ಜನಪ್ರಿಯವಾಗಿದ್ದ 29 'ಬ್ಯೂಟಿ ಕ್ಯಾಮೆರಾ' ಆಪ್‌ಗಳನ್ನು ನಿಷೇಧಿಸಿತು 'ಗೂಗಲ್'!
ಅಶ್ಲೀಲ ವಿಷಯವನ್ನು ಹಂಚಿಕೊಳ್ಳುವ ಮತ್ತು ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದ 29 ದುರುದ್ದೇಶಪೂರಿತ ಕ್ಯಾಮೆರಾ ಆಪ್‌ಗಳನ್ನು ಗೂಗಲ್ ತನ್ನ ಗೂಗಲ್ ಪ್ಲೇ ಸ್ಟೋರ್‌ಗಳಿಂದ ತೆಗೆದುಹಾಕಿದೆ. ಫಿಲ್ ಪೋಟೊ ಎಡಿಟರ್, ಸೂಪರ್ ಕ್ಯಾಮೆರಾ, ಫೋಟೊ ಆರ್ಟ್ ಎಫೆಕ್ಟ್, ಸೆಲ್ಫೀ ಕ್ಯಾಮೆರಾ ಪ್ರೊ ಮತ್ತು ಫೋಟೊ ಎಡಿಟರ್ ನಂತಹ ಆಪ್‌ಗಳು ಸಹ ಲೀಸ್ಟ್‌ನಲ್ಲಿವೆ.
ಹೌದು, ಅತ್ಯಂತ ಜನಪ್ರಿಯವಾಗಿದ್ದ ಹಲವು ಬ್ಯೂಟಿ ಕ್ಯಾಮೆರಾ ಆಪ್‌ಗಳು ಗ್ರಾಹಕರಿಗೆ ಮೋಸ ಮಾಡುತ್ತಿರುವುದು ಕಂಡುಬಂದಿದೆ. ಹಾಗಾಗಿ, ಗೂಗಲ್ ಇಂತಹ 29 ಬ್ಯೂಟಿ ಕ್ಯಾಮೆರಾ ಆಪ್‌ಗಳನ್ನು ಡಿಲೀಟ್ ಮಾಡಿದೆ. ನಿರ್ದಿಷ್ಟವಾಗಿ ಭಾರತದಲ್ಲಿ ಇಂತಹ ದುರುದ್ದೇಶಪೂರಿತ ಬ್ಯೂಟಿ ಕ್ಯಾಮೆರಾ ಆಪ್‌ಗಳು ಹೆಚ್ಚು ಡೌನ್‌ಲೋಡ್ ಆಗಿರುವುದನ್ನು ವರದಿಯೊಂದು ಹೇಳಿದೆ.

ಯುಎಸ್ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ಟ್ರೆಂಡ್ ಮೈಕ್ರೊ ಈ ಬಗ್ಗೆ ವರದಿ ಮಾಡಿದ್ದು, ಇಂತಹ ದುರುದ್ದೇಶಪೂರಿತ ಹಲವು ಆಪ್‌ಗಳು ಬ್ರೌಸರ್ ಮೂಲಕ ಪಾಪ್ ಅಪ್ ಆಗುವ ಜಾಹೀರಾತುಗಳನ್ನು ತಳ್ಳುತ್ತಿವೆ. ಈ ಆಪ್ ಬಳಕೆದಾರರು ಫೋನನ್ನು ಅನ್ಲಾಕ್ ಮಾಡಿದಾಗ ಮೋಸದ ವಿಷಯ ಮತ್ತು ಅಶ್ಲೀಲತೆ ಪೂರ್ಣ ಸ್ಕ್ರೀನ್ ಜಾಹೀರಾತುಗಳನ್ನು ಕಾಣಿಸುತ್ತವೆ ಎಂದಿದೆ.
ಈ ಕಳ್ಳ ಅಪ್ಲಿಕೇಶನ್ಗಳು ಲಕ್ಷಾಂತರ ಬಾರಿ ಡೌನ್ಲೋಡ್ ಆಗಿವೆ. ಭಾರತ ಸೇರಿದಂತೆ ಏಷ್ಯಾದಲ್ಲಿ ಇವುಗಳುಳ ಡೌನ್‌ಲೋಡ್ ಆಗಿರುವ ಪ್ರಮಾಣ ಹೆಚ್ಚಿದೆ. ಇಂತಹ ಆಪ್‌ಗಳು ಯಾವುದೇ ಜಾಹೀರಾತುಗಳನ್ನು ನೀಡುವ ಸೂಚನೆ ನೀಡುವುದಿಲ್ಲ. ಹೀಗಾಗಿ ಬಳಕೆದಾರರಿಗೆ ಜಾಹಿರಾತುಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ತಿಳಿಯಲು ಕಷ್ಟವಾಗಬಹುದು ಎಂದು ವರದಿ ಹೇಳಿದೆ.

ಈ ಆಪ್‌ಗಳಲ್ಲಿ ಯಾವುದೇ ಒಂದು ಆಪ್ ಅನ್ನು ಡೌನ್‌ಲೋಡ್ ಮಾಡುವ ಬಳಕೆದಾರನು ತಕ್ಷಣ ಆ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಸಹ ಅಸಮರ್ಥನಾಗುತ್ತಾನೆ. ಈ ಆಪ್‌ಗಳು ಶಾರ್ಟ್‌ಕಟ್ ಅನ್ನು ರಚಿಸಿಕೊಳ್ಳುತ್ತವೆ. ಹೇಗಾದರೂ, ಆಪ್ ಪಟ್ಟಿಯಿಂದ ಅದರ ಐಕಾನ್ ಮರೆಮಾಡುತ್ತದೆ. ಇದರಿಂದ ಕೆಲವರಿಗೆ ಆಪ್ ಡಿಲೀಟ್ ಮಾಡಲು ಸಹ ಕಷ್ಟ ಎಂದಿದೆ.
ಓದಿರಿ: ಭಾರತದಲ್ಲಿ ಇಂದು 'ಗ್ಯಾಲಕ್ಸಿ ಎಂ40' ರಿಲೀಸ್!..ಬೆಲೆ ಕೂಡ ಫಿಕ್ಸ್!!


Click it and Unblock the Notifications








