ಪರೀಕ್ಷೆಯ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅಥವಾ ಅನುಮಾನ ಎದುರಾದರೆ ಉಪನ್ಯಾಸಕರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳುತ್ತಾರೆ. ಆದರೆ, ಒಂದು ವೇಳೆ ಉಪನ್ಯಾಸಕರು ಸಂಪರ್ಕಕ್ಕೆ ಸಿಗದಿದ್ದ ಪಕ್ಷದಲ್ಲಿ ಏನು ಮಾಡುವುದು ಎಂಬ ದೊಡ್ಡ ಆತಂಕ ಮಕ್ಕಳಿಗೆ ಮಾತ್ರವಲ್ಲದೇ ಪೋಷಕರಿಗೂ ಕಾಡುತ್ತಿರುತ್ತದೆ.!!
ಹಾಗಾಗಿಯೇ, ಪಠ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅಥವಾ ಅನುಮಾನ ಎದುರಾದರೆ ಈ ಆತಂಕವನ್ನು ಹೋಗಲಾಡಿಸುವ ಸಲುವಾಗಿ 'ಹ್ಯಾಶ್‌ಲರ್ನ್' ಆಪ್ ಬಂದಿದೆ. ಕೇವಲ 90 ಸೆಕೆಂಡ್‌ಗಳಲ್ಲಿಯೇ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಶಿಕ್ಷಕರು ವಿದ್ಯಾರ್ಥಿಗಳ ಪಠ್ಯದ ಸಮಸ್ಯೆಗಳಿಗೆ ತಕ್ಷಣದಲ್ಲೇ ಪರಿಹಾರ ನೀಡಲಿದ್ದಾರೆ ಎಂದು ಹ್ಯಾಶ್‌ಲರ್ನ್ ಸಂಸ್ಥೆ ತಿಳಿಸಿದೆ.!!

ಐಐಟಿಗಳು, ಎನ್ಐಟಿಗಳು, ಬಿಐಟಿಎಸ್ ಮತ್ತು ಎಐಐಎಂಎಸ್‌ಗಳಂತಹ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಹ ತಜ್ಞರನ್ನು ಹ್ಯಾಶ್‌ಲರ್ನ್ ಆಪ್ ಮೂಲಕ ಸೇವೆ ನೀಡಲು ಆಯ್ಕೆ ಮಾಡಲಾಗುತ್ತದೆ. ಹಾಗಾಗಿ, ವಿಧ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹಿಸಿಕೊಳ್ಳಲು ಸಾಧ್ಯವಿದೆ ಎಂದು ಹ್ಯಾಶ್‌ಲರ್ನ್ ಸಂಸ್ಥೆ ಹೇಳಿದೆ.!!

'ಹ್ಯಾಶ್‌ಲರ್ನ್' ಆಪ್ ಮೂಲಕ 8ನೇ ತರಗತಿಯಿಂದ 12ನೇ ತರಗತಿವರೆಗಿನ ಗಣಿತ, ಜೀವವಿಜ್ಞಾನ, ಅಕೌಂಟ್ಸ್, ಭೌತವಿಜ್ಞಾನ, ರಸಾಯನ ವಿಜ್ಞಾನ, ಸಸ್ಯವಿಜ್ಞಾನ ಮತ್ತು ಬಿಸಿನೆಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಬಗೆಹರಿಸಿಕೊಳ್ಳಬಹುದಾಗಿದೆ. ಜತೆಗೆ 14 ವಿಭಿನ್ನ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿಸಲು ಆಪ್ ಸಹಾಯ ಮಾಡುತ್ತದೆ.!!

ಇನ್ನು ಆಸಕ್ತ ವಿದ್ಯಾರ್ಥಿಗಳು ಈ ಮೊಬೈಲ್ ಸಂಖ್ಯೆಗೆ 9206045180 ಮಿಸ್ಡ್ ಕಾಲ್ ಕೊಡುವ ಮೂಲಕ ಹ್ಯಾಶ್‌ಲರ್ನ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಆಪ್ ವಿನ್ಯಾಸಕರಾದ ಗೋಪಾಲಕೃಷ್ಣನ್ ಹೇಳಿದ್ದಾರೆ. ಹಾಗಾದರೆ, ಏಕೆ ತಡ? ಪ್ಲೇಸ್ಟೋರ್‌ನಲ್ಲಿ Hashlearn app ಎಂದು ಹುಡುಕಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.!!
ಓದಿರಿ: ಯಾವುದೇ ಆಸ್ತಿ ಖರೀದಿಗೂ ಮುನ್ನ ಸರ್ಕಾರಿ ದಾಖಲೆ ಪರಿಶೀಲಿಸಲು ಬಂತು ಆಪ್!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.