2017 ಕ್ಕೆ ಬರಲಿರುವ ಟಾಪ್ 8 ಶ್ಯೋಮಿ ಪ್ರಾಡಕ್ಟ್‌ಗಳು! ಎಲ್ಲವೂ ತಿಳಿಯಬೇಕಾದವು!

|

ಚೀನಾ ಮೊಬೈಲ್‌ಗಳೆಂದರೆ ಕಳಪೆ ಮೊಬೈಲ್‌ಗಳು ಎನ್ನುವ ಹಣೆಪಟ್ಟಿ ಕಳಚಿದ್ದು ಶ್ಯೋಮಿ ಮೊಬೈಲ್ ಕಂಪೆನಿ ಎನ್ನಬಹುದು.! 2010 ರಲ್ಲಿ ಚೀನಾದಲ್ಲಿ ಹುಟ್ಟಿದ ಶ್ಯೋಮಿಇಂದು ಪ್ರಪಂಚದ ನಾಲ್ಕನೇ ದೊಡ್ಡ ಸ್ಮಾರ್ಟ್‌ಫೊನ್ ಉತ್ಪಾದಕ ಕಂಪೆನಿಯಾಗಿ ಬೆಳೆದು ನಿಂತಿದೆ.

ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ನೀಡುತ್ತಿರುವ ಶ್ಯೋಮಿ ಭಾರತದ ಬಹುಪಾಲು ಸ್ಮಾರ್ಟ್‌ಫೊನ್ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನು ಇದೀಗ ಶ್ಯೋಮಿ ತನ್ನ ಬ್ರಾಂಡ್‌ ಅನ್ನು ಭಾರತದಾಧ್ಯಂತ ಹೆಚ್ಚು ವಿಸ್ತರಣೆ ಮಾಡಲು ಸ್ಮಾರ್ಟ್‌ಫೋನ್‌ಗಳಲ್ಲದೇ ಹೊಸ ಹೊಸ ಗ್ಯಾಜೆಟ್‌ಗಳನ್ನು ಶ್ಯೋಮಿ ಬಿಡುಗಡೆ ಮಾಡುತ್ತಿದೆ.

ಶಿಯೋಮಿಗೆ ಸೆಡ್ಡು ಹೊಡೆಯಲು ಮೊಟೊ ಎಮ್ ಬಿಡುಗಡೆ!? ಇದು ಸ್ಮಾರ್ಟ್‌ಫೋನ್ ದರಸಮರ?

ಹಾಗಾದರೆ ಶ್ಯೋಮಿ ಬಿಡುಗಡೆ ಮಾಡುತ್ತಿರುವ ಇನ್ನಿತರ ಗ್ಯಾಜೆಟ್‌ಗಳಾವುವು? ಅವುಗಳ ಫೀಚರ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 ಶ್ಯೋಮಿ ಎಮ್‌ಐ ವಿಆರ್ ಹೆಡ್‌ಸೆಟ್

#1 ಶ್ಯೋಮಿ ಎಮ್‌ಐ ವಿಆರ್ ಹೆಡ್‌ಸೆಟ್

ಶ್ಯೋಮಿ ತನ್ನ ನೂತನ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ ಅನ್ನು ಡಿಸೆಂಬರ್ 21 ರಂದು ರಿಲೀಸ್ ಮಾಡುತ್ತಿದೆ. ಶ್ಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಕೇವಲ 999 ರೂಪಾಯಿಗಳಲ್ಲಿ ಹೆಡ್‌ಸೆಟ್‌ ಖರೀದಿಸಬಹುದು.

#2 ಶ್ಯೋಮಿ ಎಮ್‌ಐ ಏರ್‌ ಪ್ಯೂರಿಫೈರ್ 2

#2 ಶ್ಯೋಮಿ ಎಮ್‌ಐ ಏರ್‌ ಪ್ಯೂರಿಫೈರ್ 2

ಶ್ಯೋಮಿಯ ನೂತನ ಎಮ್‌ಐ ಏರ್‌ ಪ್ಯೂರಿಫೈರ್ 2 ಭಾರತದ ಮಾರುಕಟ್ಟೆಯಲ್ಲಿ 9,999 ರೂಪಾಯಿಗಳಿಗೆ ಲಭ್ಯವಿದೆ. ಮೂರು ಲೇಯರ್ ಫಿಲ್ಟರ್ ಮತ್ತು 360 ಡಿಗ್ರಿ ಫಿಲ್ಟರ್‌ ಮಾಡುವ ತಂತ್ರಜ್ಞಾನವನ್ನು ಏರ್‌ ಪ್ಯೂರಿಫೈರ್ 2 ಹೊಂದಿದೆ. ಮತ್ತು ಇದನ್ನು ಆಂಡ್ರಾಯ್ಡ್ ಫೋನ್‌ ಮೂಲಕ ಕಂಟ್ರೊಲ್ ಮಾಡಬಹುದು!

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#3 ಶ್ಯೋಮಿ ಎಲೆಕ್ಟ್ರಿಕ್ ಸ್ಕೂಟರ್.

#3 ಶ್ಯೋಮಿ ಎಲೆಕ್ಟ್ರಿಕ್ ಸ್ಕೂಟರ್.

ಇತ್ತೀಚಿಗಷ್ಟೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಮಾಡುವುದಾಗಿ ಶ್ಯೋಮಿ ಹೇಳಿಕೊಂಡಿದೆ. 25 ಕಿ.ಮಿ ವೇಗದಲ್ಲಿ ಚಲಿಸುವ 12.5 k.G ತೂಕವನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುತ್ತದೆ ಎನ್ನಲಾಗಿದೆ. ಸ್ಕೂಟರ್ ಬೆಲೆ 19,500 ರೂಪಾಯಿಗಳು ಎಂದು ಶ್ಯೋಮಿ ಹೇಳಿದೆ.

#4 ಶ್ಯೋಮಿ ಎಲ್‌ಇಡಿ ಸೀಲಿಂಗ್ ಲೈಟ್

#4 ಶ್ಯೋಮಿ ಎಲ್‌ಇಡಿ ಸೀಲಿಂಗ್ ಲೈಟ್

ಮೈ ಸ್ಮಾರ್ಟ್‌ ಹೋಮ್ ಕಲ್ಪನೆಯನ್ನು ಹೊತ್ತಿ ಬರುತ್ತಿರುವ ಶ್ಯೋಮಿ ಎಲ್‌ಇಡಿ ಸೀಲಿಂಗ್ ಲೈಟ್ ಒಂದನ್ನು ಬಿಡುಗಡೆ ಮಾಡಿದೆ. ಎಲ್‌ಇಡಿ ಸೀಲಿಂಗ್ ಲೈಟ್ ಹಲವು ಕಲರ್‌ಗಳನ್ನು ಹೊಂದಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೊನ್‌ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ.

#5 ಬ್ಲೂಟೂತ್ ಮೌಸ್.

#5 ಬ್ಲೂಟೂತ್ ಮೌಸ್.

ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಂಪ್ಯೂಟರ್ ಮೌಸ್‌ಗಳಿದ್ದರೂ, ಶ್ಯೋಮಿ ನೂತನ ಬ್ಲೂಟೂತ್ ಮೌಸ್ ಒಂದನ್ನು ಬಿಡುಗಡೆಮಾಡಿದೆ. ಬ್ಲೂಟೂತ್ ಮೌಸ್ ಬೆಲೆ 870 ರೂಪಾಯಿಗಳಾಗಿದೆ.

#6 ಶ್ಯೋಮಿ ಸ್ಪೋರ್ಟ್ಸ್ ಬ್ಲೂಟೂತ್ ಹೆಡ್‌ಸೆಟ್

#6 ಶ್ಯೋಮಿ ಸ್ಪೋರ್ಟ್ಸ್ ಬ್ಲೂಟೂತ್ ಹೆಡ್‌ಸೆಟ್

ಬಹಳ ತಡವಾದರೂ ಶ್ಯೋಮಿ ಸ್ಪೋರ್ಟ್ಸ್ ಬ್ಲೂಟೂತ್ ಹೆಡ್‌ಸೆಟ್ ಬಿಡುಗಡೆ ಮಾಡಿದೆ. ಶ್ಯೋಮಿ ನೂತನ ಬ್ಲೂಟೂತ್ ಹೆಡ್‌ಸೆಟ್ ಬ್ಲೂಟೂತ್ 4.1 ತಂತ್ರಜ್ಞಾನ ಹೊಂದಿದೆ. ಬೆಲೆ 1,500 ರೂಪಾಯಿಗಳಾಗಿದೆ.

#7 ಶ್ಯೋಮಿ ಡ್ರೋಣ್ ಕ್ಯಾಮೆರಾ!!

#7 ಶ್ಯೋಮಿ ಡ್ರೋಣ್ ಕ್ಯಾಮೆರಾ!!

ಡ್ರೋಣ್ ಕ್ಯಾಮೆರಾ ಇಂದಿನ ಟ್ರೆಂಡ್ ಆಗಿ ರೂಪುಗೊಮಡಿದ್ದು, ಯಾವುದೇ ಕಾರ್ಯಕ್ರಮವಾದರೂ ಇಂದು ಡ್ರೋಣ್ ಮೂಲಕ ಚಿತ್ರಿಕರಿಸಲಾಗುತ್ತಿದೆ. ಇದನ್ನು ಮನಗಂಡಿರುವ ಶ್ಯೋಮಿ ಜಿಪಿಎಸ್‌ ಫೀಚರ್‌ ಹೊಂದಿರುವ ಡ್ರೋಣ್ ಕ್ಯಾಮೆರಾಗಳನ್ನು ಬಿಡುಗಡೆಮಾಡುತ್ತಿದೆ. ಬೆಲೆ 29,500 ರೂಪಾಯಿಗಳಾಗಿವೆ.

#8 ಶ್ಯೋಮಿ ರನ್ನಿಂಗ್ ಶೂ!

#8 ಶ್ಯೋಮಿ ರನ್ನಿಂಗ್ ಶೂ!

2000 ರೂಪಾಯಿಗಳಿಂದ 4000 ರೂಪಾಯಿಗಳಲ್ಲಿ ಶ್ಯೋಮಿ ರನ್ನಿಂಗ್ ಶೂಗಳನ್ನು ಮಾರುಕಟ್ಟೆಗೆ ಬಿಡುತ್ತದೆ. ರಾಕ್‌ಡನ್ ಮೋಷನ್ ಸ್ಪೀಡ್ ಹೊಂದಿರುವ ಈ ವಾಟರ್‌ ಪ್ರೂಫ್ ಶೂಗಳು ಇನ್ನೇನು ಮಾರುಕಟ್ಟೆಗೆ ಕಾಲಿಡಲಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are some offbeat Xiaomi gadgets for the Mi fans. to know More visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X