ಮೊಬೈಲ್‌ನಲ್ಲೇ ಆನ್‌ಲೈನ್‌ ಸ್ಟೋರ್ ಆರಂಭಿಸಿ: ಹೊಸ ಉದ್ಯಮಕ್ಕೆ 'ಶಾಪ್‌ಮೆಟಿಕ್ ಗೋ' ಸಾತ್

Written By:

ಅಂಗೈಯ ಮೇಲೆ ಒಂದು ಉತ್ತಮ ಸ್ಮಾರ್ಟ್‌ಫೋನ್‌ ಇದ್ದರೇ ಸಾಕು, ಅದನ್ನು ಅಷ್ಟೇ ಉತ್ತಮವಾಗಿ ಬಳಸಿದರೇ ಕೇವಲ ಒಂದು ಮೊಬೈಲ್‌ನಿಂದಲೇ ಹೊಸ ಉದ್ಯಮ (ಸ್ಟಾರ್ಟ್‌ಅಪ್) ಆರಂಭಿಸಬಹುದಾದ ಕಾಲವಿದು. ಆದರೆ ಮೊಬೈಲ್‌ ಸದುಪಯೋಗ ಪಡೆದುಕೊಂಡು ಉದ್ಯಮ ಆರಂಭಿಸಿದವರು ಬಹಳ ವಿರಳ ನೋಡಿ.

ಮೊಬೈಲ್‌ನಲ್ಲೇ ಆನ್‌ಲೈನ್‌ ಸ್ಟೋರ್:ಹೊಸ ಉದ್ಯಮಕ್ಕೆ 'ಶಾಪ್‌ಮೆಟಿಕ್ ಗೋ' ಸಾತ್ ಉಚಿತ

ನರೇಂದ್ರ ಮೋದಿ'ರವರ ನೇತೃತ್ವದ ಕೇಂದ್ರ ಸರ್ಕಾರದ 'ಸ್ಟಾರ್ಟ್‌ಅಪ್‌' ಯೋಜನೆ ಹಲವು ರೀತಿಯಲ್ಲಿ ನೆರವಾಗುತ್ತಿದೆ. ರಾಷ್ಟ್ರೀಯ ಕಂಪನಿಗಳೇ ಮಾತ್ರವಲ್ಲದೇ, ಇಂದು ವಿದೇಶಿ ಕಂಪನಿಗಳಿಗೂ ಈ ಯೋಜನೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!? ಗೋವಾ ಇದಕ್ಕೆ ಟೆಸ್ಟ್‌ ಪ್ಲೇಸ್ ಅಷ್ಟೆ!!

ಸೆಪ್ಟೆಂಬರ್ 5 ರಿಂದ ಅಂತೂ ದೇಶದಲ್ಲಿ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸೌಲಭ್ಯ ದೊರಕುತ್ತಿದೆ. ಕನ್‌ಫ್ಯೂಸ್ ಆಗ್‌ಬೇಡಿ. ಯಾಕಂದ್ರೆ ರಿಲಾಯನ್ಸ್ ಜಿಯೋ ಸಿಮ್‌ ಅಂದು ಅಧಿಕೃತವಾಗಿ ಜನರ ಕೈ ಸೇರಿದ ದಿನ. ನೇರವಾಗಿ ವಿಷಯ ಹೇಳಬೇಕಂದ್ರೆ ನಿಮ್ಮ ಕೈಗೆಟಕುವ ಬೆಲೆಯಲ್ಲಿ ಇಂಟರ್ನೆಟ್ ಬಳಸಿಕೊಂಡು ಈಗ ಹೊಸ ಉದ್ಯಮವನ್ನು ಮೊಬೈಲ್‌ನಲ್ಲೇ ಆರಂಭಿಸಲು ಹೊಸ ಆಫ್‌ ಒಂದು ಅಭಿವೃದ್ದಿಗೊಂಡಿದೆ. ಹೌದಾ.... ಆಪ್‌ ಯಾವುದು? ಹೇಗೆ ವರ್ಕ್‌ ಆಗುತ್ತದೆ? ಏನ್‌ ಮಾಡಬಹುದು? ಎಂಬಿತ್ಯಾದಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೆಳಗಿನಂತಿದೆ. (Shopmatic Go)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 'ಶಾಪ್‌ಮೆಟಿಕ್ ಗೋ'

'ಶಾಪ್‌ಮೆಟಿಕ್ ಗೋ'

ಆಪ್‌ ಹೆಸರು 'ಶಾಪ್‌ಮೆಟಿಕ್ ಗೋ'(Shopmatic Go). ಈ ಆಪ್‌ ಅನ್ನು ಅಂತರರಾಷ್ಟ್ರೀಯ ಇ-ಕಾಮರ್ಸ್ ಕಂಪೆನಿ ಶಾಪ್‌ಮೆಟಿಕ್ ಪರಿಚಯಿಸಿದೆ.

ಓಎಲ್‌ಎಕ್ಸ್ ಅಮೆಜಾನ್, ಫ್ಲಿಪ್‌ಕಾರ್ಟ್ ನಂತಹ ಆನ್‌ಲೈನ್‌ ಖರೀದಿ ತಾಣಗಳು ಹೊಸ ಉದ್ಯಮ ಸ್ಥಾಪಿಸುವವರಿಗೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಿಕೊಟ್ಟ ಹಾಗೆ, ಹೊಸ ಉದ್ಯಮ ಆರಂಭಿಸುವವರಿಗೆ, ವಸ್ತುಗಳನ್ನು ಮಾರಾಟ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಚಿತ ಶಾಪ್‌ಮೆಟಿಕ್ ಗೋ ಆಪ್‌

ಉಚಿತ ಶಾಪ್‌ಮೆಟಿಕ್ ಗೋ ಆಪ್‌

* ಅಂದಹಾಗೆ ಈ ಆಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು
* ನಿಮ್ಮ ಸ್ವಂತ ಸ್ಟೋರ್‌ ಸೆಟಪ್‌ ಮಾಡಬಹುದು
* ಆನ್‌ಲೈನ್‌ ಪೇಮೆಂಟ್ ಸ್ವೀಕರಿಸಬಹುದು
* ವಸ್ತುಗಳ ಬಗ್ಗೆ ಗ್ರಾಹಕರಿಗೆ ಮತ್ತು ಸಾಮಾಜಿಕ ತಾಣಗಳಿಗೆ ಜಾಹಿರಾತು ನೀಡಬಹುದು
* ಸ್ವಂತ ಡೊಮೇನ್‌ ಹೊಂದುವ ಮೂಲಕ ಯಾವುದೇ ಡಿವೈಸ್‌ನಲ್ಲಿ ಸರ್ಚ್‌ ಆಗುವ ರೀತಿ ಫೀಚರ್ ಪಡೆಯಬಹುದು.
* ನಿಮ್ಮ ಆರ್ಡರ್ ಅನ್ನು ಫಿಲ್ ಮಾಡಬಹುದು
* ಯಶಸ್ವಿ ಮಾರಾಟಕ್ಕೆ ಮಾತ್ರ ಪೇಮೆಂಟ್ ಗೇಟ್‌ವೇ ಶುಲ್ಕ ಅಪ್ಲೇ ಆಗುತ್ತದೆ.

 ಆಪ್‌ ಇನ್‌ಸ್ಟಾಲ್

ಆಪ್‌ ಇನ್‌ಸ್ಟಾಲ್

ಆಪ್‌ ಅನ್ನು ಉಚಿತವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಶಾಪ್‌ಮೆಟಿಕ್ ಗೋ ಆಪ್ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಅಥವಾ ವಸ್ತುಗಳನ್ನು ಮಾರಾಟ ಮಾಡುವವರಿಗೆ ಸಹಾಯಕವಾಗಿದೆ. ಯಾವುದೇ ನೋಂದಣಿ ಶುಲ್ಕ ಮತ್ತು ದಾಖಲೆ ಪತ್ರಗಳು ಇಲ್ಲದೇ ಮಾರಾಟಗಾರರು ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡಬಹುದು.

ಫ್ಲಿಪ್‌ಕಾರ್ಟ್, ಅಮೆಜಾನ್‌ ನಂತಹ ವೇದಿಕೆಗಳನ್ನು ಬಳಸಲು ನೋಂದಣಿ ಅಗತ್ಯ. ಅಲ್ಲದೇ ವರ್ಗಾವಣೆ ಮೊತ್ತವಾಗಿ ಶೇ.30 ಹಣ ಪಾವತಿಸಬೇಕಾಗುತ್ತದೆ. ಆದರೆ ಶಾಪ್‌ಮೆಟಿಕ್ ಗೋ ಆಪ್‌ ಬಳಸಿದರೆ ಈ ಯಾವುದೇ ನೋಂದಣಿ ಅಗತ್ಯವಿಲ್ಲ, ದಾಖಲೆಗಳ ಪರಿಶೀಲನೆ ಅಗತ್ಯವಿಲ್ಲ. ಕೇವಲ 2 ನಿಮಿಷದಲ್ಲಿ ಯಾರು ಬೇಕಾದರೂ ತಮ್ಮ ಆನ್‌ಲೈನ್‌ ಮಾರಾಟ ಉದ್ಯಮ ಆರಂಭಿಸಿ, ವಸ್ತುಗಳನ್ನು ಮಾರಾಟ ಮಾಡಬಹುದು.

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಆಪ್‌ ಹೇಗೆ ವರ್ಕ್‌ ಆಗುತ್ತದೆ?

ಆಪ್‌ ಹೇಗೆ ವರ್ಕ್‌ ಆಗುತ್ತದೆ?

- ಆಪ್ ಇನ್‌ಸ್ಟಾಲ್‌ ಮಾಡಿಕೊಂಡಿರುವವರು ಮಾರಾಟ ಮಾಡಲು ಬಯುಸುವ ವಸ್ತುಗಳ ಫೋಟೋ ತೆಗೆದು, ಅಪ್‌ಲೋಡ್ ಮಾಡಿ.
- ಪ್ರಾಡಕ್ಟ್ ಹೆಸರು, ಬೆಲೆ ಇತರೆ ಮಾಹಿತಿಗಳನ್ನು ಒದಗಿಸಿ
- ನಿಮ್ಮ ಸ್ಟೋರ್‌ ಅನ್ನು ಪಬ್ಲಿಶ್‌ ಮಾಡಿ ಮತ್ತು ಸಾಮಾಜಿಕ ತಾಣಗಳಾದ ವಾಟ್ಸಾಪ್‌, ಫೇಸ್‌ಬುಕ್‌, ಇಮೇಲ್‌ ಮತ್ತು ಇತರೆ ತಾಣಗಳಲ್ಲಿ ಶೇರ್‌ ಮಾಡಿ.

 ಆಪ್‌ ಯಾರಿಗೆ? ಯಾವ ವಸ್ತುಗಳನ್ನು ಮಾರಾಟ ಮಾಡಬಹುದು?

ಆಪ್‌ ಯಾರಿಗೆ? ಯಾವ ವಸ್ತುಗಳನ್ನು ಮಾರಾಟ ಮಾಡಬಹುದು?

ಅಧಿಕೃತವಾಗಿ ಆನ್‌ಲೈನ್‌ ಉದ್ಯಮ ಆರಂಭಿಸುವವರಿಗೆ, ಆನ್‌ಲೈನ್‌ನಲ್ಲಿ ಸೇವೆ ನೀಡುವ, ವಸ್ತುಗಳನ್ನು ಮಾರಾಟ ಮಾಡುವವರಿಗೆ, ಪ್ರಸ್ತುತ ಬ್ಯುಸಿನೆಟ್‌ ಟ್ರೆಂಡ್‌ಗೆ ಹೊಂದಿಕೊಳ್ಳುವವರಿಗೆ ಈ ಆಪ್‌.

ಚಿತ್ರ ಕಲೆ, ಕರಕುಶಲ ವಸ್ತುಗಳು, ಹೊಸ ಮತ್ತು ಹಳೆಯ ಗ್ಯಾಜೆಟ್‌ಗಳನ್ನು ಮಾರಾಟ ಮಾಡಬಹುದು. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಉದಾಹರಣೆಗೆ ಮರದಿಂದ ತಯಾರಿಸಿದ ಆಟಿಕೆಗಳನ್ನು ಸಹ ಮಾರಾಟ ಮಾಡಬಹುದು. ಇದರ ಫೋಟೋ ತೆಗೆದು, ಇಮೇಲ್‌ ವಿಳಾಸ, ಮೊಬೈಲ್‌ ನಂಬರ್ ಮತ್ತು ವಿಳಾಸವನ್ನು ನೀಡಬೇಕು. ನೆಟ್‌ ಬ್ಯಾಂಕ್‌ ಅಥವಾ ಮೊಬೈಲ್‌ ಬ್ಯಾಂಕ್‌ ಯಾವುದು ಎಂಬುದರ ಮಾಹಿತಿ ನೀಡಬೇಕು.

ಸೂಚನೆ:
- ವಸ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕಂಪೆನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಮಾರಾಟ ಮತ್ತು ಗ್ರಾಹಕರ ನಡುವೆ ಮಾತ್ರ ಯಾವುದೇ ವ್ಯವಹಾರ ನಡೆಯುತ್ತದೆ.
- ಗ್ರಾಹಕರು ಮೋಸ ಹೋದಲ್ಲಿ, ಪೇಮೆಂಟ್ ಗೇಟ್‌ವೇ ಪರಿಶೀಲನೆ ನಡೆಸಿ, ಅಂತಹ ಗ್ರಾಹಕರನ್ನು ಬ್ಲಾಕ್ ಮಾಡಲಾಗುತ್ತದೆಯಂತೆ.
- ಖರೀದಿದಾರರೇ ಹೆಚ್ಚು ಎಚ್ಚರಿಕೆ ವಹಿಸಬೇಕು.
- ಪ್ರಸ್ತುತ 5೦,೦೦೦ ಮಾರಾಟಗಾರರು ಇದ್ದು, ಒಂದು ವರ್ಷದಲ್ಲಿ 10 ಲಕ್ಷ ಬಳಕೆದಾರರನ್ನು ಹೊಂದುವ ನಿರೀಕ್ಷೆ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Shopmatic Go Wants to Help Everyone Build Their Mobile-First Online Store. To know more about Shomatic Go visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot