ಏನಿದು ಫ್ಲಿಪ್‌ಕಾರ್ಟ್‌ ಪ್ಲಸ್ ಉಚಿತ ಸೇವೆ..? ಪಡೆಯುವುದು ಹೇಗೆ..? ಪ್ರೈಮ್‌ಗಿಂತ ಬೆಸ್ಟಾ..?

|

ಅಮೆರಿಕಾದ ರೀಟೆಲ್ ದೈತ್ಯ ವಾಲ್‌ಮಾರ್ಟ್ ತನ್ನ ತೆಕ್ಕೆಗೆ ದೇಶಿಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಅನ್ನು ಸೇರಿಸಿಕೊಂಡ ಮೇಲೆ ಹೊಸದಾಗಿ ಘೋಷಣೆ ಮಾಡಿದ್ದ ಫ್ಲಿಪ್‌ಕಾರ್ಟ್ ಪ್ಲಸ್, ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲಿದೆ ಎನ್ನಲಾಗಿತ್ತು. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಅಮೆಜಾನ್‌ ಪ್ರೈಮ್‌ಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದು ಹುಸಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಏನಿದು ಫ್ಲಿಪ್‌ಕಾರ್ಟ್‌ ಪ್ಲಸ್ ಉಚಿತ ಸೇವೆ..? ಪಡೆಯುವುದು ಹೇಗೆ..?

ಆಗಸ್ಟ್ 15 ರಿಂದ ಫ್ಲಿಪ್‌ಕಾರ್ಟ್ ಪ್ಲಸ್ ಲೈವ್ ಆಗಲಿದೆ. ಅಲ್ಲದೇ ಫ್ಲಿಪ್‌ಕಾರ್ಟ್‌ ಪ್ಲಸ್ ಸೇವೆಯನ್ನು ಬಳಕೆದಾರರಿಗೆ ಉಚಿತವಾಗಿ ನೀಡುವುದಾಗಿ ತಿಳಿಸಿದ್ದ ಫ್ಲಿಪ್‌ಕಾರ್ಟ್‌, ಈಗ ಫ್ಲಿಪ್‌ಕಾರ್ಟ್‌ಪ್ಲಸ್ ಚಂದದಾರಾಗಲು ಬಳೆದಾರರು ರೂ.12500ದಷ್ಟು ಖರ್ಷು ಮಾಡಬೇಕಾದ ಅನಿರ್ವಾಯತೆಯನ್ನು ನಿರ್ಮಿಸಿದೆ. ಇದರಿಂದಾಗಿ ಬಳಕೆದಾರರು ಈ ಹೊಸ ಸೇವೆಯ ಲಾಭವನ್ನು ಪಡೆಯುವುದು ಕಷ್ಟ ಸಾಧ್ಯ.

ಪ್ರೈಮ್‌ಗಿಂತ ಭಿನ್ನ:

ಪ್ರೈಮ್‌ಗಿಂತ ಭಿನ್ನ:

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಹೆಚ್ಚಿನ ಲಾಭಗಳನ್ನು ಮಾಡಿಕೊಡಲಿದೆ. ಆದರೆ ಫ್ಲಿಪ್‌ಕಾರ್ಟ್‌ ಪ್ಲಸ್ ಬಳಕೆದಾರರಿಗೆ ದೊಡ್ಡ ಮಟ್ಟದ ಸೇವೆಯನ್ನು ನೀಡುವ ಯಾವುದೇ ಲಕ್ಷಣಗಳನ್ನು ಕಾಣುತ್ತಿಲ್ಲ. ಅಮೆಜಾನ್ ರೂ.999ಕ್ಕೆ ವರ್ಷದ ಸೇವೆಯನ್ನು ನೀಡಿದರೆ ಫ್ಲಿಪ್‌ಕಾರ್ಟ್ ರೂ.12500 ಖರ್ಚು ಮಾಡಿದರೂ ಸಹ ಇಷ್ಟು ಮಟ್ಟದ ಲಾಭವನ್ನು ನಿಮಗೆ ನೀಡುವುದಿಲ್ಲ.

ಪ್ಲಿಪ್‌ಕಾರ್ಟ್ ಪ್ಲಸ್ ಮೆಂಬರ್ ಶಿಪ್ ಪಡೆಯುವುದು ಹೇಗೆ..?

ಪ್ಲಿಪ್‌ಕಾರ್ಟ್ ಪ್ಲಸ್ ಮೆಂಬರ್ ಶಿಪ್ ಪಡೆಯುವುದು ಹೇಗೆ..?

ಪ್ಲಿಪ್‌ಕಾರ್ಟ್ ಪ್ಲಸ್ ಮೆಂಬರ್ ಶಿಪ್ ಕುರಿತು ತನ್ನ ಆಪ್‌ನಲ್ಲಿ ಮಾಹಿತಿಯನ್ನು ನೀಡಿರುವ ಫ್ಲಿಪ್‌ಕಾರ್ಟ್‌, ಒಟ್ಟು 50 ಕಾಯಿನ್‌ಗಳನ್ನು ಬಳಕೆದಾರರು ಪಡೆದುಕೊಂಡರೆ ಮಾತ್ರವೇ ಅವರು ಫ್ಲಿಪ್‌ಕಾರ್ಟ್‌ ಪ್ಲಸ್ ಮೆಂಬರ್ ಶಿಪ್‌ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಒಂದು ಕಾಯಿನ್‌ಗೆ ಎಷ್ಟು:

ಒಂದು ಕಾಯಿನ್‌ಗೆ ಎಷ್ಟು:

ಫ್ಲಿಪ್‌ಕಾರ್ಟ್‌ನಿಂದ ನೀವು ಒಂದು ಕಾಯಿನ್‌ ಪಡೆದುಕೊಳ್ಳಬೇಕಾದರೆ ನೀವು ರೂ.250ಗಳಷ್ಟು ಖರೀದಿಯನ್ನು ಮಾಡಬೇಕಾಗುತ್ತಿದೆ. ನೀವು ರೂ.1000ಕ್ಕೆ ಖರೀದಿ ಮಾಡಿದರೆ ಫ್ಲಿಪ್‌ಕಾರ್ಟ್ ನಿಮಗೆ ಒಟ್ಟು 4 ಕಾಯಿನ್‌ಗಳನ್ನು ನೀಡಲಿದೆ. ಇದೇ ಮಾದರಿಯಲ್ಲಿ ನೀವು ಒಟ್ಟು 50 ಕಾಯಿನ್‌ಗಳನ್ನು ಸೇರಿಸಿ ಫ್ಲಿಪ್‌ಕಾರ್ಟ್‌ ಪ್ಲಸ್ ಸಬ್‌ಸ್ಕ್ರೈಬ್ ಆಗಬಹುದಾಗಿದೆ.

ಆದರೆ ಸುಲಭವಲ್ಲ:

ಆದರೆ ಸುಲಭವಲ್ಲ:

ನೀವು ಒಮ್ಮೆಗೆ ಒಂದು ಆರ್ಡರ್ ನಲ್ಲಿ ಗರಿಷ್ಠ ಕೇವಲ 10 ಕಾಯಿನ್‌ಗಳನ್ನು ಮಾತ್ರವೇ ಪಡೆದುಕೊಳ್ಳಬಹುದಾಗಿದೆ. ನೀವು ರೂ.30000 ಕೊಟ್ಟಿ ಫ್ಲಿಪ್‌ಕಾರ್ಟಿನಲ್ಲಿ ಮೊಬೈಲ್ ಖರೀದಿ ಮಾಡಿದರೂ ಸಹ ನಿಮಗೆ ದೊರೆಯುವುದು ಕೇವಲ 10 ಕಾಯಿನ್‌ ಮಾತ್ರವೇ ಉಳಿದ 40 ಕಾಯಿನ್‌ಗಳಿಗಾಗಿ ಮತ್ತೇ ಏನ್ನನಾದರು ಖರೀದಿ ಮಾಡಬೇಕಾಗಿದೆ.

 ರೂ.2500ಕ್ಕೆ 5 ಬಾರಿ:

ರೂ.2500ಕ್ಕೆ 5 ಬಾರಿ:

ನೀವು ಫ್ಲಿಪ್‌ಕಾರ್ಟ್‌ ಪ್ಲಸ್ ಮೆಂಬರ್ ಶಿಪ್‌ ಅನ್ನು ಪಡೆದುಕೊಳ್ಳಬೇಕಾದರೆ ಅವಶ್ಯವಾಗಿ ನೀವು ರೂ.2500ಕ್ಕೆ 5 ಬಾರಿ ಬೇರೆ ಬೇರೆಯಾಗಿ ಖರೀದಿಯನ್ನು ಮಾಡಬೇಕಾಗಿದೆ. ಹೀಗೆ ಖರೀದಿ ಮಾಡಿ 50 ಕಾಯಿನ್ ಕಲೆಕ್ಟ್ ಮಾಡಿದ ಮೇಲೆ ನೀವು ಫ್ಲಿಪ್‌ಕಾರ್ಟ್‌ ಪ್ಲಸ್ ಮೆಂಬರ್ ಶಿಪ್ ಪಡೆದುಕೊಳ್ಳಬಹುದು.

Flipkart Plus: A new loyalty programme from Flipkart to tackle Amazon Prime
ಫ್ಲಿಪ್‌ಕಾರ್ಟ್‌ ಪ್ಲಸ್ ಲಾಭಗಳೇನು..?

ಫ್ಲಿಪ್‌ಕಾರ್ಟ್‌ ಪ್ಲಸ್ ಲಾಭಗಳೇನು..?

ಮೂರು ಕೋಟಿಗೂ ಅಧಿಕ ವಸ್ತಗಳನ್ನು ಉಚಿತವಾಗಿ ಡೆಲಿವರಿ ಮಾಡಲಿದೆ.(ಅಮೆಜಾನ್ ಪ್ರೈಮ್ ಮಾದರಿಯಲ್ಲಿ), ಇದರೊಂದಿಗೆ ಎಕ್ಸ್‌ಕ್ಲೂಸಿವ್ ಸೇಲ್ ಮತ್ತು ಪ್ಲಸ್ ಗ್ರಾಹಕರಿಗೆ ಆದ್ಯತೆಯ ಸೇವೆಯೂ ದೊರೆಯಲಿದೆ ಎನ್ನಲಾಗಿದೆ.

ಅಮೆಜಾನ್‌ನಲ್ಲಿಯೇ ಹೆಚ್ಚು:

ಅಮೆಜಾನ್‌ನಲ್ಲಿಯೇ ಹೆಚ್ಚು:

ಫ್ಲಿಪ್‌ಕಾರ್ಟ್‌ಪ್ಲಸ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಕಾರಣ ರೂ.999 ಪಾವತಿಸಿದರೆ ಉಚಿತ ಡೆಲಿವರಿಯೊಂದಿಗೆ, ಪ್ರೈಮ್ ವಿಡಿಯೋ ಮತ್ತು ಪ್ರೈಮ್ ಆಡಿಯೋ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿಯೇ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲ ಲಾಭವಾಗಲಿದೆ.

Best Mobiles in India

English summary
Flipkart Plus Membership is not completely free: Will make you pay at least Rs 12500. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X