ಅನಾಮಿಕರಿಗೆ ಫೇಸ್‌ಬುಕ್‌ನಲ್ಲಿ ಹಾಯ್ ಎನ್ನುವ ಮೊದಲು ಈ ಸ್ಟೋರಿ ನೋಡಿ...!
ಫೇಸ್ ಬುಕ್ ವಂಚನೆಯ ಪ್ರರಕಣಗಳು ದಿನದಿಂದ ದಿನಕ್ಕೆ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ಫೇಸ್‌ಬುಕ್ ನಲ್ಲಿ ಪರಿಚಯವಾದ ಮಹಿಳೆಯಿಂದ ರೂ.20 ಲಕ್ಷ ಕಳೆದುಕೊಂಡಿದ್ದಾರೆ.

ಓದಿರಿ: ಜಿಯೋದಲ್ಲಿಯೂ ಇಲ್ಲ: ಏರ್‌ಟೆಲ್‌ನಿಂದ ಅಮೆಜಾನ್ ಆಫರ್...!
ಫೇಸ್‌ಬುಕ್ ಚಾಟ್‌ನಲ್ಲಿ ಬಣ್ಣದ ಮಾತುಗಳನ್ನು ಆಡಿದ ಫಾರಿನ್ ಬೆಡಗಿಯೊಬ್ಬಳು ಬೆಂಗಳೂರಿನಲ್ಲಿ ಮನೆ ತೆಗೆದುಕೊಳ್ಳಬೇಕೆಂದು ಎರಡು ಮಿಲಿಯನ್ ಅಮೆರಿಕನ್ ಡಾಲರ್ ನೀಡುವುದಾಗಿ ಹೇಳಿ ರೂ.20 ಲಕ್ಷ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ.

ಅಮೆರಿಕಾದಿಂದ ವಂಚನೆ:
ಅಮೆರಿಕ ಮೂಲದ ಮಹಿಳೆ ಫೇಸ್‌ಬುಕ್‌ನಲ್ಲಿ ಬೆಂಗಳೂರಿನ ರಿಯಲ್ ಎಸ್ಟೆಟ್ ಉದ್ಯಮಿಯನ್ನು ಪರಿಚಯ ಮಾಡಿಕೊಂಡು ಪ್ರತಿದಿನ ಚಾಟ್ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ಬೆಂಗಳೂರಲ್ಲಿ ಅಪಾರ್ಟ್ ಮೆಂಟ್ ಖರೀದಿಸಬೇಕು ಎಂದು ಟೋಪಿ ಹಾಕಿದ್ದಾಳೆ.

ಎರಡು ಮಿಲಿಯನ್ ಡಾಲರ್:
ಅಪಾರ್ಟ್ ಮೆಂಟ್ ಖರೀದಿಗಾಗಿ ತಾನು 2 ಮಿಲಿಯನ್ ಅಮೇರಿಕನ್ ಡಾಲರ್ ಹಣವಿರುವ ಬ್ಯಾಗ್ ವೊಂದನ್ನು ಕಳುಹಿಸುತ್ತಿದ್ದು, ರೂ. 20 ಲಕ್ಷ ನೀಡಿ ಬ್ಯಾಕ್ ತೆಗೆದುಕೊಳ್ಳುವಂತೆ ತಿಳಿಸಿದ್ದಾಳೆ.


20 ಲಕ್ಷ ಟೋಪಿ:
ಆಕೆ ಹೇಳಿದಂತೆ ರೂ. 20 ಲಕ್ಷ ಹಣ ನೀಡಿ ಬ್ಯಾಗ್ ಪಡೆದುಕೊಂಡರೆ ಅದರಲ್ಲಿ ಕೇವಲ ಕಪ್ಪು ನೋಟುಗಳನ್ನು ತುಂಬಿ ಕಳುಹಿಸಿದ್ದಳು ಎನ್ನಲಾಗಿದೆ. ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ. ನೀವು ಹೀಗೆ ಅಪರಿಚಿತರಿಂದ ವಂಚನೆಗೆ ಗುರಿಯಾಗುವ ಮುನ್ನ ಎಚ್ಚರ ವಹಿಸಿ.


Click it and Unblock the Notifications








