್ ಮಾಡಬಹುದಾಗಿದ್ದು, ಬಳಕೆದಾರರು ಸ್ವಂತ ವಿಡಿಯೊಗಳನ್ನು ಕ್ರಿಯೆಟ್ ಮಾಡಬಹುದಾಗಿದೆ. ಈ ಫೀಚರ್ಸ ವಾಟ್ಸಪ್‌ಗೆ ಹೊಸ ಆಕರ್ಷಕ ಟಚ್ ನೀಡಲಿದೆ.

ಡಾರ್ಕ್ ಮೋಡ್
ಪ್ರಸ್ತುತ ಡಾರ್ಕ್ ಮೋಡ್ ಫೀಚರ್ ಹೆಚ್ಚು ಬೇಡಿಕೆಯಲ್ಲಿದೆ. ಈ ಆಯ್ಕೆಯು ವಾಟ್ಸಪ್ ಸೇರಲಿದ್ದು, ಬಳಕೆದಾರರಿಗೆ ರಾತ್ರಿ ಸಮಯದಲ್ಲಿ ಕಣ್ಣುಗಳಿಗೆ ಹೆಚ್ಚಿನ ಪ್ರಖರತೆ ಬೀಳದಂತೆ ತಡೆಯುತ್ತದೆ. ಸಾಮಾನ್ಯವಾಗಿ ಬಳಕೆದಾರರು ರಾತ್ರಿ ಸಮಯದಲ್ಲಿ ವಾಟ್ಸಪ್ ಬಳಕೆಯು ಹೆಚ್ಚಾಗಿ ಮಾಡುತ್ತಾರೆ. ಡಾರ್ಕ್ ಮೋಡ್ ಆಯ್ಕೆಯು ಡಿಸ್‌ಪ್ಲೇ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿ ಕಣ್ಣಿಗೆ ಒತ್ತಡ ಬೀಳದಂತೆ ಇರಲಿದೆ.

ರೀಡ್ ರಿಸಿಪ್ಟ್ ಹೈಡ್
ಬಹುತೇಕ ವಾಟ್ಸಪ್ ಬಳಕೆದಾರರಿಗೆ ಇನ್ನು ತಿಳಿದಿರದ ಫೀಚರ್ ಇದಾಗಿದ್ದು, ಈ ರೀಡ್ ರಿಸಿಪ್ಟ್ ಹೈಡ್ ಆಯ್ಕೆ ಬಳಸಿ ಬಳಕೆದಾರರು ಮೆಸೆಜ್ ಓದಿರುವ ಗುರುತನ್ನು ಕಾಣದಂತೆ ಮಾಡಬಹುದಾಗಿದೆ. ವಾಟ್ಸಪ್‌ನಲ್ಲಿ ಬಂದಿರುವ ಮೆಸೆಜ್ ಓದಿದಾಗ ಮೆಸೆಜ್ ಕಳುಹಿಸಿದವರಿಗೆ ನೀವು ಓದಿರುವುದು ತಿಳಿಯುತ್ತದೆ. ಆದರೆ ಈ ರೀಡ್ ರಿಸಿಪ್ಟ್ ಹೈಡ್ ಆಯ್ಕೆ ಆನ್ ಮಾಡುವ ಮೂಲಕ ಅವರಿಗೆ ಕಾಣದಂತೆ ಹೈಡ್ ಮಾಡಬಹುದಾಗಿದೆ. ನೀವು ಮೆಸೆಜ್ ನೋಡಿದರು ಅದು ಅವರಿಗೆ ತಿಳಿಯುವುದಿಲ್ಲ.

ಗ್ರೂಪ್ ಇನ್ವಿಟೇಶನ್
ವಾಟ್ಸಪ್‌ನಲ್ಲಿ ಗ್ರೂಪ್ ರಚನೆಯ ಆಯ್ಕೆ ಇದ್ದು, ಎಷ್ಟಾದರೂ ಗ್ರೂಪ್‌ಗಳನ್ನು ಸೇರಿಕೊಳ್ಳಬಹುದಾಗಿದೆ. ಆದರೆ ಕೆಲವೊಮ್ಮೆ ಅನಗತ್ಯವಾಗಿ ಹೊಸ ಗ್ರೂಪ್‌ಗಳಿಗೆ ಸೇರಿಸುತ್ತಾರೆ ಆಗ ಕಿರಿಕಿರಿ ಎನಿಸುತ್ತವೆ. ಅದಕ್ಕಾಗಿ ವಾಟ್ಸಪ್‌ನಲ್ಲಿ ಗ್ರೂಪ್ ಇನ್ವಿಟೇಶನ್ ಆಯ್ಕೆ ನೀಡಲಾಗಿದ್ದು, ಇದು ಯಾರಾದರೂ ನಿಮ್ಮ ನಂಬರ್ ಅನ್ನು ಗ್ರೂಪ್‌ಗೆ ಸೇರಿಸುವಾಗ ನಿಮ್ಮ ಅನುಮತಿ ಇಲ್ಲದೇ ಸೇರಿಸಲಾಗದು. ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಆನ್ ಮಾಡಿಕೊಳ್ಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470