ಗೂಗಲ್ ತೇಜ್‌ಗೆ ಸೆಡ್ಡುಹೊಡೆದ ಸರ್ಕಾರ!..ಭೀಮ್ ಬಳಕೆದಾರರಿಗೆ ಬಂಪರ್ ಆಫರ್!!

|

ಭಾರತದಲ್ಲಿ ಭಾರೀ ಬೆಳವಣಿಗೆ ಕಾಣುತ್ತಿರುವ ಗೂಗಲ್‌ನ ಪೇಮೆಂಟ್ ಆಪ್ ಗೂಗಲ್ ತೇಜ್‌ಗೆ ಸೆಡ್ಡುಹೊಡೆಯಲು ಭಾರತ ಸರ್ಕಾರದ ಅಧಿಕೃತ ಪೇಮೆಂಟ್ ಆಪ್ ಭೀಮ್ ಮುಂದಾಗಿದೆ. ಡಿಜಿಟಲ್‌ ಪೇಮೆಂಟ್ ಮೊಬೈಲ್‌ ಆಪ್‌ ಭೀಮ್ ಅನ್ನು ಹೆಚ್ಚು ಪ್ರಚುರ ಪಡಿಸಲು ಕೇಂದ್ರ ಸರಕಾರ ಏ.14ರಿಂದ ನಾನಾ ಬಗೆಯ ಕ್ಯಾಶ್‌ ಬ್ಯಾಕ್‌ ಮತ್ತು ಇನ್ಸೆಂಟಿವ್‌ಗಳನ್ನು ನೀಡಲಿದೆ.

ಫೋನ್‌ಪೇ, ಗೂಗಲ್‌ ತೇಜ್‌ ಮತ್ತು ಪೇಟಿಎಂ ಮಾದರಿಯಲ್ಲಿ ಈಗ ಸರಕಾರ ಕೂಡ ಕ್ಯಾಶ್‌ ಬ್ಯಾಕ್‌ ನೀಡಲು ಮುಂದಾಗಿದ್ದು, ಸರ್ಕಾರ ಬರೋಬ್ಬರಿ 900 ಕೋಟಿ ರೂ.ಗಳನ್ನು ಇದಕ್ಕಾಗಿ ಬಳಸಲಿದೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ, ಇನ್ಮುಂದೆ ಸರ್ಕಾರಿ ಪೇಮೆಂಟ್ ಆಪ್ ಬಳಕೆದಾರರಿಗೂ ಕೂಡ ಸಾವಿರಾರು ರೂಪಾಯಿಗಳನ್ನು ಗೆಲ್ಲಬಹುದಾದ ಅವಕಾಶ ಸಿಗಲಿದೆ.

ಗೂಗಲ್ ತೇಜ್‌ಗೆ ಸೆಡ್ಡುಹೊಡೆದ ಸರ್ಕಾರ!..ಭೀಮ್ ಬಳಕೆದಾರರಿಗೆ ಬಂಪರ್ ಆಫರ್!!

ದೇಶಿಯ ಮಾರುಕಟ್ಟೆಯಲ್ಲಿ ಪೇಮೆಂಟ್ ಆಪ್ ಸೇವೆಯನ್ನು ಆರಂಭಿಸಿ ಅತೀ ಹೆಚ್ಚು ಬಳಕೆದಾರರನ್ನು ಸೆಳೆಯುವಲ್ಲಿ ಗೂಗಲ್ ಒಡೆತನದ ತೇಜ್ ಆಪ್ ಯಶಸ್ವಿಯಾಗಿತ್ತು. ಬಳಕೆದಾರರಿಗೆ ಆಕರ್ಷಕ ನಗದು ಬಹುಮಾನವನ್ನು ನೀಡಿದ್ದರಿಂದ, ಜನರು ಲಾಭಕ್ಕಾಗಿ ತೇಜ್ ಹಿಂದೆ ಬಿದ್ದಿದ್ದರು. ಇದೀಗ ಭೀಮ್ ಆಪ್ ಇದೇ ಕಾರ್ಯಚರಣೆಯನ್ನು ನಕಲು ಮಾಡಲು ಮುಂದಾಗಿದೆ.

ಬೇರೆ ಪೇಮೆಂಟ್ ಆಪ್ ಗಳು ಕೇವಲ ಬಳಕೆದಾರರಿಗೆ ಮಾತ್ರವೇ ಹೆಚ್ಚಿನ ಲಾಭವನ್ನು ಮಾಡಿಕೊಟ್ಟರೆ ಭೀಮ್ ಆಪ್‌ ಅನ್ನು ಬಳಸುವ ವರ್ತಕರಿಗೆ ಕ್ಯಾಷ್ ಬ್ಯಾಕ್‌ ಹಾಗೂ ಇನ್ಸೆಂಟಿವ್‌ಗಳು ಸಿಗಲಿವೆ ಎನ್ನಲಾಗಿದೆ. ಹಾಗಾಗಿ, ಫೋನ್‌ಪೇ, ಗೂಗಲ್‌ ತೇಜ್‌ ಮತ್ತು ಪೇಟಿಎಂ ಆಪ್‌ಗಳನ್ನು ಮತ್ತೆ ಭೀಮ್ ಆಪ್ ಹಿಂದಿಕ್ಕುವುದೇ ಎಂಬುದನ್ನು ಕಾದುನೋಡಬೇಕಿದೆ.

ಗೂಗಲ್ ತೇಜ್‌ಗೆ ಸೆಡ್ಡುಹೊಡೆದ ಸರ್ಕಾರ!..ಭೀಮ್ ಬಳಕೆದಾರರಿಗೆ ಬಂಪರ್ ಆಫರ್!!

ದೇಶದಲ್ಲಿ ನೋಟು ನಿಷೇಧದ ಬಿಸಿಯು ಜನರನ್ನು ಡಿಹಿಟಲ್ ವ್ಯವಹಾರದ ಕಡೆಗೆ ಒಲವು ಮೂಡಿಸುವಂತೆ ಮಾಡಿದ್ದರಿಂದ ಕೇಂದ್ರ ಸರ್ಕಾರ 'ಜನಮಾನ್ಯರಿಗೆ ಡಿಜಿಟಲ್ ಬ್ಯಾಂಕಿಂಗ್ ಅನ್ನು ಸರಳಿಕೃತಗೊಳಿಸಲು ಸಾಕಷ್ಟು ಯತ್ನ ನಡೆಸಿತ್ತು. ಹಾಗಾಗಿ, 2016ರಲ್ಲಿ ಪ್ರಧಾನಿ ಮೋದಿಯವರು ಭೀಮ್ ಆಪ್ ಅನ್ನು ಬಿಡುಗಡೆಗೊಳಿಸಿದ್ದರು.

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್

ಓದಿರಿ: ಗೂಗಲ್ ಹೊಮ್ ಸ್ಮಾರ್ಟ್‌ ಸ್ಪೀಕರ್ ಖರೀದಿಗೆ ಜಿಯೋ ಫೈ ಮತ್ತು 100GB ಡೇಟಾ ಉಚಿತ!!

Best Mobiles in India

English summary
he government is taking a leaf out of payment apps such as Google Tez and PhonePe to offer cashbacks to users .to kno more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X