Subscribe to Gizbot

ವಾಟ್ಸಾಪ್'ಗೂ ಮೇಲುಗೈ 'ಗೂಗಲ್‌ ಆಲೊ 2.0': ತಿಳಿಯಲೇಬೇಕಾದ ಕುತೂಹಲಕಾರಿ ಫೀಚರ್‌ಗಳು!

Written By:

'Allo' ಗೂಗಲ್‌ನ ಹೊಸ ಪವರ್‌ಫುಲ್ ಮೆಸೇಜಿಂಗ್‌ ಆಪ್‌ ಎಂದು ಈ ಹಿಂದೆ ಹೇಳಿದ್ದೆವು. ಈಗ ಅದೇ ಆಪ್‌ ಗೂಗಲ್‌ ತನ್ನ ಆಂಡ್ರಾಯ್ಡ್ 'ಆಲೊ ಚಾಟ್‌ ಆಪ್‌'ಗೆ ಬಹುದೊಡ್ಡ ಅಪ್‌ಡೇಟ್‌ ನೀಡಿದೆ. ಹೌದು, ಗೂಗಲ್‌ ಪ್ರಸ್ತುತದಲ್ಲಿ ತನ್ನ ಆಲೋ(Allo) ಆಪ್‌ಗೆ 'ಗೂಗಲ್ ಆಲೊ 2.0' ಅಪ್‌ಡೇಟ್‌ ಅನ್ನು ಪ್ಲೇ ಸ್ಟೋರ್‌ ಮೂಲಕ ಬಳಕೆದಾರರಿಗೆ ನೀಡುತ್ತಿದೆ.

ನಿಧಾನವಾಗಿ ಎಲ್ಲಾ ದೇಶಗಳ ಬಳಕೆದಾರರಿಗೂ ಅಪ್‌ಡೇಟ್‌ ಆಗುತ್ತಿರುವ ಆಪ್‌ ಶೀಘ್ರದಲ್ಲೇ ಭಾರತೀಯ ಆಲೊ ಆಪ್‌ ಬಳಕೆದಾರರಿಗೂ ಅಪ್‌ಡೇಟ್‌ ಸಿಗಲಿದೆ. ಈ ಹೊಸ ಅಪ್‌ಡೇಟ್'ನಿಂದ ಬಳಕೆದಾರರಿಗೆ ಕುತೂಹಲಕಾರಿ ಫೀಚರ್‌ಗಳು ಲಭ್ಯವಿದ್ದು, ಅವುಗಳನ್ನು ನಾವು ನಿಮಗೆ ತಿಳಿಸುತಿದ್ದೇವೆ. ಮುಂದೆ ಓದಿರಿ.(Google Allo)

'Allo' ಗೂಗಲ್‌ನ ಹೊಸ ಪವರ್‌ಫುಲ್‌ ಮೆಸೇಜಿಂಗ್ ಆಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಫ್‌ ಕೀಬೋರ್ಡ್‌ ಸಪೋರ್ಟ್‌

ಜಿಫ್‌ ಕೀಬೋರ್ಡ್‌ ಸಪೋರ್ಟ್‌

ಅಂದಹಾಗೆ ಹೊಸ ಆಂಡ್ರಾಯ್ಡ್ 7.1 ಅಪ್‌ಡೇಟ್, ಗೂಗಲ್‌ನ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳಿಗೆ ಈಗಾಗಲೇ ಲಭ್ಯವಾಗಿದ್ದು, ಗೂಗಲ್‌ ಆಲೊ ಫೀಚರ್‌ ಸ್ವೀಕರಿಸಲಿದೆ. ಆಲೊ 2.0 ಅಪ್‌ಡೇಟ್‌ನೊಂದಿಗೆ, ಸ್ನೇಹಿತರೊಂದಿಗೆ ಜಿಫ್‌ ಸೆಂಡ್ ಮಾಡಬಹುದು.

 ಆಂಡ್ರಾಯ್ಡ್ ಜೊತೆಯಲ್ಲಿಯೇ ಇಂಟಿಗ್ರೇಟೆಡ್

ಆಂಡ್ರಾಯ್ಡ್ ಜೊತೆಯಲ್ಲಿಯೇ ಇಂಟಿಗ್ರೇಟೆಡ್

ನೀವು ಆಂಡ್ರಾಯ್ಡ್'ನ ಯಾವುದಾದರೂ ಧರಿಸುವ ಸಾಧನಗಳನ್ನು ಹೊಂದಿದ್ದರೇ, ಸುಲಭವಾಗಿ ವಾಯ್ಸ್ ಅಥವಾ ಎಮೋಜಿಗಳಿಂದ ರೀಪ್ಲೇ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೈರೆಕ್ಟ್ ಶೇರ್‌ ಆಪ್ಶನ್‌

ಡೈರೆಕ್ಟ್ ಶೇರ್‌ ಆಪ್ಶನ್‌

ಆಪ್‌ ಆರಂಭಿಸಿದಾಗ ನಿಮಗೆ ಈಗ ಹೊಸ ಪ್ಲಾಶ್‌ಸ್ಕ್ರೀನ್ ಪ್ರದರ್ಶನವಾಗುತ್ತದೆ. ಇದು ಡೈರೆಕ್ಟ್‌ ಆಗಿ ಇತರರಿಗೆ ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಶೇರ್‌ ಮಾಡಲು ಸಹಾಯಕಾರಿಯಾಗಿದೆ. ಆಪ್‌ ಅನ್ನು ಓಪನ್ ಮಾಡದೆಯೇ ಆಂಡ್ರಾಯ್ಡ್ ಶೇರ್‌ ಮೆನು ಇಂದ ಶೇರ್‌ ಮಾಡಬಹುದು.

 ಹೊಸ ಥೀಮ್‌

ಹೊಸ ಥೀಮ್‌

ಚಾಟ್‌ ಥೀಮ್‌ನಲ್ಲಿ ಗೂಗಲ್‌ ಆಲೋ ಅಪ್‌ಡೇಟ್‌ ಹೊಸ ಆಯ್ಕೆ ಮೊನೊಕ್ರೋಮ್ ನೀಡುತ್ತದೆ. ಈ ಹೊಸ ಥೀಮ್‌ ಅನ್ನು ಎನೇಬಲ್‌ ಮಾಡಲು ಸೆಟ್ಟಿಂಗ್ಸ್‌ಗೆ ಹೋಗಬೇಕು.

ಸ್ಪ್ಲಿಟ್ ಸ್ಕ್ರೀನ್- ಹಲವು ಉದ್ದೇಶಗಳ ಮೋಡ್

ಸ್ಪ್ಲಿಟ್ ಸ್ಕ್ರೀನ್- ಹಲವು ಉದ್ದೇಶಗಳ ಮೋಡ್

ಗೂಗಲ್‌ ಆಲೊ ಆಂಡ್ರಾಯ್ಡ್ ನ್ಯೂಗಾ ಮಲ್ಟಿ ವಿಂಡೋ ಮತ್ತು ಮಲ್ಟಿ ಟಾಸ್ಕ್ ಫೀಚರ್‌ ಅನ್ನು ಸಪೋರ್ಟ್‌ ಮಾಡುತ್ತದೆ. ಆಲೊ ಅನ್ನು ಸ್ಪ್ಲಿಟ್ ಸ್ಕ್ರೀನ್‌ ಮೋಡ್‌ನಲ್ಲಿ ಓಪನ್‌ ಮಾಡಲು, ಆಪ್‌ ಓಪನ್‌ ಮಾಡಿ, ಇತ್ತೀಚಿನ ಆಪ್‌ಗಳ ಬಟನ್‌ ಅನ್ನು ಹೋಲ್ಡ್‌ ಮಾಡಿ. ನಂತರ ಯಾವುದೇ ಅಪ್ಲಿಕೇಶನ್‌ಗಳನ್ನು ಸೈಡ್‌ ಬೈ ಸೈಡ್‌ನಲ್ಲಿ ಓಪನ್‌ ಮಾಡಲು ಗೂಗಲ್‌ ಆಲೊ ಬಳಸಬಹುದು.

ಉತ್ತಮ ನೋಟಿಫಿಕೇಶನ್

ಉತ್ತಮ ನೋಟಿಫಿಕೇಶನ್

ಗೂಗಲ್‌ ಆಲೊ'ದ ಚಾಟ್‌ ನೋಟಿಫಿಕೇಶನ್ ಈಗ ಅತಿ ವೇಗದ ರೀಪ್ಲೇ ಬಟನ್‌ ಅನ್ನು ಸೆಂಡರ್‌ ಹೆಸರು ಮತ್ತು ಇಮೇಜ್‌'ನೊಂದಿಗೆ ಹೊಂದಿದೆ. ಇದು ಅಪ್ಲಿಕೇಶನ್‌ ಓಪನ್‌ ಮಾಡದೆಯೇ ಸಂಭಾಷಣೆ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google Allo 2.0: 6 Interesting Features You Should Never Miss. To Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot