ರೈಲ್ವೆಯಲ್ಲಿ ಮೊಬೈಲ್-ಆಧಾರ್ ಅನ್ನು ಗುರುತಿನ ಚೀಟಿಯಾಗಿ ತೋರಿಸಬಹುದು!!

ಎಂ-ಆಧಾರ್ ಆಪ್ ಅನ್ನು ಹೊಂದಿದ್ದರೆ ಇನ್ನು ರೈಲ್ವೆ ಇಲಾಖೆಯಲ್ಲಿ ಗುರುತಿನ ಚೀಟಿಯಾಗಿ ಬಳಸಬಹುದಾಗಿದೆ.!!

|

ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಸಹ ಗುರುತಿನ ಚೀಟಿಯಾಗಿ ಪರಿಗಣಿಸಲಾಗುವುದು ಎಂದು ಭಾರತೀಯ ರೈಲ್ವೇ ಇಲಾಖೆ ಹೆಳಿದೆ.! ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಬಿಡುಗಡೆ ಮಾಡಿದ್ದ ಮೊಬೈಲ್ ಅಧಾರ್ ಅಥವಾ ಎಂ-ಆಧಾರ್ ಆಪ್ ಅನ್ನು ಹೊಂದಿದ್ದರೆ ಇನ್ನು ರೈಲ್ವೆ ಇಲಾಖೆಯಲ್ಲಿ ಗುರುತಿನ ಚೀಟಿಯಾಗಿ ಬಳಸಬಹುದಾಗಿದೆ.!!

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಎಂ-ಆಧಾರ್ ಆಪ್ ಅನ್ನು ಬಿಡುಗಡೆ ಮಾಡಿತ್ತು. ಇದನ್ನೇ ರೈಲ್ವೆಯ ಗುರುತಿನ ಚೀಟಿಯಾಗಿ ಪರಿಗಣಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದು, ಗ್ರಾಹಕರ ಒತ್ತಾಯಕ್ಕೆ ಕೊನೆಗೂ ರೈಲ್ವೇ ಇಲಾಖೆ ಮಣಿದಿದೆ.!!

ರೈಲ್ವೆಯಲ್ಲಿ ಮೊಬೈಲ್-ಆಧಾರ್ ಅನ್ನು ಗುರುತಿನ ಚೀಟಿಯಾಗಿ ತೋರಿಸಬಹುದು!!

ಹಾಗಾಗಿ, ಇನ್ನು ರೈಲ್ವೆಯಲ್ಲಿ ಪ್ರಯಾಣ ನಡೆಸುವಾಗ ಎಂ-ಆಧಾರ್ ಆಪ್‌ನಲ್ಲಿ ಲಾಗಿನ್ ಆಗುವ ಮೂಲಕ ತನ್ನ ಆಧಾರ್ ಗುರುತಿನ ಚೀಟಿಯ ಡಿಜಿಟಲ್ ವರ್ಷನ್ ಡೌನ್‌ಲೋಡ್ ಮಾಡಿ ರೈಲ್ವೆ ಅಧಿಕಾರಿಗಳಿಗೆ ತೋರಿಸಿದರೆ ಸಾಕಾಗುತ್ತದೆ. ಡಿಜಿಟಲ್ ಆಧಾರ್ ಅಧಿಕೃತ ಗುರುತಿನ ಚೀಟಿ ಎಂದು ಪರಿಗಣಿಸಬೇಕು ಎಂದು ರೈಲ್ವೇ ಇಲಾಖೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ರೈಲ್ವೆಯಲ್ಲಿ ಮೊಬೈಲ್-ಆಧಾರ್ ಅನ್ನು ಗುರುತಿನ ಚೀಟಿಯಾಗಿ ತೋರಿಸಬಹುದು!!

ಇನ್ನು ಯಾವ ವ್ಯಕ್ತಿಯ ಮೊಬೈಲ್ ನಂಬರ್ ಆಧಾರ್‌ಗೆ ಜೋಡಣೆಯಾಗಿರುತ್ತದೆಯೋ ಆ ನಂಬರಿನ ಮೊಬೈಲ್ ಮೂಲಕ ಮಾತ್ರ ಆಧಾರ್ ಡಿಜಿಟಲ್ ವರ್ಷನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ!!

ಓದಿರಿ: ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಬಳಸುವ ರಾಷ್ಟ್ರ ಭಾರತ!!

Best Mobiles in India

English summary
The Ministry of Railways said today it has decided to allow m- Aadhaar .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X