ವಾಟ್ಸಪ್ ಗ್ರೂಪ್‌ಗಳಲ್ಲಿ ನಿಮ್ಮ ನಂಬರ್‌ ಸೇರಿಸುವುದನ್ನು ತಡೆಯುವುದು ಹೇಗೆ ಗೊತ್ತಾ?

|

ನೀವು ವಾಟ್ಸಪ್‌ನ ಸಕ್ರಿಯ ಬಳಕೆದಾರರಲ್ಲಿ ಒಬ್ಬರಾಗಿದ್ದಿರಿ ಅಲ್ಲವೇ?.ಅನಗತ್ಯವಾಗಿ ವಾಟ್ಸಪ್‌ ಹೊಸ ಗ್ರೂಪ್‌ಗಳಲ್ಲಿ ನಿಮ್ಮ ನಂಬರ್ ಅನ್ನು ಸೇರಿಸುತ್ತಿದ್ದಾರೆಯೇ? ಗ್ರೂಪ್‌ಗಳಲ್ಲಿ ಬರುವ ಅನಗತ್ಯ ಮೆಸೆಜ್‌ಗಳಿಂದ ಬೇಸರವಾಗಿದ್ದಿರಾ? ಇನ್ಮುಂದೆ ಗ್ರೂಪ್‌ಗಳ ಅನಗತ್ಯ ಮಸೆಜ್‌ಗಳಿಂದ ನಿಮಗೆ ಕಿರಿಕಿರಿ ಎನಿಸುವುದಿಲ್ಲ. ಏಕೆಂದರೇ ವಾಟ್ಸಪ್ ತನ್ನ ಬಳಕೆದಾರರಿಗೆ ಗ್ರೂಪ್ ಸೇರ್ಪಡೆ ಕುರಿತು ಹೊಸದೊಂದು ಆಯ್ಕೆ ಪರಿಚಯಿಸಿದೆ.

ವಾಟ್ಸಪ್ ಗ್ರೂಪ್‌ಗಳಲ್ಲಿ ನಿಮ್ಮ ನಂಬರ್‌ ಸೇರಿಸುವುದನ್ನು ತಡೆಯುವುದು ಹೇಗೆ ಗೊತ್ತಾ

ಹೌದು, ಹೊಸದಾಗಿ ವಾಟ್ಸಪ್‌ ಗ್ರೂಪ್‌ಗಳಲ್ಲಿ ನಿಮ್ಮ ನಂಬರ್‌ ಸೇರಿಸುವುದನ್ನು ನೀವು ತಡೆಯಬಹುದಾದ ಆಯ್ಕೆಯನ್ನು ಪರಿಚಯಿಸಿದ್ದು, ನಿಮ್ಮ ಅನುಮತಿ ಇಲ್ಲದೇ ಹೊಸ ಗ್ರೂಪ್‌ಗಳಲ್ಲಿ ನಿಮ್ಮ ನಂಬರ್‌ ಸೇರಿಸಲು ಇನ್ಮುಂದೆ ಸಾಧ್ಯವಾಗುವುದಿಲ್ಲ. ಈ ಹೊಸ ಆಯ್ಕೆ ವಾಟ್ಸಪ್‌ನ ಅಪ್‌ಡೇಟ್‌ ವರ್ಷನ್‌ನಲ್ಲಿ ಬಳಕೆದಾರರಿಗೆ ದೊರೆಯಲಿದ್ದು, ಬಳಕೆದಾರರಿಗೆ ಈ ಆಯ್ಕೆಯು ಬಹು ಉಪಯುಕ್ತವೆನಿಸಲಿದೆ.

ವಾಟ್ಸಪ್ ಗ್ರೂಪ್‌ಗಳಲ್ಲಿ ನಿಮ್ಮ ನಂಬರ್‌ ಸೇರಿಸುವುದನ್ನು ತಡೆಯುವುದು ಹೇಗೆ ಗೊತ್ತಾ

ಹೊ ಆಯ್ಕೆಯಲ್ಲಿ 'ಎಲ್ಲರೂ', 'ನನ್ನ ಸಂಪರ್ಕ ನಂಬರ್‌ಗಳು', 'ಯಾರು ಇಲ್ಲ' ಎಂಬ ಮೂರು ಆಯ್ಕೆಗಳನ್ನು ನೀಡಲಾಗಿದ್ದು, ಬಳಕೆದಾರರು ಈ ಮೂರು ಆಯ್ಕೆಗಳಲ್ಲಿ ತಮಗೆ ಸೂಕ್ತವೆನಿಸುವ ಆಯ್ಕೆ ಒಂದನ್ನು ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ವಾಟ್ಸಪ್‌ ಪರಿಚಯಿಸಿರುವ ಹೊಸ ಆಯ್ಕೆ ಮೂಲಕ ಇತರರು ನಮ್ಮ ನಂಬರ್‌ನ್ನು ಗ್ರೂಪ್‌ಗೆ ಸೇರಿಸುವುದನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ನೋಡೋಣ ಬನ್ನಿರಿ.

ಈ ಹಂತಗಳನ್ನು ಅನುಸರಿಸಿ

ಈ ಹಂತಗಳನ್ನು ಅನುಸರಿಸಿ

ಹಂತ.1 ವಾಟ್ಸಪ್ ಖಾತೆ ತೆರೆಯಿರಿ.
ಹಂತ.2 ಸೆಟ್ಟಿಂಗ್ ಮೆನು ಕ್ಲಿಕ್ ಮಾಡಿ ನಂತರ ಅಕೌಂಟ್‌ ಸೆಟ್ಟಿಂಗ್ ಆಯ್ಕೆ ತೆರೆಯಿರಿ.
ಹಂತ.3 ಅಕೌಂಟ್ಸ್‌ ಮೆನುದಲ್ಲಿ ಪ್ರೈವೆಸಿ ಆಯ್ಕೆಯನ್ನು ಒತ್ತಿರಿ.
ಹಂತ.4 ಪ್ರೈವಸಿ ಲಿಸ್ಟ್‌ನಲ್ಲಿ ಗ್ರೂಪ್‌ ಆಯ್ಕೆ ಕ್ಲಿಕ್ ಮಾಡಿರಿ.
ಹಂತ.5 ಮೂರು ಆಯ್ಕೆಗಳು ಕಾಣಿಸುತ್ತವೆ.(Everyone, My Contacts ಮತ್ತು Nobody)
ಹಂತ.6 ಮೂರು ಆಯ್ಕೆಗಳಲ್ಲಿ ನಿಮ್ಮಗೆ ಸೂಕ್ತವೆನಿಸುವ ಆಯ್ಕೆ ಕ್ಲಿಕ್ ಮಾಡಿ.

ಎಲ್ಲರಿಗೂ-Everyone

ಎಲ್ಲರಿಗೂ-Everyone

ವಾಟ್ಸಪ್ ಪರಿಚಯಿಸಿರುವ ಹೊಸ ಆಯ್ಕೆಯಲ್ಲಿ 'ಎಲ್ಲರಿಗೂ'(Everyone) ಆಯ್ಕೆಯನ್ನು ನೀವು ಸೆಲೆಕ್ಟ್‌ ಮಾಡಿಕೊಂಡರೇ ಯಾರಾದರೂ ನಿಮ್ಮ ನಂಬರ್‌ ಅನ್ನು ಹೊಸ ಗ್ರೂಪ್‌ಗೆ ಸೇರಿಸಬಹುದಾಗಿದೆ. ಗ್ರೂಪ್‌ ರಚಿಸುವವರಿಗೆ ನಿಮ್ಮ ನಂಬರ್‌ ಒಂದಿದ್ದರೇ ಸಾಕು ಅವರು ರಚಿಸುವ ಹೊಸ ಗ್ರೂಪ್‌ನಲ್ಲಿ ನಿಮ್ಮನ್ನು ಸೇರಿಸಿಕೊಳ್ಳಬಹುದಾಗಿದೆ.

ನನ್ನ ಸಂಪರ್ಕ ನಂಬರ್‌ಗಳು-My Contacts

ನನ್ನ ಸಂಪರ್ಕ ನಂಬರ್‌ಗಳು-My Contacts

ಎರಡನೇಯದಾಗಿ ನನ್ನ ಸಂಪರ್ಕ ನಂಬರ್‌ಗಳು(My Contacts) ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೇ ನಿಮ್ಮ ಮೊಬೈಲ್‌ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರು ಮಾತ್ರ ಹೊಸ ಗ್ರೂಪ್‌ ಮಾಡಿದರೇ ನಿಮ್ಮನ್ನು ಆ ಗ್ರೂಪ್‌ಗೆ ಸೇರಿಸಿಕೊಳ್ಳಬಹುದಾದ ಅವಕಾಶ ಇರುತ್ತದೆ. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿಲ್ಲದವರು ಗ್ರೂಪ್‌ ರಚಿಸಿದೆರೇ ನಿಮ್ಮ ನಂಬರ್‌ ಹೊಸ ಗ್ರೂಪ್‌ಗೆ ಸೇರಿಸಲು ಆಗದು.

ಯಾರು ಇಲ್ಲ-Nobody

ಯಾರು ಇಲ್ಲ-Nobody

ವಾಟ್ಸಪ್ ಗ್ರೂಪ್‌ಗಳಲ್ಲಿ ಸೇರಲು ಇಷ್ಟವಿಲ್ಲದಿದ್ದರೇ ಈ ಆಯ್ಕೆ ಸೂಕ್ತವಾಗಿದ್ದು, ನೀವೆನಾದರೂ 'ಯಾರು ಇಲ್ಲ'(Nobody)ಆಯ್ಕೆಯನ್ನು ಮಾಡಿಕೊಂಡರೇ ಯಾರು ಸಹ ನಿಮ್ಮ ನಂಬರ್‌ ಅನ್ನು ಹೊಸ ಗ್ರೂಪ್‌ಗೆ ಸೇರಿಸಲು ಸಾಧ್ಯವಾಗುವುದಿಲ್ಲ.

ಓದಿರಿ : ವಾಟ್ಸಪ್‌ ಖಾತೆ ತೆರೆಯಲು ಮೊಬೈಲ್ ನಂಬರ್ ಬೇಕಿಲ್ಲಾ!.ಲ್ಯಾಂಡ್‌ಲೈನ್ ಆದ್ರೂ ಓಕೆ! ಓದಿರಿ : ವಾಟ್ಸಪ್‌ ಖಾತೆ ತೆರೆಯಲು ಮೊಬೈಲ್ ನಂಬರ್ ಬೇಕಿಲ್ಲಾ!.ಲ್ಯಾಂಡ್‌ಲೈನ್ ಆದ್ರೂ ಓಕೆ!

Most Read Articles
Best Mobiles in India

English summary
How to stop people from adding you to WhatsApp Groups.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X