ಗೂಗಲ್‌ 'ಫೋಟೋ ಆಪ್' ಲೈವ್‌ ಫೋಟೋಗಳನ್ನು ಜಿಫ್‌ ಆಗಿ ಬದಲಿಸುತ್ತದೆ

By Suneel
|

ಅಮೆರಿಕ ಟೆಕ್ ದೈತ್ಯ ಗೂಗಲ್‌ ಕಂಪನಿಯು ಐಓಎಸ್‌ಗಳಿಗಾಗಿ 2.0 ವರ್ಸನ್ ಫೋಟೋ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ ಬಳಕೆದಾರರಿಗೆ ಲೈವ್‌ ಆಗಿ ಫೋಟೋ ಎಡಿಟ್ ಮಾಡುವ ಅವಕಾಶ ಮತ್ತು ಶೇರ್‌ ಮಾಡಬಹುದಾದ ಜಿಫ್ ಆಗಿ ಬದಲಿಸಲು ಅವಕಾಶ ನೀಡುತ್ತದೆ.

ಗೂಗಲ್‌ 'ಫೋಟೋ ಆಪ್' ಲೈವ್‌ ಫೋಟೋಗಳನ್ನು ಜಿಫ್‌ ಆಗಿ ಬದಲಿಸುತ್ತದೆ

ಆಪಲ್‌ನ ಐಫೋನ್ 6S ಮತ್ತು ಐಫೋನ್ 6s ಪ್ಲಸ್‌'ನಲ್ಲಿ ಲೈವ್‌ ಫೋಟೋ ಅತ್ಯಾಕರ್ಷಕ ಫೀಚರ್‌ ಆಗಿದ್ದು, ಶೀಘ್ರದಲ್ಲಿ ಐಫೋನ್‌ 7 ಗೆ ಆಪ್‌ ಅನ್ನು ಬಿಡುಗಡೆ ಮಾಡಲಾಗುತ್ತದೆ. ಲೈವ್‌ ಫೋಟೋಗಳನ್ನು ಕ್ಯಾಮೆರಾದ ಸೆಲ್ಯೂಲಾರ್‌ ಐಕಾನ್‌ ಅನ್ನು ಸರಳವಾಗಿ ಕ್ಲಿಕ್‌ ಮಾಡುವ ಮೂಲಕ ಶೂಟ್ ಮಾಡಬಹುದು. ಈ ರೀತಿ ಕ್ಯಾಪ್ಚರ್‌ ಮಾಡಿದ ಫೋಟೋಗಳು ಚಲಿಸುವ ಇಮೇಜ್‌ಗಳಾಗಲಿವೆ.

ಲೈವ್‌ ಫೋಟೋ 1.5 ಸೆಕೆಂಡ್‌ನ ವೀಡಿಯೊ ಮತ್ತು ಆಡಿಯೋವನ್ನು ಕ್ಯಾಪ್ಚರ್‌ ಮಾಡುತ್ತದೆ, ನಂತರ ಶಟರ್‌ ಬಟನ್ ಅನ್ನು ಫೋಟೋ ತೆಗೆಯಲು ಕ್ಲಿಕ್ ಮಾಡಬೇಕು. ಅಲ್ಲದೇ ಜೆಪಿಇಜಿ ಇಮೇಜ್‌ಗಾಗಿ 3 ಸೆಕೆಂಡ್‌ನ ಲೈವ್‌ ಫೋಟೋ ಕ್ಯಾಪ್ಚರ್‌ ಮಾಡಬೇಕು.

ಗೂಗಲ್‌ 'ಫೋಟೋ ಆಪ್' ಲೈವ್‌ ಫೋಟೋಗಳನ್ನು ಜಿಫ್‌ ಆಗಿ ಬದಲಿಸುತ್ತದೆ

ಗೂಗಲ್‌ ಇತ್ತೀಚೆಗೆ ಮೊದಲು ಲೈವ್‌ ಫೋಟೋ ಎಡಿಟ್‌ ಮಾಡುವ ಫೀಚರ್‌ ಅನ್ನು 'ಮೋಶನ್‌ ಸ್ಟಿಲ್ಸ್' ಆಪ್‌ನಲ್ಲಿ ಪರಿಚಯಿಸಿತ್ತು. ಅಪ್‌ಗ್ರೇಡ್‌ ಆದ ಆಪ್‌ನಲ್ಲಿ ವೀಡಿಯೋವನ್ನು ನೇರವಾಗಿ ಯೂಟ್ಯೂಬ್‌ನಲ್ಲಿ ಶೇರ್‌ ಮಾಡುವ ಫೀಚರ್‌ ಅನ್ನು ಅಭಿವೃದ್ದಿಪಡಿಸಿತ್ತು. ಪ್ರಸ್ತುತದಲ್ಲಿ ಐಓಎಸ್‌ ಫೋಟೋ ಆಪ್‌ನಲ್ಲಿ ಬಳಕೆದಾರರು ಲೈವ್‌ ಫೋಟೋಗಳನ್ನು ಇತರೆ ಮೆಸೇಜಿಂಗ್‌ ಆಪ್‌ಗಳಿಗೆ ಮತ್ತು ಆಪಲ್‌ನ ಐಮೆಸೇಜ್‌ ಆಪ್‌ಗೆ ಶೇರ್‌ ಮಾಡಬಹುದು.

ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?

Best Mobiles in India

Read more about:
English summary
Google Photos 2.0 for iOS can now turn Live Photos into GIFs. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X