ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಬಳಸುವ ರಾಷ್ಟ್ರ ಭಾರತ!!

ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌ ಬಳಕೆದಾರರನ್ನು ಹೊಂದಿರುವ ಹಾಗೂ ಬಳಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ.!!

|

ಜಿಯೋ ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಡೇಟಾ ಸಿಗುತ್ತಿರುವುದರಿಂದ, ಇದೀಗ ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಮತ್ತು ವಾಟ್ಸ್‌ಆಪ್‌ ಬಳಕೆದಾರರನ್ನು ಹೊಂದಿರುವ ಹಾಗೂ ಬಳಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ.!!

ಹೌದು, ಈ ಮೊದಲು ಡೇಟಾ ಬಳಕೆದಾರರಲ್ಲಿ ವಿಶ್ವದಲಕ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೇರಿದೆ. ಯುವಕರೆ ಹೆಚ್ಚಿರುವ, ಪ್ರಪಂಚದಲ್ಲಿಯೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ ಒಂದೇ ವರ್ಷದಲ್ಲಿ ಆನ್‌ಲೈನ್‌ಗೆ ವ್ಯವಸ್ಥೆಗೆ ಬೃಹದಾಕಾರವಾಗಿ ತೆರೆದುಕೊಂಡಿದೆ.!!

ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಬಳಸುವ ರಾಷ್ಟ್ರ ಭಾರತ!!

ಜಿಯೊದಿಂದಾಗಿ ಗೂಗಲ್ ಮತ್ತು ಫೇಸ್‌ಬುಕ್‌ಗೆ ಹೊಸದಾಗಿ 7ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಇನ್ನು4ಜಿ ಸ್ಮಾರ್ಟ್‌ಫೋನ್‌ ತಯಾರಿಕ ಕಂಪೆನಿಗಳಿಗೂ ಭಾರತ ಉತ್ತಮ ಮಾರುಕಟ್ಟೆಯಾಗಿ ಬದಲಾಗಿದೆ.! 3ಜಿ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ 4ಜಿ ಸ್ಮಾರ್ಟ್‌ಫೋನ್‌ಗಳ ಬಳಕೆ ಶೇ 95ರಷ್ಟು ಹೆಚ್ಚಾಗಿದೆ

ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಬಳಸುವ ರಾಷ್ಟ್ರ ಭಾರತ!!

ಈ ಮೊದಲು 20 ಕೋಟಿ ಜಿಬಿಯಷ್ಟು ಇದ್ದ ಮೊಬೈಲ್‌ ಡೇಟಾ ಬಳಕೆ ಈಗ 150ಕೋಟಿ ಜಿಬಿಗೆ ತಲುಪಿದೆ.! ಭಾರತೀಯರು ಪ್ರತಿ ತಿಂಗಳು 65 ಕೋಟಿ ಗಂಟೆಗಳಿಗಿಂತ ಹೆಚ್ಚು ವಿಡಿಯೊ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ.!! 150ಕೋಟಿ ಜಿಬಿ ಡೇಟಾದಲ್ಲಿ ಸುಮಾರು 125ಕೋಟಿ ಜಿಬಿಯನ್ನು ಜಿಯೊ ಗ್ರಾಹಕರೇ ಬಳಸುತ್ತಿದ್ದಾರೆ ಎಂದು ಜಿಯೋ ಕಂಪೆನಿ ಹೇಳಿಕೊಂಡಿದೆ.!!

ಓದಿರಿ: ಮೆರಿಕಾ ಮೂಲದ ಅದ್ಬುತ ಫೋನ್ ಭಾರತಕ್ಕೆ!.4 ಕ್ಯಾಮೆರಾದ ಫೋನ್ ಬೆಲೆ 11,999ರೂ.!!

Best Mobiles in India

English summary
Thanks to Reliance Jio! India becomes top mobile data user.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X