'ಗಾನ'ದಿಂದ(Gaana) 9 ಭಾರತೀಯ ಭಾಷೆಗಳಲ್ಲಿ ಮ್ಯೂಸಿಕ್‌ ಕೇಳಲು ಆಪ್‌ ಲಾಂಚ್‌

By Suneel
|

ಗಾನ (Gaana), ಭಾರತದ ವಿಶಾಲ ಮ್ಯೂಸಿಕ್‌ ಬ್ರಾಡ್‌ಕಾಸ್ಟಿಂಗ್ ಆಗಿದ್ದು, ಪ್ರಸ್ತುತದಲ್ಲಿ ಇಂಗ್ಲೀಷ್‌ ಅಲ್ಲದೇ 9 ಇತರೆ ಭಾರತೀಯ ಭಾಷೆಗಳಲ್ಲಿ ಹಾಡುಗಳು ಲಭ್ಯವಾಗುವ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಅಭಿವೃದ್ದಿಪಡಿಸಿದೆ.

'ಗಾನ'ದಿಂದ 9 ಭಾರತೀಯ ಭಾಷೆಗಳಲ್ಲಿ ಮ್ಯೂಸಿಕ್‌ ಕೇಳಲು ಆಪ್‌ ಲಾಂಚ್‌

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಸ ಬಹುದಾದ ಗಾನ ಆಪ್‌ನಲ್ಲಿ, ಬಳಕೆದಾರರು ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಬೆಂಗಾಲಿ, ಪಂಜಾಬಿ, ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ಮ್ಯೂಸಿಕ್ ಆಕ್ಸೆಸ್‌ ಮಾಡಬಹುದು. ಈಗಾಗಲೇ ಗಾನ ಆಪ್‌ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಭಾಷೆಗೆ ಆಧ್ಯತೆ ನೀಡಿ, ಮ್ಯೂಸಿಕ್ ಫಿಲ್ಟರ್ ಮಾಡಬಹುದು.

ಮೊಬೈಲ್‌ನಲ್ಲೇ ಆನ್‌ಲೈನ್‌ ಸ್ಟೋರ್ ಆರಂಭಿಸಿ: ಹೊಸ ಉದ್ಯಮಕ್ಕೆ 'ಶಾಪ್‌ಮೆಟಿಕ್ ಗೋ' ಸಾತ್

'ಗಾನ'ದಿಂದ 9 ಭಾರತೀಯ ಭಾಷೆಗಳಲ್ಲಿ ಮ್ಯೂಸಿಕ್‌ ಕೇಳಲು ಆಪ್‌ ಲಾಂಚ್‌

ಹಿಂದಿನ ಆಪ್‌ ಇಂದಿಗೂ ಇಂಗ್ಲೀಷ್‌ನಲ್ಲಿದ್ದು, ಆಪ್‌ ಬಳಕೆದಾರರು ಸೆಟ್ಟಿಂಗ್‌ಗೆ ಹೋಗಿ ಭಾಷೆ ಸೆಲೆಕ್ಟ್ ಮಾಡಬೇಕು. ಹೊಸ ಗ್ರಾಹಕರು ನೇರವಾಗಿ ಭಾಷೆ ಸೆಲೆಕ್ಟ್ ಮಾಡಬಹುದು. ಆಂಡ್ರಾಯ್ಡ್‌ನಲ್ಲಿ ಫೀಚರ್‌ ಲೈವ್‌ ಆಗಿದೆ. ಆದರೆ ಐಫೋನ್‌ ಬಳಕೆದಾರರಿಗೆ ಶೀಘ್ರದಲ್ಲಿ ಗಾನ ಆಪ್‌ ಸೇವೆ ನೀಡುವ ಬಗ್ಗೆ ತಿಳಿಸಲಾಗಿದೆ.

'ಗಾನ'ದಿಂದ 9 ಭಾರತೀಯ ಭಾಷೆಗಳಲ್ಲಿ ಮ್ಯೂಸಿಕ್‌ ಕೇಳಲು ಆಪ್‌ ಲಾಂಚ್‌

" 'ಗಾನ' ಭಾರತೀಯರಿಗೆ ಉತ್ತಮ ಮ್ಯೂಸಿಕ್ ಅನುಭವ ನೀಡುವ ಗುರಿ ಹೊಂದಿದೆ. ಪ್ರಸ್ತುತಕ್ಕೆ ಗಾನ 25 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ಇಂದಿನಿಂದ 100 ದಶಲಕ್ಷ ಬಳಕೆದಾರರು ಬಳಸಬಹುದು. ಯಾರು ಇಂಗ್ಲೀಷ್‌ ಮ್ಯೂಸಿಕ್‌ ಕೇಳಲು ಬಯಸುವುದಿಲ್ಲವೋ ಅವರು ತಮ್ಮ ನೆಚ್ಚಿನ ಭಾರತೀಯ ಭಾಷೆಯಲ್ಲಿ ಹಾಡುಗಳನ್ನು ಕೇಳಬಹದು", ಎಂದು ಗಾನ ಸಿಓಓ ಪ್ರಶಾನ್ ಅಗರ್‌ವಾಲ್‌ ಹೇಳಿದ್ದಾರೆ.

'ಗಾನ'ದಿಂದ 9 ಭಾರತೀಯ ಭಾಷೆಗಳಲ್ಲಿ ಮ್ಯೂಸಿಕ್‌ ಕೇಳಲು ಆಪ್‌ ಲಾಂಚ್‌

ಗಾನ ಆಪ್‌ ಬಳಕೆದಾರರು ಒಂದೇ ಆಪ್‌ ಅಡಿಯಲ್ಲಿ ವಿವಿಧ ಭಾಷೆಯ ಮ್ಯೂಸಿಕ್ ಕೇಳಬಹುದು. ಅಲ್ಲದೇ ತಮ್ಮ ನೆಚ್ಚಿನ ಗಾಯಕರು, ನೆಚ್ಚಿನ ನಟರ ಸಿನಿಮಾ ಹಾಡುಗಳನ್ನು ಆಲಿಸಬಹುದು. ಡಾ||ರಾಜ್‌ಕುಮಾರ್‌ ರವರ ಸಿನಿಮಾ ಹಾಡುಗಳು ಮತ್ತು ಅವರು ಹಾಡಿರುವ ಹಾಡುಗಳನ್ನು ಕೇಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Gaana launches ability to use app interface in 9 Indian languages. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X