Home
Apps

ನೆಕ್ಸ್ಟ್ ಟೈಮ್ ಪೊಲೀಸ್‌ ಹಿಡಿದರೆ ದುಡ್ಡು ಕೊಡಬೇಡಿ..! ಸ್ಮಾರ್ಟ್‌ಫೋನ್ ತೋರಿಸಿ ಸಾಕು..!

By Srinidhi

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಗಾಡಿ ಓಡಿಸುವದೇ ಒಂದು ಸಾಹಸ, ಇದರ ಮಧ್ಯೆ ಟ್ರಾಫಿಕ್ ಪೊಲೀಸರ ಕಿರಿಕಿರಿಯೂ ಸೇರಿದರೆ ಇನ್ನು ತಲೆ ನೋವು. ಯಾವುದೇ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಇದ್ದು, ಮನೆಯಲ್ಲಿಯೂ ಬಿಟ್ಟು ಬಂದರೆ ಅಥಾವ ಕಳೆದು ಹೋಗಿದರೆ ಸುಮ್ಮನೆ ದಂಡವನ್ನು ಪಾವತಿಸಬೇಕು. ಇಲ್ಲವೇ ಫೊಲೀಸರ ಮುಂದೆ ಹಲ್ಲುಕಿರಿಯಬೇಕು ಜೊತೆಗೆ ಅವರಗೆ ನೂರೋ ಇನ್ನೂರೋ ನೀಡಿ ಕೈಬೆಚ್ಚಗೆ ಮಾಡಿ ಹೋಗಬೇಕು. ಇಷ್ಟು ಮಾಡುವಷ್ಟರಲ್ಲಿ ಟೈಮ್‌ ಆಗಿ ಹೋಗಿ ನಾವು ಹೊಗುತ್ತಿದ್ದ ಕೆಲಸಕ್ಕೆ ಟೈಮ್ ಆಗಿರುತ್ತದೆ.

ನೆಕ್ಸ್ಟ್ ಟೈಮ್ ಪೊಲೀಸ್‌ ಹಿಡಿದರೆ ದುಡ್ಡು ಕೊಡಬೇಡಿ.! ಸ್ಮಾರ್ಟ್‌ಫೋನ್ ತೋರಿಸಿ.!

ಓದಿರಿ: ಏನಿದು ಫ್ಲಿಪ್‌ಕಾರ್ಟ್‌ ಪ್ಲಸ್ ಉಚಿತ ಸೇವೆ..? ಪಡೆಯುವುದು ಹೇಗೆ..? ಪ್ರೈಮ್‌ಗಿಂತ ಬೆಸ್ಟಾ..?

ಈ ಹಿನ್ನಲೆಯಲ್ಲಿ ಜನ ಸಾಮಾನ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಳಕೆದಾರರಿಗೆ ಸ್ಮಾರ್ಟ್‌ಫೋನಿನಲ್ಲಿಯೇ ಡಿಜಿಟಲ್ ಮಾದರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಮತ್ತು ಇನ್‌ಶ್ಯೂರೆನ್ಸ್‌ಗಳನ್ನು ಸೇವ್ ಮಾಡಿಕೊಳ್ಳುವ ಸಲುವಾಗಿ ಸರ್ಕಾರ ಡಿಜಿ ಲಾಕರ್ ಎನ್ನುವ ಹೊಸದೊಂದು ಸೇವೆಯನ್ನು ನೀಡುತ್ತಿದೆ. ಇರಲ್ಲಿ ನೀವು ಸೇವ್ ಮಾಡಿಕೊಳ್ಳೂವ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಅಧಿಕೃತವಾಗಿರಲಿದೆ. ಇದನ್ನು ಪೊಲೀಸರು ಒಪ್ಪಿಕೊಳ್ಳಲೇ ಬೇಕು. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮಾಹಿತಿಗಳನ್ನು ಹೇಗೆ ಸೇವ್ ಮಾಡಿಕೊಳ್ಳುವುದು ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ.

ಡಿಜಿಟಲ್ ಇಂಡಿಯಾ:

ಡಿಜಿಟಲ್ ಇಂಡಿಯಾ:

ಈಗಾಗಲೇ ಡಿಜಿಟಲ್ ಇಂಡಿಯಾದಲ್ಲಿ ಎಲ್ಲಾ ಮಾದರಿಯ ಸೇವೆಗಳು ಡಿಜಿಟಲ್ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಡಿಜಿಟಲ್ ಮಾದರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ ಸೇವ್ ಮಾಡಿಕೊಳ್ಳೂವ ಅತ್ಯಂತ ಸುರಕ್ಷಿತ ವ್ಯವಸ್ಥೆ ಡಿಜಿ ಲಾಕರ್‌ ಆಗಿದೆ. ಇದು ಅಧಿಕೃತ ದಾಖಲೆಯ ಆಪ್‌ ಆಗಲಿದೆ ಎನ್ನಲಾಗಿದೆ.

ಪ್ಲೇ ಸ್ಟೋರಿನಲ್ಲಿ ಲಭ್ಯ:

ಪ್ಲೇ ಸ್ಟೋರಿನಲ್ಲಿ ಲಭ್ಯ:

ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸದ್ಯ ಡಿಜಿಟಲ್ ಮಾದರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ ಸೇವ್ ಮಾಡಿಕೊಳ್ಳುವ ಡಿಜಿ ಲಾಕರ್ ಆಪ್ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅಲುವಾಗಿ ಪ್ಲೇ ಸ್ಟೋರಿನಲ್ಲಿ ಡಿಜಿ ಲಾಕರ್ ಎಂದು ಟೈಪ್ ಮಾಡಿ, ಇದಾದ ನಂತರದಲ್ಲಿ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುವ ಆಪ್ ಕಾಣಿಸಿಕೊಳ್ಳಲಿದೆ. ಅದನ್ನು ಡೌನ್​ಲೋಡ್ ಮಾಡಿ.

ಇನ್‌ಸ್ಟಾಲ್ ಮಾಡಿಕೊಳ್ಳಿ:

ಇನ್‌ಸ್ಟಾಲ್ ಮಾಡಿಕೊಳ್ಳಿ:

ಡಿಜಿ ಲಾಕರ್ ಆಪ್ ಅನ್ನು ಪ್ಲೇ ಸ್ಟೋರಿನಲ್ಲಿ ಡೌನ್‌ಲೋಡ್ ಮಾಡಿದ ನಂತರದಲ್ಲಿ ಅದನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ನಂತರದಲ್ಲಿ ಆಪ್‌ನಲ್ಲಿ ಕಾಣಿಸಿಕೊಳ್ಳಲುವ ಸೈನ್ ಅಪ್ ಆಯ್ಕೆ ಒತ್ತಿ, ಯೂಸರ್ ನೇಮ್ ಮತ್ತು ಪಾಸ್​ವರ್ಡ್ ಹಾಕಿರಿ. ಇದಾದ ನಂತರದಲ್ಲಿ ಆಧಾರ್ ಸಂಖ್ಯೆ ನಮೂದಿಸಿ.

ರಾಜ್ಯವನ್ನು ಆಯ್ಕೆಯನ್ನು ಮಾಡಿ:

ರಾಜ್ಯವನ್ನು ಆಯ್ಕೆಯನ್ನು ಮಾಡಿ:

ಇದಾನದ ನಂತರ ಡಿಜಿ ಲಾಕರ್ ಆಪ್‌ ನಲ್ಲಿರುವ ಸರ್ಚ್​ ಬಾರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.

ಮಾಹಿತಿ ಭರ್ತಿ ಮಾಡಿ:

ಮಾಹಿತಿ ಭರ್ತಿ ಮಾಡಿ:

ಡಿಜಿ ಲಾಕರ್ ಆಪ್‌ನಲ್ಲಿ ನಂತರ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡ ನಂತರದಲ್ಲಿ, ನಿಮ್ಮ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ ಪಡೆಯುವ ಸಲುವಾಗಿ ಡಿಎಲ್ ಸಂಖ್ಯೆ ನಮೂದಿಸಿ, ಡಿಜಿಟಲ್ ಆರ್​ಸಿ ಪಡೆಯಲು ನಿಮ್ಮ ವಾಹನದ ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಿ. ನಂತರ ಡಿಜಿಟಲ್ ದಾಖಲೆ ದೊರೆಯಲಿದೆ.

ವಾಯು ಮಾಲಿನ್ಯದ ಪ್ರಮಾಣ ಪತ್ರ:

ವಾಯು ಮಾಲಿನ್ಯದ ಪ್ರಮಾಣ ಪತ್ರ:

ವಾಯು ಮಾಲಿನ್ಯ ಪ್ರಮಾಣಪತ್ರ ಪಡೆಯಲು ಕೇವಲ ಗಾಡಿ ಸಂಖ್ಯೆ ನಮೂದಿಸಿ ಸಾಕು, ಅದು ಸಹ ನಿಮ್ಮ ಡಿಜಿ ಲಾಕರ್ ಆಪ್‌ನಲ್ಲಿ ಸೇವ್ ಆಗಲಿದೆ. ಇದರಿಂದಾಗಿ ನೀವು ಯಾವುದಕ್ಕೂ ಬೇರೆ ಯೋಚನೆ ಮಾಡಬೇಕಾಗಿಲ್ಲ.

ಕೋಟಿ ಮಂದಿ ಬಳಕೆದಾರರು:

ಕೋಟಿ ಮಂದಿ ಬಳಕೆದಾರರು:

ಈಗಾಗಲೇ ಬಳಕೆಗೆ ಲಭ್ಯವಿರುವ ಡಿಜಿ ಲಾಕರ್ ಆಪ್‌ ಅನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಮಿಸಿದೆ. 2015ರಲ್ಲಿ ಬಿಡುಗಡೆಯಾದ ಡಿಜಿ ಲಾಕರ್ ಆಪ್ ಈಗಾಗಲೇ 1.3 ಕೋಟಿ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ. ನೀವು ಸಹ ಯಾವುದೇ ಭಯವಿಲ್ಲದೇ ಆಪ್‌ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

PDF ಬಳಕೆ:

PDF ಬಳಕೆ:

ಡಿಜಿ ಲಾಕರ್‌ನಲ್ಲಿ ಸೇವ್ ಮಾಡಿಟ್ಟ ಪ್ರತಿಗಳನ್ನು ಮೊಬೈಲ್ ಮೂಲಕವೂ ವೀಕ್ಷಿಸಬಹುದು. ಇನ್ನು ಪಿಡಿಎಫ್ ಮೂಲಕ ಸೇವ್ ಮಾಡಿಟ್ಟುಕೊಳ್ಳಬಹುದು. ಇದರಿಂದಾಗಿ ಬಳಕೆದಾರರಿಗೆ ಯಾವುದೇ ಮಾದರಿಯಲ್ಲಿಯೂ ತೊಂದರೆಯಾಗುವುದಿಲ್ಲ.

Best Mobiles in India

English summary
How to keep driving license on your smartphone using DigiLocker. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+