ಬರಲಿದೆ ಹೊಸ ಟೆಕ್ನಾಲಜಿ: ಎಲೆಕ್ಟ್ರಿಕ್ ವಿಮಾನವು ಶೀಘ್ರವೇ ಹಾರಲಿದೆ...!
ಅಮೆರಿಕಾ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎನ್ನಲಾಗಿದೆ. ಎಲೆಕ್ಟ್ರಿಕ್ ವಿಮಾನವು ಶೀಘ್ರವೇ ಆಗಸದಲ್ಲಿ ಹಾರಲಿದೆ. ಇದು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಆಲೆಯನ್ನು ಸೃಷ್ಠಿಸಲಿದೆ ಎನ್ನಲಾಗಿದೆ.
ವಿಶ್ವದಲ್ಲಿ ಸದ್ಯ ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನ ಅವಿಷ್ಕಾರಕ್ಕೆ ಹೆಚ್ಚಿನ ಆದ್ಯತೆಯೂ ದೊರೆಯುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬಸ್, ಕಾರುಗಳು ಕಾಣಿಸಿಕೊಂಡಿದೆ. ಇದೇ ಮಾದರಿಯಲ್ಲಿ ಶೀಘ್ರವೇ ಎಲೆಕ್ಟ್ರಿಕ್ ವಿಮಾನವು ಬರಲಿದೆ ಎನ್ನಲಾಗಿದೆ.

ಓದಿರಿ: ಒನ್‌ಪ್ಲಸ್ 5Tನಲ್ಲಿ ಫುಲ್‌ಸ್ಕ್ರಿನ್ ಡಿಸ್‌ಪ್ಲ: ಮತ್ತಷ್ಟು ವಿಶೇಷತೆಗಳೊಂದಿಗೆ
ಅಮೆರಿಕಾ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎನ್ನಲಾಗಿದೆ. ಎಲೆಕ್ಟ್ರಿಕ್ ವಿಮಾನವು ಶೀಘ್ರವೇ ಆಗಸದಲ್ಲಿ ಹಾರಲಿದೆ. ಇದು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಆಲೆಯನ್ನು ಸೃಷ್ಠಿಸಲಿದೆ ಎನ್ನಲಾಗಿದೆ.

ಜುನುಂ ಏರೊ ವಿಮಾನ ಸಂಸ್ಥೆ:
ಈಗಾಗಲೇ ವಿಮಾನ ತಯಾರಿಕೆಯಲ್ಲಿ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಹಾಗೂ ಜೆಟ್‌ಬ್ಲೂ ಏರ್‌ವೇಸ್ ಕಾರ್ಪ್ ಕಂಪನಿಯ ಜೊತೆಗೆ ಅಮೆರಿಕದ ಸೀಯಾಟಲ್‌ನ ‘ಜುನುಂ ಏರೊ' ಜೊತೆಗೆ ಸೇರಿಕೊಂಡು ಶೀಘ್ರವೇ ಎಲೆಕ್ಟ್ರಿಕ್ ವಿಮಾನವನ್ನು ನಿರ್ಮಿಸಲಿದೆ ಎನ್ನಲಾಗಿದೆ.

ಮೊದಲಿಗೆ ಸಣ್ಣ ವಿಮಾನ ತಯಾರಿ:
ಮೊದಲಿಗೆ ಕೇವಲ 12 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಇರುವ ಸಣ್ಣ ಎಲೆಕ್ಟ್ರಿಕ್ ವಿಮಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಶೀಘ್ರವೇ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದಾದ ಎಲೆಕ್ಟ್ರಿಕ್ ವಿಮಾನವನ್ನು ತಯಾರು ಮಾಡಲಾಗುವುದು ಎನ್ನಲಾಗಿದೆ.

ಸಾವಿರ ಮೈಲು ಹಾರಾಟ:
ಈಗಾಗಲೇ ಎಲೆಕ್ಟ್ರಿಕ್ ವಿಮಾನ ಹಾರಾಟಕ್ಕೆ ಸಿದ್ಧವಾಗುತ್ತಿದ್ದು, ಸದ್ಯ ಇದು ಸಾವಿರ ಮೈಲುಗಳವರೆಗೆ ಹಾರಾಟ ನಡೆಸಲಿದೆ. ಇದಕ್ಕಾಗಿ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಸಲಾಗುತ್ತದೆ. ಈ ಬ್ಯಾಟರಿಗಳು ಭವಿಷ್ಯದ ವಾಹನದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ.

ಈಗಾಗಲೇ ಸೋಲಾರ್ ವಿಮಾನದ ಹಾರಾಟ:
ಈಗಾಗಲೇ ಸೋಲಾರ್ ವಾಹನಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಸೋಲಾರ್ ಕಾರುaಗಳು ಸಹ ಬೇಡಿಕೆ ಸೃಷ್ಟಿಸಿವೆ. ಈಗಾಗಲೇ ಸೋಲಾರ್ ವಿಮಾನವು ಯಶಸ್ವಿ ಹಾರಾಟ ನಡೆಸಿದೆ. ಆದರೆ ಇದು ಜನರ ಹಾರಟಕ್ಕೆ ಮುಕ್ತವಾಗಿಲ್ಲ ಎನ್ನಲಾಗಿದೆ.

ಕೇಂದ್ರ ಸರಕಾರದ ಸಹಕಾರ:
ಈಗಾಗಲೇ ತೈಲ ಆಮದು ತಗ್ಗಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯ ಅಂಗವಾಗಿ ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನ ಬಳಕೆ ಮುಂದಾಗಲಿದೆ. ಇದೇ ಮಾದರಿಯಲ್ಲಿ ಎಲೆಕ್ಟ್ರಿಕ್ ವಿಮಾನಗಳು ಆಮದು ಮಾಡಿಕೊಳ್ಳಲಿದೆ ಎನ್ನಲಾಗಿದೆ.


Click it and Unblock the Notifications








