Home
Apps

ಬಂದೆ ಬಿಡ್ತು ಗೋ ಆಪ್: ಗೂಗಲ್ ಪ್ರಯತ್ನಕ್ಕೆ ಭಾರತವೇ ಮೂಲ..!

By Srinidhi

ಕಳೆದ ಒಂದು ವರ್ಷದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯೂ ಯಾರು ಊಹಿಸದ ರೀತಿಯಲ್ಲಿ ಬೆಳೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ದೈತ್ಯ ಕಂಪನಿಗಳೆಲ್ಲೂ ಬಾರತಕ್ಕಾಗಿ-ಭಾರತೀಯರಿಗಾಗಿ ಉತ್ಪಾದಿಸಲು ಮುಂದಾಗಿವೆ. ಇದೇ ಮಾದರಿಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಹ ಭಾರತವನ್ನು ಗಮನದಲ್ಲಿಟ್ಟುಕೊಂಡು ಗೋ ಆಪ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದೇ ಮಾದರಿಯಲ್ಲಿ ಜಿಮೇಲ್ ಗೋ ಆಪ್ ಲಾಂಚ್ ಆಗಿದೆ.

ಬಂದೆ ಬಿಡ್ತು ಗೋ ಆಪ್: ಗೂಗಲ್ ಪ್ರಯತ್ನಕ್ಕೆ ಭಾರತವೇ ಮೂಲ..!

ಕಡಿಮೆ ಇಂಟರ್ನೆಟ್ ಬಳಕೆ ಮಾಡಿಕೊಂಡು ಕಡಿಮೆ ಗಾತ್ರದಲ್ಲಿ ಕಾರ್ಯನಿರ್ವಹಿಸುವ ಗೋ ಆಪ್ ಗಳನ್ನು ಗೂಗಲ್ ನಿರ್ಮಿಸುತ್ತಿದ್ದು, ಇದಕ್ಕಾಗಿಯೇ ಆಂಡ್ರಾಯ್ಡ್ ಗೋ ವರ್ಷನ್ ಸಹ ನಿರ್ಮಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಗೋ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ತುದಿಗಾಲಿನಲ್ಲಿ ನಿಂತಿವೆ ಎನ್ನಲಾಗಿ. ಇದೇ ಸಂದರ್ಭದಲ್ಲಿ ಜಿಮೇಲ್ ಗೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಜಿಮೇಲ್ ಗೋ

ಜಿಮೇಲ್ ಗೋ

ಇಂದಿನ ದಿನದಲ್ಲಿ ಪ್ರತಿಯೊಬ್ಬರು ಜಿಮೇಲ್ ಆಕೌಂಟ್ ಹೊಂದಿರುತ್ತಾರೆ. ಅದರಲ್ಲೂ ಸ್ಮಾರ್ಟ್‌ಫೋನ್‌ನಲ್ಲಿಯೇ ಜಿಮೇಲ್ ಬಳಕೆ ಮಾಡಿಕೊಳ್ಳುವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಜಿಮೇಲ್ ಆಪ್ ಗಾತ್ರವು ಅಧಿಕವಾಗಿದ್ದು, ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕಾರ್ಯನಿರ್ವಹಿಸುವುದಿಲ್ಲ ಇದಕ್ಕಾಗಿಯೇ ಕಡಿಮೆ ಇಂಟರ್ನೆಟ್ ಬಳಕೆ ಮಾಡಿಕೊಂಡು ಕಡಿಮೆ ಗಾತ್ರದಲ್ಲಿ ಕಾರ್ಯನಿರ್ವಹಿಸುವ ಜಿಮೇಲ್ ಗೋ ಲಾಂಚ್ ಆಗಿದೆ.

ಚಿಕ್ಕ ಗಾತ್ರ

ಚಿಕ್ಕ ಗಾತ್ರ

ಈಗಾಗಲೇ ಮಾರುಕಟ್ಟೆಯಲ್ಲಿರುವ ಜಿಮೇಲ್ ಆಪ್ ಗಾತ್ರವೂ 47MBಯದ್ದಾಗಿದ್ದು, ಅದರಲ್ಲೂ ಆಪ್‌ಡೇಟ್ ಬಂದರೆ ಆಪ್ ಗಾತ್ರವು ಇನ್ನಷ್ಟು ದೊಡ್ಡದಾಗಲಿದೆ. ಈ ಹಿನ್ನಲೆಯಲ್ಲಿ ಗೋ ಆಪ್ ಗಾತ್ರ ಚಿಕ್ಕಾಗಿದ್ದು, ಕೇವಲ 9.5 MB ಗಾತ್ರದಲ್ಲಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಸಾಮಾನ್ಯ ಆಪ್‌ ನಂತೆಯೇ

ಸಾಮಾನ್ಯ ಆಪ್‌ ನಂತೆಯೇ

ಸದ್ಯ ನೀವು ಬಳಕೆ ಮಾಡಿಕೊಳ್ಳುತ್ತಿರುವ ಜಿಮೇಲ್ ಆಪ್ ನಂತಯೇ ಇದು ಕಾರ್ಯನಿರ್ವಹಿಸಲಿದೆ. ಯಾವುದೇ ಬದಲಾವಣೆಯನ್ನು ಇದು ಹೊಂದಿರುವುದಿಲ್ಲ ಎನ್ನಲಾಗಿದೆ. ಸಾಮಾನ್ಯ ಜಿಮೇಲ್ ನಲ್ಲಿದ್ದ ಎಲ್ಲಾ ಆಯ್ಕೆಗಳು ಈ ಫೋನಿನಲ್ಲಿಯೂ ಇರಲಿದೆ.

ಇನ್ನು ಹಲವು ಆಪ್‌ಗಳು

ಇನ್ನು ಹಲವು ಆಪ್‌ಗಳು

ಗೂಗಲ್ ಹಲವು ಗೋ ಆಪ್‌ ಗಳನ್ನು ಮಾರುಕಟ್ಟೆಗೆ ಬಿಡಲಿದೆ. ಇದರಲ್ಲಿ ಪ್ರಮುಖವಾದವು ಫೈಲ್ಸ್ ಗೋ, ಜಿಬೋರ್ಡ್ ಗೋ, ಗೂಗಲ್ ಗೋ, ಮ್ಯಾಪ್ ಗೋ ಮತ್ತು ಯೂಟ್ಯೂಬ್ ಗೋ ಆಪ್ ಗಳನ್ನು ಲಾಂಚ್ ಮಾಡಲಿದೆ. ಇವು ಬಳಕೆದಾರರಿಗೆ ಸಹಾಯ ಮಾಡಲಿವೆ.

ಓದಿರಿ: ಅಮೆಜಾನ್-ಫ್ಲಿಪ್‌ಕಾರ್ಟ್‌ನಿಂದ ನಿಮಗೆ ಮೋಸ ಆಗಿದ್ಯಾ..? ಹಾಗಿದ್ರೆ ಈ ಸ್ಟೋರಿ ನೋಡಿ..!

Best Mobiles in India

English summary
Gmail Go App Now Available for Download From Google Play Store. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+