Subscribe to Gizbot

ಬದಲಾಯಿತು HDK ಕ್ಯಾಬ್ ಹೆಸರು: ಆಗಸ್ಟ್ 15ಕ್ಕೇ ಸೇವೆ ಆರಂಭ..!?

Written By:

ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಮತ್ತು ಉಬರ್ ಗಳಿಗೆ ಪರ್ಯಾಯವಾಗಿ ಟೈಗರ್ ಕ್ಯಾಬ್ ಸೇವೆಯೂ ಆರಂಭವಾಗಲಿದ್ದು, ಈ ಹಿಂದೆ ಇದಕ್ಕೆ HDK ಕ್ಯಾಬ್ ಎಂದು ನಾಮಕರಣ ಮಾಡುವ ಸುದ್ಧಿಗಳು ಹರಿದಾಡುತ್ತಿತು, ಆದರೆ ಕೊನೆ ಕ್ಷಣದಲ್ಲಿ ಟೈಗರ್ ಕ್ಯಾಬ್ ಎಂದು ಹೆಸರಿಟ್ಟಾಗಿದೆ.

ಬದಲಾಯಿತು HDK ಕ್ಯಾಬ್ ಹೆಸರು: ಆಗಸ್ಟ್ 15ಕ್ಕೇ ಸೇವೆ ಆರಂಭ..!?

ಓದಿರಿ: ಯುವತಿಯರೇ ಎಚ್ಚರ..! ಸೋಶಿಯಲ್ ಮಿಡಿಯಾಗಳಲ್ಲಿ ಫೋಟೋ ಪೋಸ್ಟ್ ಮಾಡುವ ಮುನ್ನ..!!!

ಈ ನೂತನ ಟೈಗರ್ ಕ್ಯಾಬ್ ಅನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರೇ ಸೇರಿ ಆರಂಭಿಸಲಾಗುತ್ತಿದ್ದು, ಟೈಗರ್ ಕ್ಯಾಬ್ ಸೇವೆಯನ್ನು ಜನಸ್ನೇಹಿಯಾಗಿಲು ಮುಂದಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುಲಿ ಟೆಕ್ನಾಲಜೀಸ್‌’

ಹುಲಿ ಟೆಕ್ನಾಲಜೀಸ್‌’

ಟೈಗರ್ ಆಪ್ ನಿರ್ಮಿಸುವ ಸಲುವಾಗಿಯೇ ಹೆಸರಿನ ಹೊಸದೊಂದು ಕಂಪೆನಿ ಹುಟ್ಟುಹಾಕಿದ್ದಾರೆ. ‘ಹುಲಿ ಟೆಕ್ನಾಲಜೀಸ್‌' ಎಂಬ ಕಂಪನಿಯೂ ಜನ್ಮ ತಾಳಿದ್ದು, ಈ ಮೂಲಕ ಕ್ಯಾಬ್ ಸೇವೆ ಒದಗಿಸುತ್ತಿರುವ ಓಲಾ ಹಾಗೂ ಉಬರ್‌ ಕಂಪೆನಿಗಳಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.

ಓಲಾ ಮತ್ತು ಉಬ್ಬರ್ ವಿರುದ್ಧವಾಗಿ:

ಓಲಾ ಮತ್ತು ಉಬ್ಬರ್ ವಿರುದ್ಧವಾಗಿ:

ಟೈಗರ್ ಕ್ಯಾಬ್ ಅನ್ನು ಓಲಾ ಮತ್ತು ಉಬ್ಬರ್ ವಿರುದ್ಧವಾಗಿಯೇ ನಡೆಸಲು ಮುಂದಾಗಿದ್ದಾರೆ. ಈ ಎರಡು ಕಂಪನಿಗಳು ಚಾಲಕರನ್ನು ಶೋಷಣೆ ಮಾಡುತ್ತಿದೆ. ಪ್ರೋತ್ಸಾಹಧನ ಕಡಿತ ಮಾಡುವುದು, ದಂಡ ವಿಧಿಸುವುದನ್ನು ಮಾಡುತ್ತಿದ್ದು, ಇದರಿಂದ ಹೊರ ಬಂದು ತಮ್ಮದೇ ಒಂದು ಆಪ್ ನಿರ್ಮಿಸಲು ಚಾಲಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಎಚ್‌.ಬಿ.ಆರ್‌ ಲೇಔಟ್‌ನಲ್ಲಿ ಕಚೇರಿ:

ಎಚ್‌.ಬಿ.ಆರ್‌ ಲೇಔಟ್‌ನಲ್ಲಿ ಕಚೇರಿ:

ಎಚ್‌.ಬಿ.ಆರ್‌ ಲೇಔಟ್‌ನಲ್ಲಿ ಹೊಸದೊಂದು ಕಟ್ಟಡದಲ್ಲಿ ಕಚೇರಿಯನ್ನು ಆರಂಭಿಸುವ ಸಾಧ್ಯತೆ ಇದೆ. ಅಲ್ಲೇ ನಿಯಂತ್ರಣ ಕಚೇರಿಯು ಇರಲಿದೆ. ಅದುವರೆವಿಗೂ ಆರ್‌.ಟಿ.ನಗರದಲ್ಲಿ ತಾತ್ಕಾಲಿಕ ಕಚೇರಿ ಇರಲಿದೆ.

ಖಾಸಗಿ ಫೋರ್ಸ್:

ಖಾಸಗಿ ಫೋರ್ಸ್:

ಇದಲ್ಲದೇ ಇಂದಿನ ದಿನದಲ್ಲಿ ಟ್ಯಾಕಿಗಳಲ್ಲಿ ಪ್ರಯಾಣಿಕರಿಗೆ ಕಿರುಕುಳ ಮತ್ತು ಪ್ರಯಾಣಿಕರಿಂದ ಚಾಲಕರಿಗೆ ಕಿರುಕುಳ ನಡೆಯುವ ಪ್ರಕರಣಗಳು ನಡೆಯುತ್ತಿದೆ. ಇದರಿಂದಾಗಿ ಪ್ರಯಾಣಿಕರ ಹಾಗೂ ಚಾಲಕರ ಸಹಾಯಕ್ಕಾಗಿ ಖಾಸಗಿ ಫೋರ್ಸ್ ವೊಂದನ್ನು ರಚಿಸುವ ಸಾಧ್ಯತೆ ಇದೆ.

ಟೈಗರ್ ಕ್ಯಾಬ್ ಬೆಲೆಗಳು:

ಟೈಗರ್ ಕ್ಯಾಬ್ ಬೆಲೆಗಳು:

ಟೈಗರ್ ಕ್ಯಾಬ್ ಸದ್ಯ ಮಾರುಕಟ್ಟೆಯಲ್ಲಿರುವ ಓಲಾ-ಉಬರ್ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದ್ದು, ಒಟ್ಟು ನಾಲ್ಕು ವರ್ಗದಲ್ಲಿ ಸೇವೆಯನ್ನು ನೀಡಲಿದೆ. ಮಿನಿ ಪ್ರತಿ ಕಿ.ಮೀ ಗೆ ರೂ.12.50 ಸ್ಪೋರ್ಟ್ಸ್ ಸೆಡಾನ್ ಪ್ರತಿ ಕಿ.ಮೀಗೆ ರೂ.14.50 ಎಸ್ ಯುವಿ ಹಾಗೂ ಹೊರವಲಯದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ ರೂ. 18.50

ಆನ್‌ಲೈನ್ ಸೇವೆ ಲಭ್ಯ:

ಆನ್‌ಲೈನ್ ಸೇವೆ ಲಭ್ಯ:

ಟೈಗರ್ ಕ್ಯಾಬ್ ಬುಕ್ ಮಾಡಲು ಸ್ಮಾರ್ಟ್‌ಫೋನ್ ಬೇಕಾಗಿಲ್. ಆಪ್ ಮಾತ್ರವಲ್ಲದೇ ಆನ್‌ಲೈನಿನಲ್ಲಿಯೂ ಕ್ಯಾಬ್ ಬುಕ್ ಮಾಡಿಕೊಳ್ಳವ ಅವಕಾಶವನ್ನ ನೀಡಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Upset, angry and hurt over the treatment by ‘foreign’ companies, drivers of Uber and Ola have declared that enough is enough. They wish to launch their own app for accepting taxi bookings. to know more visit kannada
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot