ಜಿ-ಮೇಲ್ ಪರಿಚಯಿಸಲಿರುವ ಹೊಸ ಫೀಚರ್ಸ್ ಯಾವವು ಗೊತ್ತಾ.?
ಆಧುನಿಕ ಪೋಸ್ಟ್ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಮಿಂಚಂಚೆ (ಇ-ಮೇಲ್) ಸೇವೆಯು ಇಂದು ಬಹು ಉಪಯೋಗಿ, ಅದರಲ್ಲೂ ಗೂಗಲ್ ಸಂಸ್ಥೆಯ 'ಜಿ-ಮೇಲ್' ಸೇವೆಯು ಅತೀ ಹೆಚ್ಚು ಬಳಕೆದಾರರನ್ನು ಹೊಂದಿದೆ. ಹಾಗಾಗಿ, ಇದೀಗ ಜಿ-ಮೇಲ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದ್ದು, ಈ ಫೀಚರ್ಸ್‌ಗಳು ಬಳಕೆದಾರರಿಗೆ ಉಪಯುಕ್ತವಾಗಿವೆ.

ಗೂಗಲ್ ಮೂರು ಹೊಸ ಫೀಚರ್ಸ್‌ಗಳನ್ನು ಜಿ-ಮೇಲ್ ಬಳಕೆದಾರರಿಗೆ ಪರಿಚಯಿಸುವುದಾಗಿ ತಿಳಿಸಿದ್ದು, ಅತೀ ಶೀಘ್ರದಲ್ಲಿ ಈ ಮೂರು ಫೀಚರ್ಸ್ ಆಯ್ಕೆಗಳು ಜಿ-ಮೇಲ್ ಬಳಕೆದಾರರಿಗೆ ದೊರೆಯಲಿವೆ ಎಂದು ಗೂಗಲ್ ಹೇಳಿದೆ. ಬರಲಿರುವ ಮೂರು ನೂತನ ಫೀಚರ್ಸ್‌ಗಳಲ್ಲಿ ಎರಡು 'ಶಾರ್ಟ್‌ಕಟ್ ಕೋಡ್'ನಲ್ಲಿ ಬಳಕೆದಾರರಿಗೆ ಲಭ್ಯವಾಗಲಿದ್ದು, ಮತ್ತೊಂದು .EML ಮಾದರಿಯ ಫೈಲ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಜಿ-ಮೇಲ್‌ನಲ್ಲಿ ಹೊಸ ಸಂದೇಶ ಬರೆಯುವಾಗ ಆಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಜಿ-ಮೇಲ್‌ನ ಹೊಸ ಎರಡು ಫೀಚರ್‌ಗಳು ನೆರವಾಗಲಿವೆ ಮತ್ತು .EML ಮಾದರಿಯಲ್ಲಿ ಬಂದಿರುವ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದುವುದಕ್ಕೆ ಹೊಸದೊಂದು ಫೀಚರ್ ಸಹಕರಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಜಿ-ಮೇಲ್‌ನಲ್ಲಿ ಹೊಸದಾಗಿ ಬರಲಿರುವ ಮೂರು ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಕಂಪೊಸ್ ವಿಂಡೋದಲ್ಲಿ ಶಾರ್ಟ್‌ಕಟ್ ಅಂಡು/ರೆಡೊ
ಜಿ-ಮೇಲ್‌ನಲ್ಲಿ ಸಂದೇಶ ಕಳಹಿಸುವಾಗ ಬರೆದಿರುವ ವಿಷಯವು ಆಕಸ್ಮಿಕವಾಗಿ ಡಿಲೀಟ್ ಆದರೆ ಮರಳಿ ಪಡೆಯಬಹುದಾಗಿದೆ ಮತ್ತು ಡ್ರಾಫ್ಟ್‌ನಲ್ಲಿಯ ಸಂಗ್ರಹದಲ್ಲಿನ ವಿಷಯ ಡಿಲೀಟ್ ಆಗಿದ್ದರೆ, ಅದನ್ನು ರೆಡೊ ಮೂಲಕ ಯಾವಾಗಬೇಕಾದರೂ ಮರಳಿ ಪಡೆಯಬಹುದಾದ ಅನುಕೂಲವನ್ನು ಈ ಫೀಚರ್ ಜಿ-ಮೇಲ್ ಬಳಕೆದಾರರಿಗೆ ನೀಡಲಿದೆ. ಕಂಪೊಸ್ ವಿಂಡೋದಲ್ಲಿ ಇದನ್ನು ಕಾಣಬಹುದು.

ಬೋಲ್ಡ್, ಇಟಾಲಿಕ್ಸ್ ಮತ್ತು ಅಂಡರ್‌ಲೈನ್
ದಪ್ಪ ಅಕ್ಷರ, ಇಟಾಲಿಯನ್ ಮತ್ತು ಅಂಡರ್‌ಲೈನ್ ನಂತಹ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಗೂಗಲ್ ಇನ್ಮೂಂದೆ ಶಾರ್ಟ್‌ಕಟ್‌ನಲ್ಲಿ ನೀಡಲು ಮುಂದಾಗಿದೆ. ಬರೆಯುವಾಗ ಬೋಲ್ಡ್, ಇಟಾಲಿಕ್ಸ್, ಮತ್ತು ಅಂಡರ್‌ಲೈನ್ ಆಯ್ಕೆಗಳು ಮೇಲಿಂದ ಮೇಲಿಂದಮೇಲೆ ಉಪಯೋಗಿಸ ಬೇಕಾಗುತ್ತದೆ ಅದಕ್ಕಾಗಿ ಈ ಆಯ್ಕೆಗಳನ್ನು ಶಾರ್ಟ್‌ಕಟ್‌ನಲ್ಲಿ ನೀಡುವುದಾಗಿ ಗೂಗಲ್ ತಿಳಿಸಿದೆ.

.EML ಫೈಲ್ಸ್ ಡೌನ್ಲೋಡ್
ಗೂಗಲ್‌ನ ಜಿ-ಮೇಲ್‌ನಲ್ಲಿ ಈ ಮೊದಲು .EML ನಂತಹ ಫೈಲ್ಸ್‌ಗಳು ಸಪೋರ್ಟ್ ಆಗುತ್ತಿರಲಿಲ್ಲಾ ಹೀಗಾಗಿ .EML ಫೈಲ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಮತ್ತು ಓದಲು ಆಗುತ್ತಿರಲಿಲ್ಲ. ಇದೀಗ ಗೂಗಲ್ .EML ಫೈಲ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಮತ್ತು ಆ ಫೈಲ್‌ಗಳನ್ನು ಓದಬಹುದಾಗಿದೆ. ಇದು ಕೂಡ ಜಿ-ಮೇಲ್ ಬಳಕೆದಾರರಿಗೆ ಸೀಗುವ ಮುಖ್ಯ ಅಪ್‌ಡೇಟ್‌ಗಳಲ್ಲಿ ಒಂದಾಗಿದೆ.


Click it and Unblock the Notifications








