ಸ್ಮಾರ್ಟ್‌ಫೋನ್ ಲುಕ್ ಬದಲಿಸಲಿದೆ 'ಗ್ಲ್ಯಾನ್ಸ್‌ ಲಾಕ್‌ ಸ್ಕ್ರೀನ್' ಆಪ್‌!

|

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್‌ಪ್ಲೇ ವಾಲ್‌ಪೇಪರ್‌ಗಳು ಹೆಚ್ಚು ಆಕರ್ಷಕವಾಗಿದ್ದು, ಬಳಕೆದಾರರ ಗಮನಸೆಳೆಯುತ್ತವೆ. ಅದೇ ರೀತಿ ಸ್ಕ್ರೀನ್‌ ಲಾಕ್‌ ಫೋಟೊಗಳಲ್ಲಿಯೂ ಸಹ ಹೊಸತನ ಸೇರಿದ್ದು, ಪ್ರತಿ ಬಾರಿಯೂ ಲಾಕ್‌ ಸ್ಕ್ರೀನ್ ಬದಲಾಗುತ್ತಿರುವ ಆಯ್ಕೆ ಹೊಂದಿವೆ. ಅಂತಹ ಫೀಚರ್‌ ನೀವು ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎ80 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಸ್ಮಾರ್ಟ್‌ಫೋನ್ ಲುಕ್ ಬದಲಿಸಲಿದೆ 'ಗ್ಲ್ಯಾನ್ಸ್‌ ಲಾಕ್‌ ಸ್ಕ್ರೀನ್' ಆಪ್‌!

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80 ಸ್ಮಾರ್ಟ್‌ಫೋನಿನಲ್ಲಿ ಗ್ಲ್ಯಾನ್ಸ್‌ ಫೀಚರ್ ಇದ್ದು, ಇದು ಲಾಕ್ ಸ್ಕ್ರೀನ್‌ಗೆ ಹೊಸ ಟಚ್‌ ಒದಗಿಸಿದೆ. ಬರಿ ಇಮೇಜ್ ಮಾತ್ರವೇ ಕಾಣಿಸುವುದಿಲ್ಲ. ಬದಲಿಗೆ ಇಮೇಜ್ ಜೊತೆಗೆ ಆಸಕ್ತಿಕರ ಕಂಟೆಂಟ್‌ ಮಾಹಿತಿಗಳು ಕಾಣಿಸುತ್ತವೆ. ಪ್ರತಿ ಬಾರಿ ಫೋನಿನ್ ಲಾಕ್‌ ಸ್ಕ್ರೀನ್‌ ಸರಿಸಿದಾಗಲೂ ಹೊಸ ಹೊಸ ಕಂಟೆಂಟ್‌ ಭರಿತ ಇಮೇಜ್‌ಗಳು ಕಾಣಿಸುತ್ತವೆ. ಈ ರೀತಿ ಸೌಲಭ್ಯ ನೀಡಲು ಗ್ಲ್ಯಾನ್ಸ್‌ ಆಪ್‌ ಸಹ ಇದೆ.

ಈ ಆಪ್‌ನಲ್ಲಿ ಬಳಕೆದಾರರ ಆಸಕ್ತಿ ವಿಷಯ ಕುರಿತಾಗಿ ಕಂಟೆಂಟ್‌ಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಫೀಚರ್‌ ಶಿಯೋಮಿ ಫೋನ್‌ಗಳಲ್ಲಿಯೂ ಕಾಣಬಹುದಾಗಿದೆ. ಲಾಕ್‌ ಸ್ಕ್ರೀನ್‌ ಸೆಟ್ಟಿಂಗ್‌ನಲ್ಲಿ ಲಾಕ್‌ ಸ್ಕ್ರೀನ್‌ ಸ್ಟೋರಿ ಆಯ್ಕೆಯನ್ನು ಆನ್ ಮಾಡಿದರೇ ಈ ಸೇವೆಯನ್ನು ಪಡೆಯಬಹುದಾಗಿದೆ. ಹಾಗಾದರೇ ಗ್ಲ್ಯಾನ್ಸ್‌ ಆಪ್‌ನ ಫೀಚರ್ಸ್‌ ಕುರಿತ ವಿಶೇಷತೆಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಅದ್ಭುತ ದೃಶ್ಯಗಳ ಚಿತ್ರಣ

ಅದ್ಭುತ ದೃಶ್ಯಗಳ ಚಿತ್ರಣ

ಗ್ಲ್ಯಾನ್ಸ್‌ ಆಪ್‌ ಸ್ಮಾರ್ಟ್‌ಫೋನ್‌ಗಳ ಲಾಕ್‌ ಸ್ಕ್ರೀನ್‌ನಲ್ಲಿ ಕಂಟೆಂಟ್ ಸಹಿತ ಅತ್ಯುತ್ತಮ ದೃಶ್ಯಗಳನ್ನು ಸಹ ಕಾಣುತ್ತದೆ. ಪ್ರತಿ ಬಾರಿ ಫೋನ್ ಲಾಕ್ ತೆರೆದಾಗಲೂ ಹೊಸ ಕಂಟೆಂಟ್ ಮತ್ತು ಹೊಸ ಚಿತ್ರ ಬಳಕೆದಾರರಿಗೆ ಮುದ ನೀಡುತ್ತದೆ. ನ್ಯೂಸ್ ಸೇರಿದಂತೆ ಇತರೆ ಕಂಟೆಂಟ್‌ಗಳನ್ನು ತೋರಿಸುವ ರೀತಿ ಸಹಜವಾಗಿ ಬಳಕೆದಾರರನ್ನು ಆಕರ್ಷಿಸುವಂತಿದ್ದು, ಹಾಗೆಯೇ ಕಂಟೆಂಟ್‌ಗೆ ಸೂಕ್ತ ಚಿತ್ರಗಳು ಸಹ ರಿಚ್‌ ಲುಕ್‌ನಲ್ಲಿರುತ್ತವೆ.

ಅಭಿರುಚಿಗೆ ಅನುಗುಣವಾಗಿ

ಅಭಿರುಚಿಗೆ ಅನುಗುಣವಾಗಿ

ಚಿತ್ರ ಮತ್ತು ಕಂಟೆಂಟ್ ಸಂಯೋಜನೆಯ ಗ್ಲ್ಯಾನ್ಸ್‌ ಆಪ್‌ನಲ್ಲಿ ಹಲವು ಕೇಟಗರಿಗಳನ್ನು ನೀಡಲಾಗಿದ್ದು, ಬಳಕೆದಾರರು ಅವರ ಆಸಕ್ತಿಗೆ ಅನುಗುಣವಾಗಿ ಸೆಟ್‌ ಮಾಡಬಹುದು. ಅವುಗಳಲ್ಲಿ ಟ್ರಾವೆಲ್, ಸ್ಪೋರ್ಟ್ಸ್‌, ಫ್ಯಾಶನ್ ಮತ್ತು ವೈಲ್ಡ್‌ಲೈಫ್ ವಿಷಯಗಳ ಸೇರಿದಂತೆ ಇತರೆ ಆಯ್ಕೆಗಳಿದ್ದು, ಬಳಕೆದಾರರು ಒಮ್ಮೆ ತಮಗೆ ಬೇಕಾದ ವಿಷಯ ಸೆಟ್‌ ಮಾಡಿದರೇ ಸಾಕು ಪ್ರತಿ ಬಾರಿ ಲಾಕ್‌ ಸ್ಕ್ರೀನ್‌ನಲ್ಲಿ ಹೊಸ ಬದಲಾವಣೆ ಕಾಣಿಸುತ್ತವೆ.

ಪ್ರಾದೇಶಿಕ ಭಾಷೆಯ ಬೆಂಬಲ

ಪ್ರಾದೇಶಿಕ ಭಾಷೆಯ ಬೆಂಬಲ

ಗ್ಲ್ಯಾನ್ಸ್‌ ಆಪ್ ಕಂಟೆಂಟ್‌ ಅನ್ನು ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ತೋರಿಸುತ್ತದೆ ಮತ್ತು ಅವರ ಇಚ್ಛೆಯ ಪ್ರಾದೇಶಿಕ ಭಾಷೆಯ ಬೆಂಬಲ ನೀಡಲಿದೆ. ಈ ಆಪ್‌ ಹಲವು ಪ್ರಾದೇಶಿಕ ಭಾಷೆಗಳ ಸಪೋರ್ಟ್‌ ಪಡೆದಿದ್ದು, ಬಳಕೆದಾರರು ಅವರ ಅಗತ್ಯ ಭಾಷೆಯನ್ನು ಸೆಟ್‌ ಮಾಡಿಕೊಳ್ಳಬಹುದಾಗದ ಆಯ್ಕೆ ಇದೆ. ಮುಖ್ಯವಾಗಿ ಹಿಂದಿ, ತೆಲಗು, ತಮಿಳ ಮತ್ತು ಇಂಗ್ಲೀಷ್ ಭಾಷೆಯ ಆಯ್ಕೆಗಳನ್ನು ಕಾಣಬಹುದಾಗಿದೆ.

ಶಾರ್ಟ್‌ ವಿಡಿಯೊ ಕಂಟೆಂಟ್

ಶಾರ್ಟ್‌ ವಿಡಿಯೊ ಕಂಟೆಂಟ್

ಗ್ಲ್ಯಾನ್ಸ್‌ ಆಪ್‌ನಲ್ಲಿ ಕಂಟೆಂಟ್‌ ಮತ್ತು ಚಿತ್ರಗಳ ಜೊತೆಗೆ ಶಾರ್ಟ್‌ ವಿಡಿಯೊ ಕಂಟೆಂಟ್‌ ಸಹ ನೋಡುವ ಆಯ್ಕೆಯನ್ನು ನೀಡಲಾಗಿದೆ. ಬಳಕೆದಾರರ ಆಸಕ್ತಿಯ ವಿಷಯಗಳ ಮೇಲೆ ಕೆಲವು ಸೆಕೆಂಡ್‌ಗಳ ಪುಟ್ಟ ವಿಡಿಯೊ ಕಂಟೆಂಟ್ ಲಭ್ಯವಾಗಲಿವೆ. ಹೆಲ್ತ್ ಟಿಪ್ಸ್, ಫಿಟ್ನೆಸ್‌ ಟಿಪ್ಸ್‌, ಫ್ಯಾಶನ್ ಸ್ಟೋರಿಸ್ ಹೀಗೆ ಅಗತ್ಯ ವಿಷಯಗಳ ಮಾಹಿತಿ ಭರಿತ ವಿಡಿಯೊಗಳು ಕಾಣಿಸಿಕೊಳ್ಳಲಿವೆ.

ವೈವಿಧ್ಯಮಯ ತಾಣ

ವೈವಿಧ್ಯಮಯ ತಾಣ

ಗ್ಲ್ಯಾನ್ಸ್‌ ಆಪ್‌ ಕೇವಲ ಕಂಟೆಂಟ್ ಮಾಹಿತಿ ಒದಗಿಸುವ ಆಪ್‌ ಆಗಿಲ್ಲ. ಇದೊಂದು ರೀತಿ ವೈವಿಧ್ಯಮಯ ತಾಣವಾಗಿ ಕಾಣಿಸಲಿದ್ದು, ಬಳಕೆದಾರರಿಗೆ ಹಲವು ಅಗತ್ಯ ಮನರಂಜನೆಯ ಆಯ್ಕೆಗಳನ್ನು ನೀಡಲಿದೆ. ಬಳಕೆದಾರರು ಮ್ಯೂಸಿಕ್ ಕೇಳಬಹುದು, ಗೇಮ್ಸ್ ಆಡಬಹುದು, ಟಿವಿ ವೀಕ್ಷಿಸಬಹುದಾಗಿದೆ. ಪ್ರತಿ ಬಾರಿ ಮುಂದೆನು ಎಂಬ ಕುತೂಹಲ ಮೂಡಿಸುತ್ತದೆ.

ಅಗತ್ಯ ಮತ್ತು ಅನುಕೂಲಕರ ಆಪ್

ಅಗತ್ಯ ಮತ್ತು ಅನುಕೂಲಕರ ಆಪ್

ಗ್ಲ್ಯಾನ್ಸ್‌ ಲಾಕ್‌ ಸ್ಕ್ರೀನ್ ಆಪ್ ಬಳಕೆದಾರರಿಗೆ ಅಗತ್ಯ ಮತ್ತು ಆಸಕ್ತಿಕರ ಸೇವೆಗಳನ್ನು ನೀಡಲಿದ್ದು, ಬಹುಬೇಗನೆ ಫೇವರೇಟ್ ಸ್ಥಾನ ಗಿಟ್ಟಿಸಿಕೊಂಡು ಬಿಡುತ್ತದೆ. ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಆಪ್ಸ್‌ಗಳನ್ನು ಮತ್ತು ವೆಬ್‌ಬ್ರೌಸ್‌ ಮಾಡುವ ಕೆಲಸವನ್ನು ದೂರವಾಗಿಸುವಂತಹ ಸೇವೆಗಳನ್ನು ಗ್ಲ್ಯಾನ್ಸ್‌ ಆಪ್‌ ಬಳಕೆದಾರರಿಗೆ ನೀಡುತ್ತದೆ. ಈ ಆಪ್‌ ಬಳಕೆದಾರರಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Best Mobiles in India

English summary
Glance, each time I wake up my phone, I see a new content with a beautiful image. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X