ಅಮೆಜಾನ್-ಫ್ಲಿಪ್‌ಕಾರ್ಟ್‌ನಿಂದ ನಿಮಗೆ ಮೋಸ ಆಗಿದ್ಯಾ..? ಹಾಗಿದ್ರೆ ಈ ಸ್ಟೋರಿ ನೋಡಿ..!

|

ದೇಶಿಯ ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರಾಟವೂ ಹೆಚ್ಚಾಗುತ್ತಿದ್ದು, ಇ- ಕಾಮರ್ಸ್‌ ಉದ್ಯಮಗಳು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದೆ. ಆದರೆ ಇದರಲ್ಲಿ ಗ್ರಾಹಕರಿಗೆ ಹೆಚ್ಚಿನ ಮೋಸವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇ- ಕಾಮರ್ಸ್ ಕಂಪನಿಗಳಿಗೆ ಮೂಗುದಾರ ಹಾಕಲು ಸರಕಾರವು ಮುಂದಾಗಿದೆ ಎನ್ನಲಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್‌ನಿಂದ ನಿಮಗೆ ಮೋಸ ಆಗಿದ್ಯಾ..?

ಈ ಹಿನ್ನಲೆಯಲ್ಲಿಯೇ ಜನವರಿ 1 ರಿಂದಲೇ ಆನ್‌ಲೈನ್‌ನಲ್ಲಿ ಮಾರುವ ಉತ್ಪನ್ನಗಳ MRP, ಎಕ್ಸ್‌ಪೆರಿಡೇಟ್ ಸೇರಿದಂತೆ ಇತರೆ ವಿವರ ಪ್ರಕಟಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಇ- ಕಾಮರ್ಸ್‌ ಉದ್ಯಮಗಳು ಇದನ್ನು ಪಾಲಿಸುತ್ತಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂತಹ ಕಂಪನಿಗಳಿಗೆ ಸರಕಾರವು ದಂಡ ವಿಧಿಸಲು ಮುಂದಾಗಿದೆ.

ಗ್ರಾಹಕರಿಗಾಗಿಯೇ ಕ್ರಮ:

ಗ್ರಾಹಕರಿಗಾಗಿಯೇ ಕ್ರಮ:

ಆನ್‌ಲೈನಿನಲ್ಲಿ ವಸ್ತುಗಳನ್ನು ಬಳಕೆದಾರರು ಸ್ಪರ್ಶಿಸಿ ಇಲ್ಲವೇ ದೂರದಿಂದ ನಿಂತು ನೋಡಲು ಸಾಧ್ಯವಿಲ್ಲವಾಗಿರುವುದರಿಂದ ಇ- ಕಾಮರ್ಸ್‌ ಉದ್ಯಮಗಳು ತಾವು ಮಾರಾಟ ಮಾಡುವ ಉತ್ಪನ್ನದ ಹೆಸರು, ಉತ್ಪಾದಕರ ಹೆಸರು, ವಿಳಾಸ, MRP, ನಿವ್ವಳ ತೂಕ, ಆಕಾರ, ಗ್ರಾಹಕರ ದೂರು ಸಲ್ಲಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ನಿರ್ದಿಷ್ಟ ಗಾತ್ರದ ಅಕ್ಷರಗಳಲ್ಲಿ ಪ್ರಕಟಿಸುವುದನ್ನು ಸರಕಾರವೂ ಕಡ್ಡಾಯ ಮಾಡಿದೆ.

ಗ್ರಾಹಕರಿಗೆ ವಂಚನೆ:

ಗ್ರಾಹಕರಿಗೆ ವಂಚನೆ:

ಆನ್‌ಲೈನಿನಲ್ಲಿ ಭಾರಿ ರಿಯಾಯಿತಿಗಳನ್ನು ನಾವು ಕಾಣಬಹುದಾಗಿದ್ದು, ಇದರ ಆಕರ್ಷಣೆಗೆ ಒಳಗಾಗಿ ಖರೀದಿಸಿದಾಗ ಮೋಸ ಹೋಗುವ ಸಾಧ್ಯತೆ ಅಧಿಕ. ಅಲ್ಲದೇ ಉತ್ಪನ್ನದ ತೂಕ, ಅಳತೆಯಲ್ಲಿ ಮೋಸ ಮಾಡಬಹುದು. ಇಲ್ಲವೇ ಖರೀದಿಸಿದ ಉತ್ಪನ್ನದ ಸಲಕರಣೆಗಳನ್ನು ನೀಡದೆ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ.

ದೂರು ದಾಖಲಿಸಬಹುದು:

ದೂರು ದಾಖಲಿಸಬಹುದು:

ಆನ್‌ಲೈನ್‌ನಲ್ಲಿ ಸರಕು ಖರೀದಿ ಸಂದರ್ಭದಲ್ಲಿ ಬಳಕೆದಾರರಿಗೆ ಮೋಸವಾದರೆ ಅಥಾವ ನಿಯಮ ಉಲ್ಲಂಘನೆಯಾಗಿದ್ದರೆ ಗ್ರಾಹಕರು ದಾಖಲೆ ಸಹಿತ ದೂರು ನೀಡಬಹುದಾಗಿದೆ. [email protected] ಇಲ್ಲಿಗೆ ಇ ಮೇಲ್ ಕಳುಹಿಸಬಹುದಾಗಿದೆ.

ಜೈಲು ಶಿಕ್ಷೆ:

ಜೈಲು ಶಿಕ್ಷೆ:

ಇ-ಕಾಮರ್ಸ್‌ ಸಂಸ್ಥೆಗಳೀಗೆ ಮೊದಲ ಬಾರಿ ನಿಯಮ ಉಲ್ಲಂಘನೆಗೆ 5000 ರೂ. ದಂಡ. ಎರಡನೇ ಬಾರಿ ನಿಯಮ ಉಲ್ಲಂಘನೆಗೆ ನ್ಯಾಯಾಲಯದಲ್ಲಿ ಕೇಸ್ ಹಾಕಿ, ಗರಿಷ್ಠ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ವಿಧಿಸಬಹುದಾಗಿದೆ.

ಓದಿರಿ: ರೆಡ್‌ಮಿ ನೋಟ್ 5ಗೆ ಸೆಡ್ಡು ಹೊಡೆಯುವ ಫೋನ್‌: ಮೊಟೊದ ಬೊಂಬಾಟ್ ಫೋನ್ ಯಾವುದು..?

Best Mobiles in India

English summary
e commerce policy recent issues. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X