Subscribe to Gizbot

ಅನಾಮಧೇಯವಾಗಿ ಹೈಕ್‌ನಲ್ಲಿ ಚಾಟ್ ಮಾಡುವುದು ಹೇಗೆ..?

Written By:

ಹೈಕ್ ಮೆಸೆಂಜರ್ ಆಪ್ ತನ್ನ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದ್ದು, ಈ ಮೂಲಕ ಸೋಶಿಯಲ್ ಮೆಸೆಂಜಿಂಗ್ ಆಪ್‌ಗಳಲ್ಲಿ ಅತೀ ಹೆಚ್ಚಿನ ಮಂದಿಯನ್ನು ಸೆಳೆಯಲಿದೆ ಎನ್ನಲಾಗಿದೆ. ವಾಟ್ಸ್‌ಆಪ್ ಸೇರಿದಂತೆ ಬೇರೆ ಯಾವುದೇ ಆಪ್‌ಗಳಲ್ಲಿ ಇಲ್ಲದ ಆಯ್ಕೆಯನ್ನು ತನ್ನ ಬಳಕೆದಾರರಿಗೆ ಹೈಕ್ ನೀಡಲಿದೆ.

ಅನಾಮಧೇಯವಾಗಿ ಹೈಕ್‌ನಲ್ಲಿ ಚಾಟ್ ಮಾಡುವುದು ಹೇಗೆ..?

ಓದಿರಿ: ಅನಾಮಿಕರಿಗೆ ಫೇಸ್‌ಬುಕ್‌ನಲ್ಲಿ ಹಾಯ್‌ ಎನ್ನುವ ಮೊದಲು ಈ ಸ್ಟೋರಿ ನೋಡಿ...!

ಹೈಕ್ ಸೋಶಿಯಲ್ ಮೆಸೆಂಜಿಂಗ್ ಆಪ್‌ಗಳಲ್ಲಿಯೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಬಾರಿ ಹೈಕ್ ಐಡಿ ಎನ್ನುವ ಆಯ್ಕೆಯೊಂದನ್ನು ನೀಡಲಿದ್ದು, ಇದರಲ್ಲಿ ಬಳಕೆದಾರರು ತಮ್ಮ ನಂಬರ್ ಅನ್ನು ಇತರರಿಗೆ ತೋರಿಸಿದಯೇ ಚಾಟ್ ಮಾಡಬಹುದಾಗಿದೆ. ಇದರಲ್ಲಿ ತಮ್ಮ ಸುರಕ್ಷತೆಗಾಗಿ ಯಾವುದೇ ಮಾಹಿತಿಯನ್ನು ತೋರಿಸಿದರೆ ಅನಾಮಿಕವಾಗಿ ಚಾಟ್ ಮಾಡುವ ಅವಕಾಶ ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈಕ್ ಐಡಿ:

ಹೈಕ್ ಐಡಿ:

ವಿನೂತನ ಪ್ರಯತ್ನವೊಂದಕ್ಕೆ ಮುಂದಾಗಿರುವ ಹೈಕ್, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸುವ ಸಲುವಾಗಿ ಹೈಕ್ ಐಡಿಯನ್ನು ಪರಿಚಯ ಮಾಡುತ್ತಿದ್ದು, ಇದರಿಂದ ನೀವು ಹೈಕ್ ಆಪ್ ಹೊಂದಿರುವ ವ್ಯಕ್ತಿಯೊಂದಿಗೆ ನಿಮ್ಮ ನಂಬರ್ ಹಂಚಿಕೊಳ್ಳದೇ, ಐಡಿ ಹುಡುಕಿ ಚಾಟ್ ಮಾಡಬಹುದಾಗಿದೆ.

ನಂಬರ್ ಬದಲಿಗೆ:

ನಂಬರ್ ಬದಲಿಗೆ:

ನಿಮ್ಮ ಮೊಬೈಲ್ ನಂಬರ್ ಅನ್ನು ತೋರಿಸುವ ಬದಲಾಗಿ ಹೈಕ್ ಐಡಿಯನ್ನು ತೋರಿಸಲಿದ್ದು, ಇದರಿಂದ ನಿಮ್ಮ ಮೊಬೈಲ್ ನಂಬರ್ ಸುರಕ್ಷಿತವಾಗಿ ಇರಲಿದೆ. ಬೇರೆಯವರು ನಿಮ್ಮ ನಂಬರ್ ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.

How to save WhatsApp Status other than taking screenshots!! Kannada
ಎಲ್ಲಿಯೂ ಈ ಆಯ್ಕೆ ಇಲ್ಲ:

ಎಲ್ಲಿಯೂ ಈ ಆಯ್ಕೆ ಇಲ್ಲ:

ಈ ಮಾದರಿಯ ಆಯ್ಕೆಯನ್ನು ಯಾವುದೇ ಆಪ್‌ಗಳಲ್ಲಿಯೂ ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೈಕ್ ಬಳಕೆಯನ್ನು ಶುರು ಮಾಡಲು ಇದೊಂದೇ ಕಾರಣ ಸಾಕು ಎನ್ನಲಾಗಿದೆ. ಈ ಒಂದು ಆಯ್ಕೆ ಹೆಚ್ಚಿನ ಜನರು ಹೈಕ್ ಬಳಸುವಂತೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Hike ID rolled out, lets you chat without sharing your phone number. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot