ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ ಹಾನರ್ 7C ಸ್ಮಾರ್ಟ್ ಫೋನ್..!

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ ಸ್ಮಾರ್ಟ್ ಫೋನ್ ಗಳ ಅಬ್ಬರವೂ ಅತೀಯಾಗಿದ್ದು, ಈ ಬಾರಿ ಹಾನರ್ 7C ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಯೋಜನೆಯನ್ನು ಹೊತ್ತು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮೊದಲಿಗೆ ಚೀನಾ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಹಾನರ್ 7C ಸ್ಮಾರ್ಟ್ ಫೋನ್ ಬೆಜೆಟ್ ಬೆಲೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ.

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ ಹಾನರ್ 7C ಸ್ಮಾರ್ಟ್ ಫೋನ್..!


ಹಾನರ್ 7C ಸ್ಮಾರ್ಟ್ ಫೋನಿನಲ್ಲಿ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, ರೂ.9,240ಕ್ಕೆ ದೊರೆಯಲಿದೆ. ಇದಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯೂ ರೂ.13,350ಕ್ಕೆ ಲಭ್ಯವಿರಲಿದೆ. ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಳ್ಳುವ ಈ ಸ್ಮಾರ್ಟ್ ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಲಭ್ಯವಾಗಲಿದೆ.

ಹಾನರ್ 7C ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು, ಇದು 18:9 ಅನುಪಾತದ HD+ ಗುಣಮಟ್ಟದ ಡಿಸ್ ಪ್ಲೇ ಇದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ 1.8GHz ವೇಗದ ಆಕ್ಟಾ ಕೋರ್ ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಆಡ್ರಿನೋ GPU ಸಹ ನೀಡಲಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 450 ಚಿಪ್ ಸೆಟ್ ಗೆ ಸಮಯವಾಗಿದೆ.

How To Link Aadhaar With EPF Account Without Login (KANNADA)

ಓದಿರಿ: ಮಾರುಕಟ್ಟೆಯಲ್ಲಿ ಟಾರ್ಚ್‌ಲೈಟ್ ಬದಲು ಟ್ಯೂಬ್‌ಲೈಟ್ ಹೊಂದಿರುವ ಫೀಚರ್ ಫೋನ್‌..!

ಇದಲ್ಲದೇ ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 13MP+2MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ.

ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ಪೋನ್ ನಲ್ಲಿ EMUI 8.0 ಸಹ ಇದ್ದು, 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಹೆಚ್ಚಿನ ಬ್ಯಾಕಪ್ ಅನ್ನು ನೀಡಲು ಶಕ್ತವಾಗಿದೆ. ಡ್ಯುಯಲ್ ಸಿಮ್ ಕಾರ್ಡ್ ಹಾಕುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

Best Mobiles in India

English summary
Honor 7C launched with 5.99-inch display, dual rear cameras. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X