'ವುಮೆನ್ಸ್ ಡೇ ಸೇಲ್'; ಹೆಚ್ಚು ರಿಯಾಯಿತಿ ಪಡೆದ ಸ್ಮಾರ್ಟ್‌ಫೋನ್‌ಗಳು.!
ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮಾರ್ಚ್ 8 'ವಿಶ್ವ ಮಹಿಳಾ ದಿನಾಚರಣೆ' ಅಂಗವಾಗಿ 'ವುಮೆನ್ಸ್ ಡೇ ಸೇಲ್' ಮೇಳವನ್ನು ಆರಂಭಿಸಿದೆ. ಈ ಮೇಳದಲ್ಲಿ ಪ್ರಮುಖ ಹೈ ಎಂಡ್ ಫೀಚರ್ಸ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಂತೆ, ಗ್ಯಾಜೆಟ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ಕೊಡುಗೆಗಳನ್ನು ದೊರೆಯಲಿವೆ. ಆಯ್ದ ಕೆಲವು ಬ್ಯಾಂಕ್‌ಗಳ ಇನ್‌ಸ್ಟಂಟ್ ಡಿಸ್ಕೌಂಟ್ ಸಹ ಲಭ್ಯವಿರಲಿದೆ.

ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಇಂದಿನಿಂದ (ಮಾ.7) ಆರಂಭವಾಗಿರುವ 'ವುಮೆನ್ಸ್ ಡೇ ಸೇಲ್' ಮೇಳವು ನಾಳೆ (ಮಾ.8) ಮುಕ್ತಾಯವಾಗಲಿದೆ. ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಸೌಂಡ್ ಬಾರ್ ಸ್ಪೀಕರ್, ಲ್ಯಾಪ್‌ಟಾಪ್, ಕ್ಯಾಮೆರಾ ಸೇರಿದಂತೆ ಹಲವು ಗ್ಯಾಜೆಟ್‌ಗಳ ಮೇಲೆ ಭಾರೀ ಡಿಸ್ಕೌಂಟ್ ದೊರೆಯುತ್ತಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಬೆಲೆಯಲ್ಲಿ ಲಭ್ಯ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಪಲ್ XR
ಆಪಲ್ XR ಐಫೋನ್ 828x1792 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.10 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಿಂಬದಿಯಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 7 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಒಳಗೊಂಡಿದೆ. iOS 12 ನೊಂದಿಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಈ ಐಫೋನ್ ಬೆಲೆಯು 76,900ರೂ.ಗಳು ಆಗಿದೆ. ವುಮೇನ್ಸ್ ಡೇ ಆಫರ್ ಬೆಲೆ 67,999ರೂ.ಗಳಾಗಿದೆ.

ವೀವೊ ವಿ9 ಪ್ರೋ
ವೀವೊ ವಿ9 ಪ್ರೋ ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್‌ಪ್ಲೇ ಇದ್ದು, ಈ ಡಿಸ್‌ಪ್ಲೇ 1080x2280 ಪಿಕ್ಸಲ್ ರೆಸಲ್ಯೂಶನ್‌ವನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಅನ್ನು ಒಳಗೊಂಡಿದ್ದು, 6GB RAM ಮತ್ತು 64GB ಸಂಗ್ರಹ ಸ್ಥಳಾವಕಾಶವನ್ನು ಸಹ ಹೊಂದಿದೆ. 13ಮೆಗಾಪಿಕ್ಸಲ್ + 2ಮೆಗಾಪಿಕ್ಸಲ್ ಕ್ಯಾಮೆರಾ ಇದ್ದು, 16ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇದರ ಬೆಲೆಯು 15290ರೂ.ಆಗಿದೆ ಆಫರ್ ಬೆಲೆ 13,990ರೂ.ಗಳು,

ನೋಕಿಯಾ 5.1 ಪ್ಲಸ್
ನೋಕಿಯಾ 5.1 ಪ್ಲಸ್ 5.86 ಇಂಚಿನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಹಿಂಬದಿಯಲ್ಲಿರುವ 2.5D ಗ್ಲಾಸ್ ಫೋನಿಗೆ ಸ್ಟೈಲಿಶ್ ಲಿಕ್ ನೀಡಿದೆ. ಮೀಡಿಯಾ ಟೆಕ್ ಹಿಲಿಯೋ P60 SoC ಪ್ರೊಸೆಸರ್ ಇದ್ದು, 3GB RAM ಮತ್ತು ಆಂತರಿಕ ಸಂಗ್ರಹಕ್ಕೆ 32GB ಸ್ಥಳಾವಕಾಶ ನೀಡಲಾಗಿದೆ. 13 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಹೊಂದಿದೆ. ಇದರ ಬೆಲೆಯು 10100ರೂ.ಗಳಾಗಿದ್ದು, ಆಫರ್ ಬೆಲೆಯು 8,999ರೂ ಆಗಿದೆ.

ಆಸೂಸ್ ಝೆನ್‌ಫೋನ್ 5Z
ಆಸೂಸ್ ಝೆನ್‌ಫೋನ್ 5Z ಸ್ಮಾರ್ಟ್‌ಫೋನ್ ಮೇಲೆ 3000ರೂ. ಫ್ಲಾಟ್ ಡಿಸ್ಕೌಂಟ್ ಇದ್ದು, ಇದರೊಂದಿಗೆ ಝೆನ್‌ಫೋನ್ ಮ್ಯಾಕ್ಸ್ ಎಂ1, ಝೆನ್‌ಫೋನ್ ಲೈಟ್ ಎಲ್1 ಮತ್ತು ಝೆನ್‌ಫೋನ್ ಮ್ಯಾಕ್ಸ್ ಎಂ1 ಪ್ರೋ ಸ್ಮಾರ್ಟ್‌ಫೋನ್‌ಗಳ ಮೇಲು ಭಾರಿ ರಿಯಾಯಿತಿ ಕೊಡುಗೆಗಳು ದೊರೆಯಲಿದೆ.


Click it and Unblock the Notifications








