Home
Apps

ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್‌ ವಿಡಿಯೋ ಡೌನ್‌ಲೋಡ್‌ಗೆ ಇದುವೇ ಬೆಸ್ಟ್ ಆಪ್.!!

ಗೂಗಲ್‌ ಒಡೆತನದ ಯೂಟ್ಯೂಬ್‌ ಒಂದು ಅತ್ಯುತ್ತಮ ವಿಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಎಲ್ಲ ಬಗೆಯ ವಿಡಿಯೋಗಳನ್ನು ಸುಲಭವಾಗಿ ನೋಡವ ಅವಕಾಶವನ್ನು ಒದಗಿಸಿಕೊಟ್ಟಿದೆ. ಯೂಟ್ಯೂಬ್‌ ವಿಡಿಯೋಗಳನ್ನು ನೋಡಲು ಇಂಟರ್ನೆಟ್ ಅಗತ್ಯವಿದ್ದು, ವಿಡಿಯೋವನ್ನು ಸೇವ್‌ ಮಾಡಿಕೊಂಡು ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಆಯ್ಕೆ ಸಹ ಇದೆ. ಬೇಕಿದ್ದರೇ ವಿಡಿಯೋಗಳನ್ನು ಸ್ಮಾರ್ಟ್‌ಫೋನ್‌ಗೆ ಡೌನಲೋಡ್ ಸಹ ಮಾಡಿಕೊಳ್ಳಬಹುದಾಗಿದೆ.

 ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್‌ ವಿಡಿಯೋ ಡೌನ್‌ಲೋಡ್‌ಗೆ ಇದುವೇ ಬೆಸ್ಟ್ ಆಪ್.!!

ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ ಡೌನಲೋಡ್‌ ಮಾಡಿಕೊಳ್ಳಲು ಹಲವು ಆಪ್‌ಗಳು ಗೂಗಲ್‌ ಪ್ಲೇನಲ್ಲಿ ದೊರೆಯುತ್ತವೆ. ಆದರೆ 'ಟ್ಯೂಬ್‌ಮೇಟ್'‌ ಆಪ್‌ ಅತ್ಯುತ್ತಮವಾಗಿದ್ದು, ಸರಳವಾಗಿ ವಿಡಿಯೋ ಡೌನ್‌ಲೋಡ್‌ ಮಾಡಿಕೊಳ್ಳಲು ಇದು ನೆರವಾಗುತ್ತದೆ. ಹಾಗಾದರೇ ಟ್ಯೂಬ್‌ಮೇಟ್‌ ಆಪ್‌ ಮೂಲಕ ಹೇಗೆ ಯೂಬ್ಯೂಬ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಟ್ಯೂಬ್‌ಮೇಟ್ ಆಪ್‌ ಇನ್‌ಸ್ಟಾಲ್

ಟ್ಯೂಬ್‌ಮೇಟ್ ಆಪ್‌ ಇನ್‌ಸ್ಟಾಲ್

ಯೂಟ್ಯೂಬ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅನುಕೂಲವಾಗಿರುವ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಆದರೆ ಈ ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವುದಿಲ್ಲ. ವೆಬ್‌ನಿಂದ ಟ್ಯೂಬ್‌ಮೇಟ್‌ ಯೂಟ್ಯೂಬ್‌ ಡೌನಲೋಡರ್‌ ಎಂದು ಸರ್ಚ್‌ ಮಾಡಿ ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು.

ಡೌನ್‌ಲೋಡ್‌ಗೆ ವಿಡಿಯೋ

ಡೌನ್‌ಲೋಡ್‌ಗೆ ವಿಡಿಯೋ

ಸ್ಮಾರ್ಟ್‌ಫೋನ್‌ನಲ್ಲಿ ಟ್ಯೂಬ್‌ಮೇಟ್‌ ತೆರೆಯಿರಿ ಇದು ನೋಡಲು ಯೂಟ್ಯೂಬ್‌ನಂತೆ ಕಾಣಿಸುತ್ತದೆ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ಬ್ಲ್ಯಾಕ್ ಕಲರ್‌ ಅನ್ನು ಹೊಂದಿರುತ್ತದೆ. ಯೂಟ್ಯೂಬ್‌ನಲ್ಲಿರುವಂತೆ ಇಲ್ಲಿಯೂ ಸರ್ಚ್ ಆಯ್ಕೆ ಇರುತ್ತದೆ ನಿಮಗೆ ಬೇಕಾಗಿರುವ ವಿಡಿಯೋವನ್ನು ಸರ್ಚ್‌ ಮಾಡಿ ಸೆಲೆಕ್ಟ್‌ ಮಾಡಿಕೊಳ್ಳಿರಿ ನಂತರ ಕಾಣುವ ಡೌನಲೋಡ್‌ ಆಯ್ಕೆಯನ್ನು ಒತ್ತಿರಿ.

ವಿಡಿಯೋ ಡೌನ್‌ಲೋಡ್‌ ಮಾಡಿರಿ

ವಿಡಿಯೋ ಡೌನ್‌ಲೋಡ್‌ ಮಾಡಿರಿ

ಡೌನ್‌ಲೋಡ್‌ ಆಯ್ಕೆಯನ್ನು ಒತ್ತಿದ ನಂತರ ನಿಮಗೆ ಫಾರ್‌ಮೇಟ್‌ ಲಿಸ್ಟ್‌ ಕಾಣಿಸುತ್ತದೆ. ಆ ಲಿಸ್ಟ್‌ ವಿಡಿಯೋ ಫಾರ್‌ಮೇಟ್‌ ಮತ್ತು ಆಡಿಯೋ ಫಾರ್‌ಮೇಟ್‌ ಆಯ್ಕೆಗಳನ್ನು ಹೊಂದಿದ್ದು, ವಿಡಿಯೋ ಫಾರ್‌ಮೇಟ್‌ ಆಯ್ಕೆಯಲ್ಲಿ ವಿವಿಧ ರೆಸಲ್ಯೂಶನ್‌ ಆಯ್ಕೆಗಳಲ್ಲಿ ಮತ್ತು ವಿವಿಧ ಡೇಟಾ ಗಾತ್ರದಲ್ಲಿ ಡೌನ್‌ಲೋಡ್‌ ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ನಿಮಗೆ ಸೂಕ್ತ ಎನಿಸುವ ಫಾರ್‌ಮೇಟ್‌ ಅನ್ನು ನೀವು ಸೆಲೆಕ್ಟ್‌ ಮಾಡಿಕೊಳ್ಳಬಹುದು.

ವೈಫೈ ಇದ್ದರೇ ಒಳಿತು

ವೈಫೈ ಇದ್ದರೇ ಒಳಿತು

ಮೊಬೈಲ್‌ ಇಂಟರ್ನೆಟ್‌ ಬಳಸಿಯೇ ವಿಡಿಯೋ ಡೌನ್‌ಲೋಡ್‌ ಮಾಡಬಹುದು ಆದರೆ ಹೈ ರೆಸಲ್ಯೂಶನ್‌ ಸಾಮರ್ಥ್ಯದ ವಿಡಿಯೋಗಳಿದ್ದರೇ ಅಥವಾ ಹೆಚ್ಚು ಸಮಯದ ವಿಡಿಯೋ ಆಗಿದ್ದರೇ ಮೊಬೈಲ್‌ ಡೇಟಾ ಬಳಸುವುದಕ್ಕಿಂತ ವೈಫೈ ನೆಟ್‌ವರ್ಕ್ ಇದ್ದರೇ ಒಳಿತು. ವಿಡಿಯೋಗಳು ವೇಗವಾಗಿ ಡೌನ್‌ಲೋಡ್‌ ಆಗುತ್ತವೆ.

Best Mobiles in India

English summary
TubeMate is one of the most popular tool for downloading YouTube videos on Android smartphones.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+