ಗೂಗಲ್ ಇನ್ಸ್‌ಟೆಂಟ್ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯ: ವಿಶೇಷತೆ ಏನು..?
ಇನ್ನು ಮುಂದೆ ನೀವು ಆಪ್ ಇನ್ಟಾಲ್ ಮಾಡಿಕೊಳ್ಳದೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಆಂಡ್ರಾಯ್ಡ್ ಇನ್‌ಸೆಂಟ್ ಆಪ್ಸ್ ಟೆಕ್ನಾಲಜಿಯನ್ನು ಪರಿಚಯಿಸಿದೆ ಎನ್ನಲಾಗಿದೆ. ಇದು ಮೊಬೈಲ್ ಆಪ್ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ ಎನ್ನುವ
ಸರ್ಚ್ ಇಂಜಿನ್ ದೈತ್ಯ ಗೂಗಲ್ ಇಂದು ಹೊಸದಾಗಿ ತನ್ನ ಗೂಗಲ್ ಪ್ಲೇ ಸ್ಟೋರಿನಲ್ಲಿ ಹೊಸ ಬದಾಲವಣೆಯನ್ನು ಮಾಡಿದೆ ಎನ್ನಲಾಗಿದೆ. ಹೊಸ ಮಾದರಿಯಲ್ಲಿ ಆಪ್ ಗಳನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ.

ಓದಿರಿ: ಬರಲಿದೆ ಹೊಸ ಟೆಕ್ನಾಲಜಿ: ಎಲೆಕ್ಟ್ರಿಕ್ ವಿಮಾನವು ಶೀಘ್ರವೇ ಹಾರಲಿದೆ...!
ಇನ್ನು ಮುಂದೆ ನೀವು ಆಪ್ ಇನ್ಟಾಲ್ ಮಾಡಿಕೊಳ್ಳದೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಆಂಡ್ರಾಯ್ಡ್ ಇನ್‌ಸೆಂಟ್ ಆಪ್ಸ್ ಟೆಕ್ನಾಲಜಿಯನ್ನು ಪರಿಚಯಿಸಿದೆ ಎನ್ನಲಾಗಿದೆ. ಇದು ಮೊಬೈಲ್ ಆಪ್ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ ಎನ್ನುವ ಮಾತು ಕೇಳಿಬಂದಿದೆ.

ಇನ್‌ಸೆಂಟ್ ಆಪ್ಸ್:
ಈ ಹಿಂದೆ ಗೂಗಲ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡ ನಂತರವೇ ಬಳಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಈ ವಿಧಾನವನ್ನು ಬದಲಾಯಿಸಲು ಮುಂದಾಗಿದೆ. ಆಪ್ ಮೊದಲು ಬಳಸಿ ಆಮೇಲೆ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಪ್ಲೇ ಸ್ಟೋರಿನಲ್ಲಿ ಲಭ್ಯ:
ಈ ಹಿಂದೆ ಮೇನಲ್ಲಿಯೇ ಗೂಗಲ್ ಇನ್‌ಸೆಂಟ್ ಆಪ್ಸ್ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಸದ್ಯ ಇದು ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದು, ನೀವು ಇನ್ನು ಮುಂದೆ ಯಾವುದೇ ರೀತಿಯಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳದೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಟ್ರೈ ಇಟ್ ನೌ:
ಇನ್‌ಸೆಂಟ್ ಆಪ್ಸ್ ಆಪ್‌ಗಳನ್ನು ಬಳಕೆ ಮಾಡಿಕೊಳ್ಳುವುದಾಗಿ ಪ್ಲೇ ಸ್ಟೊರಿನಲ್ಲಿ ಟ್ರೈ ಇಟ್ ನೌ ಎನ್ನುವ ಆಯ್ಕೆಯನ್ನು ನೀಡಲಾಗಿದೆ. ಇದಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದು.

ಸದ್ಯ ಕಡಿಮೆ ಆಯ್ಕೆ:
ಸದ್ಯ ಕಡಿಮೆ ಪ್ರಮಾಣದ ಆಪ್‌ಗಳು ಮಾತ್ರವೇ ಇನ್‌ಸೆಂಟ್ ಆಪ್ಸ್ ನಲ್ಲಿ ಕಾಣಿಸಿಕೊಂಡಿದೆ. ಸ್ಪಲ್ಪ ದಿನಗಳಲ್ಲಿ ನಂತರದಲ್ಲಿ ಈ ಕಲೆಕ್ಷನ್ ಹೆಚ್ಚಾಗಲಿದೆ ಎನ್ನಲಾಗಿದೆ.

17 ದೇಶಗಳಲ್ಲಿ ಲಭ್ಯ:
ಸದ್ಯ ಈ ಇನ್‌ಸೆಂಟ್ ಆಪ್ಸ್ ಒಟ್ಟು 17 ದೇಶಗಳಲ್ಲಿ ಈ ಸೇವೆಯೂ ಲಭ್ಯವಿದ್ದು, ಶೀಘ್ರವೇ ಎಲ್ಲಾ ದೇಶಗಳಲ್ಲಿಯೂ ಈ ಸೇವೆಯೂ ದೊರೆಯಲಿದೆ ಎನ್ನಲಾಗಿದೆ.

ಗೂಗಲ್ ಪ್ಲೇ ಸ್ಟೋರ್ ಆಪ್‌ಡೇಟ್:
ಈ ಸೇವೆಯನ್ನು ಪಡೆದುಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ಆಪ್‌ಡೇಟ್ ಮಾಡಿಕೊಳ್ಳಬೇಕಾಗಿದೆ. ಇದನ್ನು ಆಪ್‌ಡೇಟ್ ಮಾಡಿದರೆ ಮಾತ್ರವೇ ಅವಕಾಶ ದೊರೆಯಲಿದೆ.


Click it and Unblock the Notifications








