ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಖರೀದಿಸಿದ ಆಪ್‌ ಹಣವನ್ನು ವಾಪಸ್ ಪಡೆಯುವುದು ಹೇಗೆ?

|

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಹೆಚ್ಚು ಆಪ್‌ಗಳು ನಮಗೆ ಉಚಿತವಾಗಿ ಸಿಗುತ್ತವೆ ಎನ್ನಬಹುದು . ಆದರೂ ಅವಶ್ಯಕತೆಗೋ ಅಥವಾ ಉತ್ತಮ ಗುಣಮಟ್ಟಕ್ಕೋ ಪ್ಲೇಸ್ಟೋರ್‌ನಲ್ಲಿ ಕೆಲವು ಗೇಮ್ಸ್, ಆಫಿಸ್ ಮ್ಯಾನೆಜ್‌ಮೆಂಟ್ ಮತ್ತು ಇನ್ನಿತರ ಆಪ್‌ಗಳನ್ನು ಹಣ ನೀಡಿ ಖರೀದಿಸಿ ಡೌನ್‌ಲೋಡ್ ಮಾಡಿಕೊಳ್ಳುತ್ತೇವೆ. ಆದರೆ, ಖರೀದಿಸಿದ ನಂತರ ಆಪ್‌ ನಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದೆ ಹೋಗಬಹುದು! ಅಂದರೆ ನಾವು ಎಣಿಸಿದ ರೀತಿಯಲ್ಲ್ಲಿ ಆ ಆಪ್‌ ಕಾರ್ಯನಿರ್ವಹಿಸದೇ ಇರಬಹುದು!

ಹಣ ನೀಡಿ ಖರೀದಿಸಿದ ಆಪ್‌ ನಮ್ಮ ಉಪಯೋಗಕ್ಕೆ ಬರುವುದಿಲ್ಲ ಮತ್ತು ಕೊಟ್ಟ ಹಣವು ಸಿಗುವುದಿಲ್ಲ ಎನ್ನುವ ಕೊರಗು ಮೊದಲಿತ್ತು. ಆದರೆ ಇನ್ನು ಆ ಯೋಚನೆ ಬೇಡ! ಹೌದು, ಗೂಗಲ್ ಈ ಬಗ್ಗೆ ಖರೀದಿದಾರರ ಕ್ಷೇಮವನ್ನು ಕಾಪಾಡುತ್ತಿದೆ. ನೀವು ಹಣ ನೀಡಿ ಖರೀದಿಸಿದ ಆಪ್‌ ಇಷ್ಟವಾಗದಿದ್ದರೆ ನಿಮ್ಮ ಹಣ ವಾಪಸ್ ಪಡೆಯುವ ಸೌಲಭ್ಯವನ್ನು ನೀಡಿದೆ.

2017 ಕ್ಕೆ ಬರಲಿರುವ ಟಾಪ್ 8 ಶ್ಯೋಮಿ ಪ್ರಾಡಕ್ಟ್‌ಗಳು! ಎಲ್ಲವೂ ತಿಳಿಯಬೇಕಾದವು!

ಹಾಗಾಗಿ ಹಣ ನೀಡಿ ಖರೀದಿಸಿದ ಆಪ್‌ ನಿಮಗೆ ಇಷ್ಟವಾಗದಿದ್ದಲ್ಲಿ ಮತ್ತೆ ಹಣವನ್ನು ಹೇಗೆ ವಾಪಸ್‌ ಪಡೆಯಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಆಪ್‌ ಡೌನ್‌ಲೊಡ್ ಮಾಡಿದ ಎರಡು ಗಂಟೆಗಳಲ್ಲಿ ಹಣ ವಾಪಸ್ ಪಡೆಯಿರಿ.

ಆಪ್‌ ಡೌನ್‌ಲೊಡ್ ಮಾಡಿದ ಎರಡು ಗಂಟೆಗಳಲ್ಲಿ ಹಣ ವಾಪಸ್ ಪಡೆಯಿರಿ.

ಆಪ್‌ ಡೌನ್‌ಲೋಡ್ ಮಾಡುವ ಮುಂಚೆಯೇ ಗೂಗಲ್‌ ಪ್ಲೇಸ್ಟೋರ್‌ನಲ್ಲಿನ ರಿಫಂಡ್ ಬಗ್ಗೆ ತಿಳಿಯಿರಿ. ಮತ್ತು ನೀವು ಆಪ್‌ ಡೌನ್‌ಲೊಡ್ ಮಾಡಿದ ಎರಡು ಗಂಟೆಗಳ ಒಳಗೆ ನಿಮಗೆ ಆಪ್‌ ಇಷ್ಟವಾಗದಿದ್ದಲ್ಲಿ ಅದನ್ನು ವಾಪಸ್ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್‌ ಡೆವಲಪರ್ ಸಂಪರ್ಕಸಿ.

ಆಪ್‌ ಡೆವಲಪರ್ ಸಂಪರ್ಕಸಿ.

ನೀವು ಖರೀದಿಸಿ ಆಪ್‌ ನಿಮಗೆ ಇಷ್ಟವಾಗದಿದ್ದಲ್ಲಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಆಪ್‌ ಡೆವಲಪರ್ ಕಾಂಟ್ಯಾಕ್ಟ್ ಅಡ್ರೆಸ್ ಇರುತ್ತದೆ ಅವರನ್ನು ಸಂಪರ್ಕಸಿ.ನಂತರ ನಿಮ್ಮ ಹಣವನ್ನು ವಾಪಸ್‌ ಮಾಡುವಂತೆ ವಿನಂತಿಸಿಕೊಳ್ಳಿ. ಆದರೆ ಈ ಪ್ರೊಸೆಸ್ ಸಕ್ಸದ್ ಆಗದಿರಬಹುದು! ಯಾಕೆಂದರೆ ರಿಫಂಡ್ ಮಾಡುವ ಅಥವಾ ಮಾಡದಿರುವ ಅಧಿಕಾರ ಅವರಿಗಿರುತ್ತದೆ.

ಸಹಾಯಕ್ಕಾಗಿ ಗೂಗಲ್ ಸಂಪರ್ಕಸಿ.

ಸಹಾಯಕ್ಕಾಗಿ ಗೂಗಲ್ ಸಂಪರ್ಕಸಿ.

ನಮ್ಮ ಯಾವುದೇ ರೀಫಂಡ್ ರಿಕ್ವೆಸ್ಟ್‌ ಬಗ್ಗೆ ಆಪ್‌ ಡೆವಲಪರ್ ಇಚ್ಚೆಯೇ ಕೊನೆಯಲ್ಲ. ಅವರು ರೀಫಂಡ್ ಮಾಡದಿದ್ದರೆ ಗೂಗಲ್‌ ಪ್ಲೇಸ್ಟೋರ್ ಸಹಾಯವಾಣಿಯನ್ನು ಸಂಪರ್ಕಸಿ ವಿನಂತಿಸಿಕೊಳ್ಳಬಹುದು.

ಹಣ ವಾಪಸ್‌ ಪಡೆಯಲು ಬೇಕಾಗುವ ಸಮಯ.

ಹಣ ವಾಪಸ್‌ ಪಡೆಯಲು ಬೇಕಾಗುವ ಸಮಯ.

ನೀವು ಕ್ರೆಡಿಟ್‌ ಕಾರ್ಡ್ ಅಥವಾ ಪೇಬಿಲ್‌ನಲ್ಲಿ ಹಣ ಪಾವತಿ ಮಾಡಿದ್ದರೆ ನಿಮ್ಮ ಹಣ ವಾಪಸ್ ಆಗಲು ಕನಿಷ್ಟ ಮೂರರಿಂದ ಐದು ದಿವಸಗಳು ಬೇಕಾಗಬಹುದು. ಇನ್ನು ಗೂಗಲ್ ವಾಲೆಟ್ ಅಕೌಂಟ್ ಇದ್ದರೆ ಕೇವಲ ಒಂದೇ ದಿನದಲ್ಲಿ ನಿಮ್ಮ ಹಣ ವಾಪಸ್ ಆಗುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
fter using it, feel that the app doesn't quite fulfill our requirements. That's when we decide to refund the app back to Google. to know More This visit to kannada.Gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X