ಕೊನೆಗೂ ಮುಗಿತು ಬರ್ಗರ್ ಯುದ್ಧ: ಬಿಯರ್ ಕೂಡ ಬದಲಾಯಿತು..!
ಆಂಡ್ರಾಯ್ಡ್ ಓರಿಯೋ ಆವೃತ್ತಿಯಲ್ಲಿ ಗೂಗಲ್ ಹೊಸ ಮಾದರಿಯ ಎಮೋಜಿಗಳನ್ನು ಆಪ್‌ಡೇಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಬರ್ಗರ್ ಎಮೋಜಿ ಸಾಕಷ್ಟು ವಾದ-ವಿವಾದವನ್ನು ಹುಟ್ಟಿ ಹಾಕಿತ್ತು. ಒಂದು ಮಾದರಿಯಲ್ಲಿ ಇದನ್ನು ಆಂಡ್ರಾಯ್ಡ್ ಗೂಗಲ್ ಮತ್ತು ಐಎಸ್‌ಓ ಆಪಲ್ ನೊಂದಿಗಿನ ಯುದ್ಧವೆಂದೆ ಬಿಂಬಿತವಾಗಿತ್ತು.

ಓದಿರಿ: ರೆಡ್‌ಮಿ 5 ಸ್ಮಾರ್ಟ್‌ಫೋನ್: ಫೋನ್ ಮಾತ್ರ ಟಾಪ್ಎಂಡ್ - ಬೆಲೆ ಮಾತ್ರ ಬಜೆಟ್‌ನಲ್ಲಿ..!
ಸದ್ಯ ಕೊನೆಗೆ ಈ ವಾದ-ವಿವಾದವು ಕೊನೆಯಾಗಿದ್ದು, ಯುದ್ದದ ಲಕ್ಷಣಗಳು ಕೊನೆಯಾಗಿದೆ. ಗೂಗಲ್ ತನ್ನ ಸೋಲನ್ನು ಒಪ್ಪಿಕೊಂಡಿದ್ದು, ಬರ್ಗರ್ ವಿವಾದಕ್ಕೆ ತೆರೆ ಎಳೆದಿದೆ. ಆಂಡ್ರಾಯ್ಡ್ 8.0 ದಲ್ಲಿ ಮಾಡಿದ್ದ ತಪ್ಪನ್ನು 8.1 ಆಪ್‌ಡೇಟ್‌ನಲ್ಲಿ ಸರಿ ಪಡಿಸುವುದಾಗಿ ತಿಳಿಸಿದೆ ಮತ್ತು ಪ್ರಿವ್ಯೂನಲ್ಲಿ ಅದನ್ನು ತೋರಿಸಿಕೊಟ್ಟಿದೆ ಸಹ.

ಎಮೋಜಿಪೀಡಿಯಾ ಮಾದರಿಯಲ್ಲಿದೆ:
ಈ ಹಿಂದೆ ಗೂಗಲ್ ಬರ್ಗರ್ ನಲ್ಲಿ ಚೀಸ್ ಸ್ಥಾನವನ್ನು ಕೆಳಗೆ ಮೇಲೆ ಮಾಡಿತ್ತು. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಗೂಗಲ್ ಎಮೋಜಿಪೀಡಿಯಾದಲ್ಲಿ ಇರುವ ಮಾದರಿಯಲ್ಲಿ ತನ್ನ ಬರ್ಗರ್ ಅನ್ನು ಬದಲಾಯಿಸಿಕೊಂಡಿದೆ.

ಚಿಕ್ಕ ವಿಷಯ- ಭಾರೀ ವಿವಾದ:
ಬರ್ಗರ್ ನಲ್ಲಿ ಚಿಸ್ ಎಲ್ಲಿದ್ದರೇನು? ಇದಕ್ಕಾಗಿ ಯಾಕೆ ಇಷ್ಟು ವಿವಿಧ ಎಂದು ನೀವು ಕೇಳಬಹುದು. ಆದರೆ ಎಮೋಜಿ ಎನ್ನುವುದು ಸಹ ಎಂದು ಭಾಷೆಯಾಗಿ ಬೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಅದಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇದಕ್ಕಾಗಿ ಚಿಕ್ಕಿ ವಿಷಯವಾದರು ವಿವಾದ ದೊಡ್ಡ ಮಟ್ಟದಲ್ಲಿ ಆಗಿದೆ.

ಇದಲ್ಲದೇ ಬಿಯರ್ ಎಮೋಜಿ ಬದಲಾಗಿದೆ:
ಇದಲ್ಲದೇ ಬಿಯರ್ ಎಮೋಜಿಯನ್ನು ಸಹ ಗೂಗಲ್ ಬದಲಾಯಿಸಿತ್ತು. ಅದನ್ನು ಸರಿ ಮಾಡಿದೆ ಎರಡು ಮಗ್ ಬಿಯರ್ ತುಂಬಿ ಅದರ ಮೇಲೆ ನೋರೆ ಕಾಣಿಸುವಂತೆ ಗೂಗಲ್ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ.


Click it and Unblock the Notifications








