Home
Apps

YouTube: ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್‌! ಏನಿದು? ಇದನ್ನು ಬಳಕೆ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ (smartphone) ಹೊಂದಿರುವ ಯಾರೇ ಆದರೂ ಸಹ ಯೂಟ್ಯೂಬ್ (youtube) ಅನ್ನು ದಿನದಲ್ಲಿ ಒಂದು ಬಾರಿಯಾದರೂ ಓಪನ್‌ ಮಾಡದೇ ಇರರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್‌ ಬಳಕೆದಾರರಿಗೆ ಎಲ್ಲಾ ರೀತಿಯಲ್ಲೂ ಅಗತ್ಯವಾದ ಪ್ಲಾಟ್‌ಫಾರ್ಮ್‌ ಆಗಿದೆ. ಈ ನಡುವೆ ಇದಕ್ಕೆ ಹೊಸ ಫೀಚರ್ಸ್‌ ಅನ್ನೂ ಸಹ ನೀಡಲಾಗುತ್ತಿದ್ದು, ಇನ್ನಷ್ಟು ವಿಶೇಷ ಸೌಲಭ್ಯ ಬಳಕೆದಾರರಿಗೆ ಸಿಗುತ್ತಿವೆ.

ಹೌದು, ಯೂಟ್ಯೂಬ್‌ನಲ್ಲಿ ಇದೀಗ ಗೂಗಲ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರ ಮೂಲಕ ವಿಡಿಯೋ ಸ್ಟ್ರೀಮಿಂಗ್ ಸಮಯದಲ್ಲಿ ಅತ್ಯುತ್ತಮವಾದ ಅನುಭವ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಗೇಮಿಂಗ್ ಪ್ರಿಯರಿಗೆ ಈ ಫೀಚರ್ಸ್‌ ಅಚ್ಚು ಮೆಚ್ಚು. ಹಾಗಿದ್ರೆ ಏನಿದು ಹೊಸ ಫೀಚರ್ಸ್‌?, ಇದನ್ನು ಬಳಕೆ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್‌! ಏನಿದು? ಇದನ್ನು ಬಳಕೆ ಮಾಡುವುದು ಹೇಗೆ?

ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್: ಗೂಗಲ್‌ ಇದೀಗ ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಪ್ಲೇಬಲ್ಸ್‌ (Playables) ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಗೇಮಿಂಗ್ ಅನ್ನು ನೇರವಾಗಿ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ತರುತ್ತದೆ. ಯೂಟ್ಯೂಬ್‌ ಅನ್ನು ಹೆಚ್ಚು ಯಶಸ್ವಿ ಉತ್ಪನ್ನವನ್ನಾಗಿ ಮಾಡುವ ಉದ್ದೇಶದಿಂದ ಯೂಟ್ಯೂಬ್‌ನಲ್ಲಿ ವಿಭಿನ್ನ ಗೇಮಿಂಗ್ ಪ್ರೇಕ್ಷಕರನ್ನು ಆಕರ್ಷಿಸಲು ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ.

ಇನ್ನು ಈ ಹೊಸ ಫೀಚರ್ಸ್‌ ಯಾವುದೇ ಹೆಚ್ಚುವರಿ ಸೇರ್ಪಡೆಗಳು ಅಥವಾ ಇನ್‌ಸ್ಟಾಲ್‌ ಪ್ರಕ್ರಿಯೆ ಇಲ್ಲದೆ ಅದರಲ್ಲೂ ಪ್ರತ್ಯೇಕ ಅಪ್ಲಿಕೇಶನ್‌ಗಳ ಅಗತ್ಯವಿಲ್ಲದೆಯೇ ವಿವಿಧ ಗೇಮ್‌ಗಳಿಗೆ ಇದು ತ್ವರಿತ ಪ್ರವೇಶವನ್ನು ನೀಡುತ್ತದೆ. ಪರಿಣಾಮ ಫೋನ್‌ನಲ್ಲಿ ಅನಗತ್ಯ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದರಿಂದ ಜನರಿಗೆ ಆಗುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನೂ ಮಾಡುತ್ತದೆ. ಪರಿಣಾಮ ಯೂಟ್ಯೂಬ್‌ ಕಡೆ ಹೆಚ್ಚಿನ ವಾಲುವಂತೆ ಆಗಿದೆ.

ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್‌! ಏನಿದು? ಇದನ್ನು ಬಳಕೆ ಮಾಡುವುದು ಹೇಗೆ?

ಯೂಟ್ಯೂಬ್‌ ವೆಬ್‌ಸೈಟ್ ಅಥವಾ ಮೊಬೈಲ್ ಆಪ್‌ನಲ್ಲಿ ನೇರವಾಗಿ ವೈವಿಧ್ಯಮಯ ಗೇಮ್‌ಗಳಿಗೆ ಎಂಟ್ರಿಯಾಗಲು ಪ್ಲೇಬಲ್‌ ಬಳಕೆದಾರರಿಗೆ ಅನುಮತಿ ನೀಡಲಿದ್ದು, ಈ ವಿಶೇಷ ಫೀಚರ್ಸ್ ಪ್ರಸ್ತುತ ಪರೀಕ್ಷೆಯಲ್ಲಿದೆ. ಅದರಲ್ಲೂ ಸುಲಭವಾಗಿ ಶೇರ್‌ ಮಾಡಿಕೊಳ್ಳಬಹುದಾದ ಅಥವಾ ಯೂಟ್ಯೂಬ್‌ನಲ್ಲಿಯೇ ಆಡಬಹುದಾದ ಗೇಮ್‌ಗಳನ್ನು ಈ ಪ್ಲಾಟ್‌ಫಾರ್ಮ್‌ಗೆ ಪರಿಚಯಿಸುವ ಕೆಲಸ ಮಾಡುತ್ತಿದೆ.

ಯಾವೆಲ್ಲಾ ಆಟಗಳು ಲಭ್ಯ?: ಇನ್ನು ಪರೀಕ್ಷೆಗಾಗಿ ಲಭ್ಯವಿರುವ ಆಟಗಳಲ್ಲಿ ಪ್ರಸಿದ್ಧವಾದ ಆಂಗ್ರಿ ಬರ್ಡ್ಸ್: ಶೋಡೌನ್ ಹಾಗೂ ಬ್ರೇನ್ ಔಟ್ ಮತ್ತು ಡೈಲಿ ಕ್ರಾಸ್‌ವರ್ಡ್‌ ನಂತರ ಗೇಮ್‌ಗಳು ಇದರಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸ್ಕೂಟರ್ ಎಕ್ಸ್‌ಟ್ರೀಮ್ ಮತ್ತು ಕ್ಯಾನನ್ ಬಾಲ್ಸ್ 3D ಯಂತಹ ಅತ್ಯುತ್ತಮ ಗೇಮ್‌ಗಳು ಸಹ ಇದರಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಪ್ಲೇಬಲ್ಸ್‌ಗೆ ಎಂಟ್ರಿ ಕೊಡೋದು ಹೇಗೆ?
ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಇದು ಕೇವಲ ಚಂದಾದಾರಿಕೆ ಪಡೆದವರಿಗೆ ಮಾತ್ರ ಲಭ್ಯ ಇದೆ. ಇನ್ನು ಈ ಪ್ಲೇಬಲ್ಸ್‌ ಸೌಲಭ್ಯ ಪಡೆದುಕೊಳ್ಳಲು ಬಳಕೆದಾರರು ಯೂಟ್ಯೂಬ್‌ ಆಪ್‌ ಓಪನ್‌ ಮಾಡಬೇಕಿದೆ. ನಂತರ ಪ್ರೊಫೈಲ್ ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿ ಪ್ರೀಮಿಯಂ ಪ್ರಯೋಜನಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಬೇಕು.ಇದಾದ ನಂತರದಲ್ಲಿ ಪ್ರಾಯೋಗಿಕ ಹೊಸ ಫೀಚರ್ಸ್ ಅನ್ನು ಪ್ರಯತ್ನಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದ್ರೆ ಸಾಕು.

ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್‌! ಏನಿದು? ಇದನ್ನು ಬಳಕೆ ಮಾಡುವುದು ಹೇಗೆ?

ಇನ್ನು ಈ ಆಯ್ಕೆ ನಿಮ್ಮ ಫೋನ್‌ನಲ್ಲಿ ಕಾಣಿಸದೆ ಇದ್ದರೆ ಚಿಂತೆ ಬೇಡ. ಇನ್ನೇನು ಕೆಲವೇ ದಿನಗಳಲ್ಲಿ ಇದು ನಿಮಗೂ ಲಭ್ಯ ಆಗಲಿದೆ. ಹಾಗೆಯೇ ಈ ಪ್ಲೇಬಲ್ಸ್‌ ಪ್ರಯೋಗ ನಡೆಯುತ್ತಿದ್ದು, ಮಾರ್ಚ್ 28 ರವರೆಗೆ ಮುಂದುವರಿಯಲು ನಿರ್ಧರಿಸಲಾಗಿದೆ. ಸಂಪೂರ್ಣ ರೋಲ್‌ಔಟ್‌ಗಾಗಿ ನಿಖರವಾದ ಬಿಡುಗಡೆ ದಿನಾಂಕವನ್ನು ಗೂಗಲ್‌ ಇನ್ನೂ ಖಚಿತಪಡಿಸಿಲ್ಲ. ಅದಾಗ್ಯೂ 2024 ರ ಮೊದಲಾರ್ಧದವರೆಗೆ ಪ್ಲೇಬಲ್ಸ್‌ ಸ್ಥಿರ ರೂಪವು ಲಭ್ಯವಿರುವುದಿಲ್ಲ ಎಂಬ ವದಂತಿ ಇದೆ.

Best Mobiles in India

English summary
Google has now introduced a new feature called Playables on the YouTube platform. These features bring gaming directly to the video streaming platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+