Subscribe to Gizbot

ಗೂಗಲ್ ಹೊಮ್ ಸ್ಮಾರ್ಟ್‌ ಸ್ಪೀಕರ್ ಖರೀದಿಗೆ ಜಿಯೋ ಫೈ ಮತ್ತು 100GB ಡೇಟಾ ಉಚಿತ!!

Written By:

ಅಮೆಜಾನ್ ಸ್ಮಾರ್ಟ್‌ ಸ್ಪೀಕರ್‌ಗಳಿಗೆ ಇದು ಸೆಡ್ಡು ಹೊಡೆಯಲು ಬಂದಿರುವ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಖರೀದಿಸುವವರಿಗೆ ಜಿಯೋ ಫೈ ವೈಫೈ ರೂಟರ್ ಉಚಿತವಾಗಿ ದೊರೆಯಲಿದೆ ಎಂದು ಗೂಗಲ್ ಉತ್ಪನ್ನ ನಿರ್ವಹಣಾ ಉಪಾಧ್ಯಕ್ಷ ಮತ್ತು ಗೃಹ ಉತ್ಪನ್ನಗಳ ಜನರಲ್ ಮ್ಯಾನೇಜರ್ ರಿಶಿ ಚಂದ್ರ ಅವರು ಹೇಳಿದ್ದಾರೆ.

ಕಳೆದ ಮಂಗಳವಾರವಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಗೂಗಲ್ ಹೋಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್‌ಗಳನ್ನು ಹೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿದ್ದು, ಗೂಗಲ್ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾರ್ಯನಿರ್ವಹಿಸುವ ಗೂಗಲ್ ಸ್ಪಿಕರ್‌ಗಗಳ ಜೊತೆಯಲ್ಲಿ ಜಿಯೋ ಫೈ ವೈಫೈ ರೂಟರ್ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.

ಗೂಗಲ್ ಹೊಮ್ ಸ್ಮಾರ್ಟ್‌ ಸ್ಪೀಕರ್ ಖರೀದಿಗೆ ಜಿಯೋ ಫೈ ಮತ್ತು 100GB ಡೇಟಾ ಉಚಿತ!!

ದೇಶದಾಧ್ಯಂತ 750 ರಿಟೇಲ್ ಸ್ಟೋರ್‌ಗಳಲ್ಲಿ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್ ಹೋಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್‌ಗಳನ್ನು ಮಾರಾಟಕ್ಕಿಡಲಾಗಿದೆ. ಗೂಗಲ್ ಹೋಮ್ ಸ್ಪೀಕರ್ ಬೆಲೆ 9,999 ರುಪಾಯಿಗಳಗಳಾಗಿದ್ದು, ಹೋಮ್ ಮಿನಿ ಬೆಲೆ 4,499 ರೂ.ಗಳಾಗಿವೆ. ಈ ಎರಡು ಸ್ಪೀಕರ್‌ಗಳ ಜೊತೆ ಉಚಿತ ಜಿಯೋ ಫೈ ರೂಟರ್ ದೊರೆಯಲಿದೆ.

How to read deleted WhatsApp messages - GIZBOT KANNADA

ಗೂಗಲ್ ಹೋಮ್‌ನಲ್ಲಿ ಪ್ಲೇ ಬ್ಯಾಕ್ ಕಂಟ್ರೋಲ್, ವಾಲ್ಯೂಮ್ ಮತ್ತು ಗೂಗಲ್ ಅಸಿಸ್ಟೆಂಟ್ ಆಕ್ಟಿವ್ ಬಟನ್ ಕಾಣಬಹುದಾದ್ದು, ಆಪ್ ಮೂಲಕವೂ ಕಾರ್ಯನಿರ್ವಹಿಸಲಿದೆ. ವೈಫೈನಿಂದ ಮಾತ್ರವೇ ಕಾರ್ಯನಿರ್ವಹಿಸಲಿರುವ ಇದನ್ನು ಟಿವಿ ಮತ್ತು ಕ್ರೊಮ್ ಕಾಸ್ಟ್ ಹಾಗೂ ಮನೆಯಲ್ಲಿರುವ ಇತರೆ ಸ್ಮಾರ್ಟ್ ವಸ್ತುಗಳೊಂದಿಗೆ ಕನೆಕ್ಟ್ ಮಾಡಬಹುದಾಗಿದೆ.

ಗೂಗಲ್ ಹೊಮ್ ಸ್ಮಾರ್ಟ್‌ ಸ್ಪೀಕರ್ ಖರೀದಿಗೆ ಜಿಯೋ ಫೈ ಮತ್ತು 100GB ಡೇಟಾ ಉಚಿತ!!

ಗೂಗಲ್ ಹೊಮ್ ಮಿನಿ, ಹೆಸರೇ ಹೇಳುವಂತೆ ಇದು ಚಿಕ್ಕ ಸ್ಪೀಕರ್ ಆಗಿದ್ದು, ಇದು ಆಪ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅನೇಕ ಕಾರ್ಯಗಳಿಗೆ ಸಹಾಯಕಾರಿಯಾಗಲಿದೆ. ಇದು ಸಹ ಸ್ಮಾರ್ಟ್ ಡಿವೈಸ್‌ಗಳೊಂದಿಗೆ ಕನೆಕ್ಟ್ ಆಗಲಿದೆ. ಇದನ್ನು ಟಿವಿ ಮತ್ತು ಕ್ರೊಮ್ ಕಾಸ್ಟ್ ನೊಂದಿಗೆಯೂ ಕನೆಕ್ಟ್ ಮಾಡಬಹುದಾಗಿದೆ ಎಂದು ರಿಶಿ ಚಂದ್ರ ತಿಳಿಸಿದ್ದಾರೆ.

English summary
Here's how you can get JioFi free with the all-new Google Home, Home Mini. to nknow more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot