ರೆಡ್‌ಮಿ 5 ಸ್ಮಾರ್ಟ್‌ಫೋನ್: ಫೋನ್ ಮಾತ್ರ ಟಾಪ್ಎಂಡ್ - ಬೆಲೆ ಮಾತ್ರ ಬಜೆಟ್‌ನಲ್ಲಿ..!
ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿ ಇದೇ ನವೆಂಬರ್ 30ರಂದು 'ದೇಶ್ ಕಾ ಸ್ಮಾರ್ಟ್‌ಫೋನ್' ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್‌ಫೋನ್ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದೆ. ಇದರ ಬೆನ್ನಲೇ ಸದ್ದಿಲ್ಲದೇ ಮತ್ತೊಂದು ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ.

ಓದಿರಿ: BSNL ನಿಂದ ಹೊಸ ಮಾದರಿಯ ಆಫರ್: ಬೇರೆಲ್ಲೂ ಲಭ್ಯವಿಲ್ಲ
ಶಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ಬಜೆಟ್ ಬೆಲೆಯ ಫೋನ್‌ಗಳು ಸಖತ್ ಸದ್ದು ಮಾಡುತ್ತಿವೆ ಅಲ್ಲದೇ ಬೇಡಿಕೆಯನ್ನು ಉಳಿಸಕೊಂಡಿವೆ. ಆದರೆ ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್‌ಗಳು ಅಷ್ಟಾಗಿ ಹಿಟ್ ಆಗಿಲ್ಲ. ಇದನ್ನೇ ಮನದಲ್ಲಿಟ್ಟುಕೊಂಡು ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಶಿಯೋಮಿ ಲಾಂಚ್ ಮಾಡುತ್ತಿದೆ. ಅದೇ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್.

ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್:
ಈ ಎರಡು ಫೋನ್‌ಗಳು ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ ಎನ್ನವ ಸುದ್ದಿಗಳು ಈಗಾಗಲೇ ಹರಿದಾಡುತ್ತಿದ್ದು, ಈ ಫೋನಿನ ಚಿತ್ರಗಳ ಮತ್ತು ವಿಶೇಷತೆಗಳು ಸಹ ಲೀಕ್ ಆಗಿದೆ. ಈ ಸ್ಮಾರ್ಟ್‌ಫೋನ್ ಗಳು 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ.

ಡಿಸೆಂಬರ್ 7ಕ್ಕೆ ಲಾಂಚ್:
ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ಮುಂದಿನ ತಿಂಗಳು ಅಂದರೆ ಡಿಸೆಂಬರ್ 7ಕ್ಕೆ ಲಾಂಚ್ ಆಗಲಿದೆ. ಮೊದಲಿಗೆ ಇದು ಚೀನಾದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ.

5.7 HD + ಡಿಸ್‌ಪ್ಲೇ:
ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ 18:9 ಅನುಪಾತದ 5.7 ಇಂಚಿನ HD+ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಮತ್ತು 625 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. 4GB RAM ಮತ್ತು 64GB ಇಂಟರ್‌ನಲ್ ಮೆಮೊರಿಯನ್ನು ಕಾಣಬಹುದು.

ಉತ್ತಮ ಕ್ಯಾಮೆರಾ:
ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 12MP ಹಿಂಭಾಗದ ಕ್ಯಾಮೆರಾವನ್ನು ನೀಡಲಾಗಿದ್ದು, LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ 3300mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಆಂಡ್ರಾಯ್ಡ್ ನ್ಯಾಗಾ:
ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ಸದ್ಯ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಆಂಡ್ರಾಯ್ಡ್ ಒರಿಯೋ ಆಪ್ಡೇಟ್ ಸಹ ಈ ಸ್ಮಾರ್ಟ್‌ಫೋನ್‌ಗಳಿಗೆ ದೊರೆಯಲಿದೆ ಎನ್ನಲಾಗಿದೆ.


Click it and Unblock the Notifications








