Home
Apps

ಯಾವುದೇ ಆಸ್ತಿ ಖರೀದಿಗೂ ಮುನ್ನ ಸರ್ಕಾರಿ ದಾಖಲೆ ಪರಿಶೀಲಿಸಲು ಬಂತು ಆಪ್!!

ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಿ ಅದು ಒತ್ತುವರಿ ಜಾಗವೇ, ಸರ್ಕಾರಕ್ಕೇ ಸೇರಿದ್ದೇ ಅಥವಾ ಗೋಮಾಳವೇ ಎಂಬುದನ್ನು ಆಪ್‌ ಮೂಲಕವೇ ತಿಳಿಯಬಹುದುದಾಗಿದೆ.!

By Bhaskar N J

ಸ್ಮಾರ್ಟ್‌ಫೋನ್ ಮೂಲಕ ಜನರಿಗೆ ಏನೆಲ್ಲಾ ಸೌಲಭ್ಯ ನೀಡಬಹುದು ಎನ್ನುವುದಕ್ಕೆ ರಾಜ್ಯ ಕಂದಾಯ ಇಲಾಖೆ ಪರಿಚಯಿಸಿರುವ 'ದಿಶಾಂಕ್' ಆಪ್ ಉದಾಹರಣೆಯಾಗಿದೆ. ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್‌ ಹುಡುಕಿ ಅದು ಒತ್ತುವರಿ ಜಾಗವೇ, ಸರ್ಕಾರಕ್ಕೇ ಸೇರಿದ್ದೇ ಅಥವಾ ಗೋಮಾಳವೇ ಎಂಬುದನ್ನು ಆಪ್‌ ಮೂಲಕವೇ ತಿಳಿಯಬಹುದುದಾಗಿದೆ.!

ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ 'ದಿಶಾಂಕ್' ಆಪ್‌ ಅನ್ನು ಮೂರು ವರ್ಷಗಳ ಪರಿಶ್ರಮದಿಂದ ಅಭಿವೃದ್ಧಿಪಡಿಸಲಾಗಿದೆ. ಇಷ್ಟೆಲ್ಲ ಅನುಕೂಲ ಕಲ್ಪಿಸುವ 'ದಿಶಾಂಕ್' ಆಪ್‌ ಅನ್ನು ಬಳಸಿ ರಾಜ್ಯದಾದ್ಯಂತದ ಆಸ್ತಿಗಳ ವಿವರಗಳನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು ಎಂದು ಕಂದಾಯ ಇಲಾಖೆ ತಿಳಿಸಿದೆ.!

ಯಾವುದೇ ಆಸ್ತಿ ಖರೀದಿಗೂ ಮುನ್ನ ಸರ್ಕಾರಿ ದಾಖಲೆ ಪರಿಶೀಲಿಸಲು ಬಂತು ಆಪ್!!

1960ರಲ್ಲಿ ರಾಜ್ಯದ ಭೌಗೋಳಿಕ ಪರಿಸ್ಥಿತಿ ಹೇಗಿತ್ತು ಎಂಬ ವಿವರವನ್ನು ದಿಶಾಂಕ್' ಆಪ್‌ ಒದಗಿಸಲಿದ್ದು,ಈ ಆಪ್‌ನಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. ಕೆರೆಗಳ ಆಸುಪಾಸಿನಲ್ಲಿ ಆಸ್ತಿಯನ್ನು ಹೊಂದಿರುವರ ಒತ್ತುವರಿಯನ್ನೂ ಪತ್ತೆಹಚ್ಚಬಹುದು ಎಂದು ಭೂ ದಾಖಲೆ ಮತ್ತು ಸರ್ವೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.!

How to Check Your Voter ID Card Status (KANNADA)

ಈ ಆಪ್‌ ಅನ್ನು ಬಳಸಿ ರಾಜ್ಯದಾದ್ಯಂತದ ಆಸ್ತಿಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಈ ಮೂಲಕ ಯಾವುದೇ ಆಸ್ತಿ ಖರೀದಿಸಲು ಮುಂದಾಗುವವರು, ಆಸ್ತಿ ಖರೀದಿಗೂ ಮುನ್ನ ಅದರ ಕುರಿತ ವಿವರಗಳನ್ನು ಈ ಆಪ್‌ ಮೂಲಕ ತಿಳಿದುಕೊಳ್ಳಬಹುದು. ಖಾತಾದಲ್ಲಿ ನಮೂದಿಸಿರುವ ಸರ್ವೆ ನಂಬರ್‌ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದಾಗಿದೆ.!

ಯಾವುದೇ ಆಸ್ತಿ ಖರೀದಿಗೂ ಮುನ್ನ ಸರ್ಕಾರಿ ದಾಖಲೆ ಪರಿಶೀಲಿಸಲು ಬಂತು ಆಪ್!!

ಸ್ಮಾರ್ಟ್‌ಫೋನ್‌ಗಳಲ್ಲಿ 'ದಿಶಾಂಕ್' ಆಪ್ ಡೌನ್‌ಲೋಡ್‌ ಮಾಡಿ, ನಿಮ್ಮ ಲೊಕೇಷನ್ ವಿವರವನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ಆ ಸ್ಥಳವು ಯಾವ ಸರ್ವೆನಂಬರ್‌ನಲ್ಲಿದೆ ಎಂಬುದನ್ನು ಆಪ್‌ ತಿಳಿಸುತ್ತದೆ. ನಂತರ ಸರ್ವೆ ನಂಬರ್‌ ನಮೂದಿಸುವ ಮೂಲಕವು ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಬಹಳ ಸುಲಭವಾಗಿ ಪಡೆಯಬಹುದು.!!

ಓದಿರಿ: ಒನ್‌ಪ್ಲಸ್ ಕಂಪೆನಿಯಿಂದ 'ಒನ್‌ಪ್ಲಸ್ 6' ಡಿಸೈನ್ ಲೀಕ್!!..ಹೇಗಿದೆ ಗೊತ್ತಾ ಸ್ಮಾರ್ಟ್‌ಫೋನ್?

Best Mobiles in India

English summary
The IT city can now boast of an app that will provide information on any property using government records. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+