ವಾಟ್ಸಪ್‌ ಖಾತೆ ತೆರೆಯಲು ಮೊಬೈಲ್ ನಂಬರ್ ಬೇಕಿಲ್ಲಾ!.ಲ್ಯಾಂಡ್‌ಲೈನ್ ಆದ್ರೂ ಓಕೆ!

|

ವಿಶ್ವದಲ್ಲಿ 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಅತೀ ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ 'ವಾಟ್ಸಪ್' ಎಲ್ಲ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೂ ಬೆಂಬಲಿಸುತ್ತದೆ. ಟೆಕ್ಸ್ಟ್ ಮೆಸೆಜ್ ಸೇವೆಯೊಂದಿಗೆ ಉಚಿತ ಕರೆ ಮತ್ತು ವಿಡಿಯೊ ಕರೆ ಸೌಲಭ್ಯಗಳನ್ನು ಒದಗಿಸಿರುವ ವಾಟ್ಸಪ್‌ ಇದೀಗ ಅಚ್ಚರಿಯ ಹೆಜ್ಜೆ ಇಟ್ಟಿದೆ. ಕಂಪನಿಯ ಹೊಸ ಎಕ್ಸ್‌ಕ್ಲೂಸಿವ್ ಸುದ್ದಿ ಕೇಳಿದರೇ ನೀವು ಹುಬ್ಬೇರಿಸುವುದು ಗ್ಯಾರಂಟಿ.

ವಾಟ್ಸಪ್‌ ಖಾತೆ ತೆರೆಯಲು ಮೊಬೈಲ್ ನಂಬರ್ ಬೇಕಿಲ್ಲಾ!.ಲ್ಯಾಂಡ್‌ಲೈನ್ ಆದ್ರೂ ಓಕೆ!

ಹೌದು, ವಾಟ್ಸಪ್ ಇನ್ಮುಂದೆ ವಾಟ್ಸಪ್‌ ಖಾತೆ ತೆರೆಯಲು ಮೊಬೈಲ್ ನಂಬರ ಬದಲಿಗೆ ಲ್ಯಾಂಡ್‌ಲೈನ್ ನಂಬರ್‌ ಬಳಸಬಹುದಾಗಿದೆ. ಸಣ್ಣಪುಟ್ಟ ವ್ಯಾಪಾರಸ್ಥರ ಬ್ಯಸಿನೆಸ್‌ಗೆ ಅನುಕೂಲವಾಗಲೆಂದು ಹೊಸದಾಗಿ 'ವಾಟ್ಸಪ್ ಬ್ಯುಸಿನೆಸ್‌ ಆಪ್' ಅನ್ನು ಪರಿಚಯಿಸಿದ್ದು, ಈ ಆಪ್‌ನಲ್ಲಿ ವ್ಯಾಪಾರಸ್ಥರು ತಮ್ಮ ಲ್ಯಾಂಡ್‌ಲೈನ್‌ ನಂಬರ್‌ ದಾಖಲಿಸುವುದರ ಮೂಲಕ ವಾಟ್ಸಪ್ ಆರಂಭಿಸಬಹುದಾಗಿದೆ.

ವಾಟ್ಸಪ್‌ ಖಾತೆ ತೆರೆಯಲು ಮೊಬೈಲ್ ನಂಬರ್ ಬೇಕಿಲ್ಲಾ!.ಲ್ಯಾಂಡ್‌ಲೈನ್ ಆದ್ರೂ ಓಕೆ!

ಬಹುತೇಕ ವ್ಯಾಪಾರಸ್ಥರು ಗ್ರಾಹಕರಿಗೆ ಲ್ಯಾಂಡ್‌ಲೈನ್ ನಂಬರನ್ನು ಕೊಡಲು ಇಚ್ಛಿಸುತ್ತಾರೆ. ಹೀಗಾಗಿ ವಾಟ್ಸಪ್ ಲ್ಯಾಂಡ್‌ಲೈನ್ ನಂಬರ್ ನಿಂದ ಬ್ಯಸಿನೆಸ್ ಆಪ್ ತೆರೆಯಲು ಅವಕಾಶ ಮಾಡಿಕೊಟ್ಟಿದ್ದು, ಈ ಆಯ್ಕೆ ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲಕರವಾಗಲಿದೆ. ಹಾಗಾದರೇ ಮೊಬೈಲ್ ನಂಬರ ಬಳಸದೆ ಲ್ಯಾಂಡ್‌ಲೈನ್ ನಂಬರ್‌ ನೀಡಿ ವಾಟ್ಸಪ್ ಖಾತೆ ತೆರೆಯುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ವಾಟ್ಸಪ್ ಆಪ್‌ ಅನ್ನು ಇನ್‌ಸ್ಟಾನ್‌ ಮಾಡಿಕೊಳ್ಳಬೇಕು, ಒಂದು ವೇಳೆ ಬ್ಯುಸಿನೆಸ್‌ ಉದ್ದೇಶಕ್ಕಾಗಿ ವಾಟ್ಸಪ್ ಬಳೆಸುವುದಾದರೆ 'ಬ್ಯಸಿನೆಸ್ ಆಪ್' ಅನ್ನು ಇನ್‌ಸ್ಟಾಲ್ ಮಾಡಬೇಕು.

ಹಂತ 2

ಹಂತ 2

ಇನ್‌ಸ್ಟಾಲ್ ಮಾಡಿರುವ ವಾಟ್ಸಪ್ ತೆರೆಯಿರಿ ಆಗ ನಿಮಗೆ ನೀವಿರುವ ದೇಶದ ಆಯ್ಕೆಯನ್ನು ಕೇಳುತ್ತದೆ ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಆ ಆಯ್ಕೆ ಕೆಳಗಡೆನೇ ನಂಬರ್ ನಮೂದಿಸುವ ಆಯ್ಕೆ ಕಾಣಿಸುತ್ತದೆ ಅಲ್ಲಿ ಲ್ಯಾಂಡ್‌ಲೈನ್ ನಂಬರ್ ನಮೂದಿಸಿರಿ. ಅಥವಾ ಮೊಬೈಲ್ ನಂಬರು ಬಳೆಸಬಹುದು.

ಹಂತ 3

ಹಂತ 3

ನಂಬರ್ ವೇರಿಫಿಕೇಶನ್ ಮಾಡುತ್ತಾರೆ, ನೀವು ಮೊಬೈಲ್ ನಂಬರ ನೀಡಿದ್ದರೆ ಅದಕ್ಕಾಗಿ ನೀವು ಎಸ್ಎಮ್ಎಸ್ ಪಡೆಯುತ್ತಿರಿ. ನೀವು ಲ್ಯಾಂಡ್‌ಲೈನ್ ನಂಬರ್ ಎಂಟ್ರಿ ಮಾಡಿದ್ದರೇ ಎಸ್‌ಎಮ್‌ಎಸ್‌ ಬದಲಾಗಿ ನೀವು ಎಂಟ್ರಿ ಮಾಡಿರುವ ನಂಬರ್‌ಗೆ ಕರೆ ಬರುತ್ತದೆ.

ಹಂತ 4

ಹಂತ 4

ಲ್ಯಾಂಡ್‌ಲೈನ್ ನಂಬರ ದೃಢಿಕರಿಸಲು ಧ್ವನಿಮುದ್ರಿತ ಕರೆ ಬರಲಿದ್ದು, ನಂತರ ಆರು ಡಿಜಿಟ್‌ಗಳ ಸಂಖ್ಯೆಯನ್ನು ಹೇಳಲಾಗುತ್ತದೆ. ನೀವು ಆ ಸಂಖ್ಯೆಗಳನ್ನು ಸರಿಯಾಗಿ ವಾಟ್ಸಪ್‌ನಲ್ಲಿ ನಮೂದಿಸಿರಿದರೇ ನಿಮ್ಮ ನಂಬರ್ ವೇರಿಫಿಕೇಶನ್ ಪ್ರಕ್ರಿಯೇ ಮುಗಿಯುತ್ತದೆ.

ಹಂತ 5

ಹಂತ 5

ನಂಬರ್‌ ವೇರಿಫಿಕೇಶನ್ ಯಶಸ್ವಿಯಾದ ನಂತರ ವಾಟ್ಸಪ್ ಖಾತೆ ಬಳಕೆಗೆ ಸಿದ್ಧವಾಗಿರುತ್ತದೆ ನೀವು ವಾಟ್ಸಪ್ ಖಾತೆಯ ಬೇಸಿಕ್ ಮಾಹಿತಿಗಳಾದ ನಿಮ್ಮ ಖಾತೆಗೆ ಫೋಟೊ, ಹೆಸರುಗಳನ್ನು ನಮೂದಿಸಿರಿ. ಇದರೊಂದಿಗೆ ಸೆಟ್ಟಿಂಗ್ ಆಯ್ಕೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Here's a step-by-step guide to help you use WhatsApp without your mobile number.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X