Home
Apps

ಮಾಹಿತಿ ಸೋರಿಕೆ ಸುದ್ದಿ ಕುರಿತು ಸ್ಪಷ್ಟನೆ ನೀಡಿದ 'ಇನ್‌ಸ್ಟಗ್ರಾಂ'!

ಇನ್‌ಸ್ಟಾಗ್ರಾಂ ಭದ್ರತಾ ವೈಫಲ್ಯವನ್ನು ಅನುಭವಿಸಿದೆ ಎಂಬ ಸುದ್ದಿಗೆ ಇನ್‌ಸ್ಟಗ್ರಾಂ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ನಾವು ದುರುಪಯೋಗದ ಯಾವುದೇ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ ಅವರು, ಇನ್‌ಸ್ಟಾಗ್ರಾಂ ಬಳಕೆದಾರರ ಯಾವುದೇ ಇಮೇಲ್‌ ಅಥವಾ ಮೊಬೈಲ್ ಸಂಖ್ಯೆಗಳು ಸೋರಿಯಾಗಿಲ್ಲ ಎಂದು ಮಧ್ಯಮಗಳಿಗೆ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂ ಭದ್ರತಾ ವೈಫಲ್ಯ ಅನುಭವಿಸಿದೆ ಎಂಬ ಈ ಕಥೆಯ ಬಗ್ಗೆ ಆರಂಭಿಕ ತನಿಖೆಯ ನಂತರ, ಬಳಕೆದಾರರ ಯಾವುದೇ ಖಾಸಗಿ ಇಮೇಲ್‌ಗಳು ಅಥವಾ ಫೋನ್ ಸಂಖ್ಯೆಗಳನ್ನು ಪ್ರವೇಶಿಸಲಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಭದ್ರತಾ ವೈಫಲ್ಯ ಕುರಿತು ಸಂಶೋಧಕರೊಬ್ಬರು ವರದಿ ಪ್ರಕಟಿಸಿದ್ದು ಶುದ್ದ ಸುಳ್ಳು ಎಂಬ ಅರ್ಥದಲ್ಲಿ ವಕ್ತಾರರು ಮಾತನಾಡಿದ್ದಾರೆ.

ಮಾಹಿತಿ ಸೋರಿಕೆ ಸುದ್ದಿ ಕುರಿತು ಸ್ಪಷ್ಟನೆ ನೀಡಿದ 'ಇನ್‌ಸ್ಟಗ್ರಾಂ'!

ಸುಮಾರು ಐದು ಕೋಟಿ ಬಳಕೆದಾರರ ಖಾಸಗಿ ಡಾಟಾ ಸೋರಿಕೆಯಾಗಿರುವ ಸಾಧ್ಯತೆಯಿದ್ದು, ಸೆಲೆಬ್ರಿಟಿ ಮತ್ತು ಆಫೀಶಿಯಲ್ ಬ್ರ್ಯಾಂಡ್ ಖಾತೆಗಳ ಮಾಹಿತಿ ಕೂಡ ಸೋರಿಕೆಯಾಗಿದೆ ಎಂದು ಇತ್ತೀಚಿಗಷ್ಟೇ ಟೆಕ್‌ಕ್ರಂಚ್‌ನಲ್ಲಿ ವರದಿಯಾಗಿತ್ತು. ಮುಂಬೈ ಮೂಲದ ಮಾಧ್ಯಮ ಮಾರ್ಕೆಟಿಂಗ್ ಸಂಸ್ಥೆ ಚಾರ್ಟ್‌ಬಾಕ್ಸ್‌ ಮೂಲಕ ಸೋರಿಕೆ ಅಂಶ ಪತ್ತೆಯಾಗಿತ್ತು ಎಂದು ವರದಿ ಹೇಳಿತ್ತು.

ಇನ್‌ಸ್ಟಾಗ್ರಾಂ ಖಾತೆದಾರರ ಹೆಸರು, ಫೋಟೋಗಳು ಮತ್ತು ಅವರ ಫೋನ್ ನಂಬರ್ ಸೇರಿದಂತೆ ಇನ್‌ಸ್ಟಾಗ್ರಾಂ ಫಾಲೋವರ್ಸ್ ವಿವರ ಕೂಡ ಬಹಿರಂಗವಾಗಿ ದೊರೆಯುವಂತಾಗಿದ್ದು, ಇನ್‌ಸ್ಟಾ ಖಾತೆಯನ್ನು ಖಾಸಗಿಯಾಗಿ ಇರಿಸಿಕೊಂಡು ಪ್ರೈವೆಸಿ ಸೆಟ್ಟಿಂಗ್ ಅಳವಡಿಸಿಕೊಂಡಿದ್ದವರ ಖಾತೆಯ ಮಾಹಿತಿ ಕೂಡ ಸೋರಿಕೆಯಾಗಿದೆ ಎಂದು ಟೆಕ್‌ಕ್ರಂಚ್ ವರದಿಯಲ್ಲಿ ಹೇಳಲಾಗಿತ್ತು.

ಮಾಹಿತಿ ಸೋರಿಕೆ ಸುದ್ದಿ ಕುರಿತು ಸ್ಪಷ್ಟನೆ ನೀಡಿದ 'ಇನ್‌ಸ್ಟಗ್ರಾಂ'!

ಆದರೆ ಇದನ್ನು ಅಲ್ಲಗಳೆದಿರುವ ಇನ್‌ಸ್ಟಗ್ರಾಂ, ಇನ್‌ಸ್ಟಗ್ರಾಂ ಬಳಕೆದಾರರ ಪ್ರದೇಶ, ಅವರ ಕುರಿತ ವಿಚಾರಗಳು, ಅವರು ಏನು ಇಷ್ಟಪಡುತ್ತಾರೆ, ಯಾವ ಮಾದರಿಯ ಪೇಜ್‌ಗಳು ಲೈಕ್ ಮಾಡುತ್ತದೆ ಹೀಗೆ ಸಾಕಷ್ಟು ಮಾಹಿತಿಗಳು ಲೀಕ್ ಆಗಿವೆ ಎಂಬುದು ಸತ್ಯವಲ್ಲ. ಇದು ಇನ್‌ಸ್ಟಗ್ರಾಂ ಬಳಕೆದಾರರಿಗೆ ಆತಂಕಕ್ಕೆ ಕಾರಣವಾಗಬಾರದು ಎಂಬರ್ಥದಲ್ಲಿ ಬಳಕೆದಾರರಿಗೆ ತಿಳಿಸಿದೆ.

ಓದಿರಿ: 2019ರಲ್ಲಿ ನೀವು ಕಂಡುಕೇಳಿರದಷ್ಟು ಬದಲಾಗುತ್ತಿದೆ 'ವಾಟ್ಸ್ಆಪ್'!!

Best Mobiles in India

English summary
Instagram on Thursday said it was not the source of private contact information for millions of influential users of the service recently found in an unguarded online database.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+