Just In
Don't Miss
- Automobiles
ಕಿಯಾ ಮೋಟಾರ್ಸ್ ಹೊಸ ಕಾರು ಉತ್ಪಾದನಾ ಘಟಕಕ್ಕೆ ಸಿಕ್ತು ಅಧಿಕೃತ ಚಾಲನೆ
- News
ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
2019ರಲ್ಲಿ ನೀವು ಕಂಡುಕೇಳಿರದಷ್ಟು ಬದಲಾಗುತ್ತಿದೆ 'ವಾಟ್ಸ್ಆಪ್'!!
ವಾಟ್ಸ್ಆಪ್ ಆಪ್ ಮತ್ತಷ್ಟು ಬದಲಾಗುತ್ತಿದೆ ಎಂದು ಕೇಳಿದಾಕ್ಷಣವೇ ಈ ವಾಟ್ಸ್ಆಪ್‌ನಲ್ಲಿ ಇನ್ನೂ ಏನೆನೆಲ್ಲಾ ಫೀಚರ್ಸ್ ತರಬಹುದು ಎಂದು ಅನಿಸುತ್ತದೆ. ಏಕೆಂದರೆ, ಈಗಾಗಲೇ ನೂರಾರು ಬದಲಾವಣೆಗಳನ್ನು ಕಂಡಿರುವ ವಾಟ್ಸ್ಆಪ್ ಇನ್ಮುಂದೆಯೂ ಹಲವು ಅಪ್‌ಡೇಟ್‌ಗಳನ್ನು ಪಡೆಯಲಿದೆ. ಹೌದು, ಈ 2019ರಲ್ಲೂ ಕೂಡ ವಾಟ್ಸ್ಆಪ್ ನೀವು ಕಂಡುಕೇಳಿರದಷ್ಟು ಬದಲಾಗುತ್ತಿದೆ.
ನೀವು ಕಂಡು ಕೇಳಿರದಂತಹ ಬದಲಾವಣೆಗಳನ್ನು 2019 ರಲ್ಲಿ ವಾಟ್ಸ್ಆಪ್ ತರಲಿದೆ ಎಂದು ಹೇಳುವುದು ಆಶ್ಚರ್ಯವೆನಿಸುವುದಿಲ್ಲ. ಏಕೆಂದರೆ, ವಾಟ್ಸ್ಆಪ್‌ನಲ್ಲಿ ಹೊಸದಾಗಿ ಸೈಲೆಂಟ್ ಮೋಡ್, ಕಾಂಟ್ಯಾಕ್ಟ್ಸ್ ರ್ಯಾಂಕಿಂಗ್, ಕನ್ಸಿಗೇಟಿವ್ ವಾಯ್ಸ್ ಮೆಸೇಜ್ನಂತಹ ಫೀಚರ್‌ಗಳು ಸೇರಿಕೊಳ್ಳಲು ತಯಾರಾಗಿದ್ದು, ಇವು ಸುಲಭ ಮತ್ತು ಬಳಕೆದಾರ ಸ್ನೇಹಿ ಫೀಚರ್ಸ್ ಆಗಿವೆ.
2019ರಲ್ಲಿ ನಾವು ನಿರೀಕ್ಷಿಸಬಹುದಾಗಿರುವ ವಾಟ್ಸ್ಆಪ್ನ ಕೆಲವು ಫೀಚರ್‌ಗಳನ್ನು ನಾವು ಇಂದಿನ ಲೇಖನದಲ್ಲಿ ಪಟ್ಟಿ ಮಾಡಿದ್ದೇವೆ. ಈ ಎಲ್ಲಾ ವಾಟ್ಸ್ಆಪ್ ಅಪ್‌ಡೇಟ್‌ಗಳು ವಾಟ್ಸ್ಆಪ್ ಬಳಕೆಯನ್ನು ಮತ್ತಷ್ಟು ಸುಲಭ ಮತ್ತು ಬಳಕೆದಾರ ಸ್ನೇಹಿಯಾಗಿ ಬದಲಾಯಿಸಲಿವೆ. ಹಾಗಾದರೆ, ಆ ಹೊಸ ಅಪ್‌ಡೇಟ್ಸ್ ಯಾವುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಕನ್ಸಿಗೇಟಿವ್ ವಾಯ್ಸ್ ಮೆಸೇಜ್
ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸ್ ಆಪ್ ಬಳಸುವ ಬಳಕೆದಾರರಿಗೆ ಕಂಟಿನ್ಯೂಯಸ್ ಆಗಿ ವಾಯ್ಸ್ ಮೆಸೇಜ್ಗಳನ್ನು ಪ್ಲೇ ಮಾಡುವುದಕ್ಕೆ ಈ ಫೀಚರ್ ನೆರವು ನೀಡುತ್ತದೆ. ವಾಟ್ಸ್ಆಪ್‌ನಲ್ಲಿ ಓದಿರದ ಎರಡು ಅಥವಾ ಅದಕ್ಕಿಂತ ಹೆಚ್ಚು ವಾಯ್ಸ್ ಮೆಸೇಜ್ ಗಳಿದ್ದಾಗ ಈ ಫೀಚರ್ ಆಕ್ಟಿವೇಟ್ ಆಗಿರುತ್ತದೆ. ಇಂತಹ ವಿಶೇಷ ಫೀಚರ್ ಅನ್ನು ವಾಟ್ಸ್ಆಪ್ ಇದೀಗ ಟೆಸ್ಟ್ ಮಾಡುತ್ತಿದೆ.

ವೆಕೇಷನ್ ಅಥವಾ ಸೈಲೆಂಟ್ ಮೋಡ್
ವಾಟ್ಸ್ಆಪ್ ಬೀಟಾ ಇನ್ಫೋ ಐಓಎಸ್ ಆಪ್ ನಲ್ಲಿ ಈ ಫೀಚರ್ ಅನ್ನು ಕೆಲವು ವಾರಗಳ ಹಿಂದೆ ಗಮನಿಸಿದೆ. ಕೆಲವು ಬಳಕೆದಾರರಲ್ಲಿ ಈಗಾಗಲೇ ಲಭ್ಯವಿರುವ ಈ ಸೈಲೆಂಟ್ ಮೋಡ್ ಫೀಚರ್ ಮ್ಯೂಟ್ ಆಗಿರುವ ಚಾಟ್‌ಗಳು ಆರ್ಕೈವ್ ಆಗುವಂತೆ ಇದು ನೋಡಿಕೊಳ್ಳುತ್ತದೆ.. ಇದುವರೆಗೂ ಪ್ರಕಟಿಸಿರದ ಫೀಚರ್ ಇದಾಗಿದ್ದು ವಾಟ್ಸ್ಆಪ್ ಬ್ಯುಸಿನೆಸ್ ಆಪ್‌ನ ಗುರಿಯಾಗಿದೆ ಎನ್ನಲಾಗಿದೆ.

ಡಾರ್ಕ್ ಮೋಡ್ ಆಯ್ಕೆ
ಫೋನ್ ಬಳಕೆಯಲ್ಲಿ ಟ್ರೆಂಡ್ ಆಗಿರುವ ಡಾರ್ಕ್ ಮೋಡ್ ಆಯ್ಕೆ ಬಗ್ಗೆ ನಾವೇನು ನಿಮಗೆ ಹೇಳಬೇಕಿಲ್ಲ. ಆದರೆ, ಡಾರ್ಕ್ ಮೋಡ್ ಹೆಸರೇ ಸೂಚಿಸುವಂತೆ ಇದು ವಾಟ್ಸ್ಆಪ್ ಅನ್ನು ಕತ್ತಲೆಯಲ್ಲಿ ಚಾಟ್ ಮಾಡುವುದಕ್ಕೆ ಅನುವು ಮಾಡಿಕೊಡುವ ಫೀಚರ್ ಇದಾಗಿದೆ. ಯುಟ್ಯೂಬ್, ಟ್ವೀಟರ್, ಗೂಗಲ್ ಮ್ಯಾಪ್‌ನಲ್ಲಿ ಗಮನಿಸಬಹುದಾಗಿರುವ ಸೇಮ್ ಫೀಚರ್ ವಾಟ್ಸ್ಆಪ್‌ನಲ್ಲೂ ಬರುತ್ತಿದೆ.

ಕ್ಯೂಆರ್ ಮೂಲಕ ಕಾಂಟ್ಯಾಕ್ಟ್ ಮಾಹಿತಿ
ಸುಲಭದ ಮತ್ತು ಸೆಕ್ಯೂರ್ ಆಗಿರುವ ಮಾಹಿತಿ ಹಂಚಿಕೆಯ ತಂತ್ರಜ್ಞಾನವನ್ನು ವಾಟ್ಸ್ಆಪ್ ಪರಿಚಯಿಸುತ್ತಿದೆ. ಕ್ಯೂಆರ್ ಕೋಡ್ ಜನರೇಟ್ ಮಾಡುವ ಮೂಲಕ ಕಾಂಟ್ಯಾಕ್ಟ್ ಮಾಹಿತಿಯನ್ನು ಸುಲಭದಲ್ಲಿ ಹಂಚಿಕೊಳ್ಳುವುದಕ್ಕೆ ನೆರವು ನೀಡುವ ಫೀಚರ್ ಇದಾಗಿದೆ. ಜೊತೆಗೆ ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಎಲ್ಲಾ ಫೀಲ್ಡ್ ಗಳನ್ನು ಬಳಕೆದಾರರ ಅಡ್ರೆಸ್ ಬುಕ್ ನಲ್ಲಿ ತುಂಬಿಸುತ್ತದೆ

ಮಲ್ಟಿ-ಶೇರ್ ಫೈಲ್ಸ್
ವಾಟ್ಸ್ಆಪ್‌ನ ಹೊಸ ಫೀಚರ್ ಮಲ್ಟಿ-ಶೇರ್ ಫೈಲ್ಸ್ ಆಯ್ಕೆಯು ಮಲ್ಟಿಪಲ್ ಫೈಲ್‌ಗಳನ್ನು ಮಲ್ಟಿಪಲ್ ಕಾಂಟ್ಯಾಕ್ಟ್ ನೊಂದಿಗೆ ಹಂಚಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಈ ಫೀಚರ್ ಮೂಲಕ ಪಿಡಿಎಫ್, ಆಡಿಯೋ ಸೇರಿ ಇತ್ಯಾದಿ ಫೈಲ್‌ಗಳನ್ನು ಬೇರೆ ಅಪ್ಲಿಕೇಷನ್ನಿನ ಎರಡು, ಮೂರು ಕಾಂಟ್ಯಾಕ್ಟ್ ಜೊತೆಗೆ ಒಂದೇ ಬಾರಿ ಹಂಚಿಕೊಳ್ಳಬಹುದು ಎಂದು ಹೇಳಲಾಗಿದೆ.

ಪುಶ್ ನೋಟಿಫಿಕೇಷನ್ ವೀಡಿಯೋ
ಐಓಎಸ್ ಬಳಕೆದಾರರಿಗೆ ಈಗಾಗಲೇ ಲಭ್ಯವಿರುವ ಫೀಚರ್ ಇದಾಗಿದ್ದು, ಸ್ಮಾರ್ಟ್‌ಫೋನಿಗೆ ಬರುವ ಪುಶ್ನೋಟಿಫಿಕೇಷನ್‌ನಲ್ಲೇ ವೀಡಿಯೋಗಳನ್ನು ಪ್ಲೇ ಮಾಡಿಕೊಂಡು ನೋಡಬಹುದಾದ ಅವಕಾಶ ಬಳಕೆದಾರರಿಗೆ ಈ ಫೀಚರ್ ಮೂಲಕ ಲಭ್ಯವಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದ ವೀಡಿಯೋ ಪ್ಲೇ ಬಳಕೆದಾರರು ವಾಟ್ಸ್‌ಆಪ್ ತೆರೆಯಬೇಕಾಗಿರುವ ಅಗತ್ಯವಿರುವುದಿಲ್ಲ.

ಕಾಂಟ್ಯಾಕ್ಟ್ಸ್ ರ್ಯಾಂಕಿಂಗ್
ನೀವು ಚಾಟ್ ಮಾಡುವ ಆಧಾರದಲ್ಲಿ ಕಾಂಟ್ಯಾಕ್ಟ್ ಗಳಿಗೆ ರ್ಯಾಂಕ್ ಸಿಗುತ್ತದೆ ಎಂದು ಹೇಳಲಾಗಿದೆ. ಅಂದರೆ ನೀವು ಯಾರೊಂದಿಗೆ ಹೆಚ್ಚು ಚಾಟ್ ಮಾಡುತ್ತೀರೋ ಅವರಿಗೆ ನಂಬರ್ 1 ಸ್ಥಾನ. ಉತ್ತಮ ರ್ಯಾಕಿಂಗ್ನ ಅರ್ಥ ನೀವು ಅತೀ ಹೆಚ್ಚು ಮೀಡಿಯಾ, ಟೆಕ್ಸ್ಟ್ ಫೈಲ್ ಗಳನ್ನು ಯಾರೊಂದಿಗೆ ಹೆಚ್ಚು ಹಂಚಿಕೊಳ್ಳುತ್ತೀರೋ ಅವರು ನಿಮ್ಮ ಲಿಸ್ಟ್‌ನ ಮೇಲ್ದರ್ಜೆಯಲ್ಲಿರುತ್ತಾರೆ.

ವಾಟ್ಸ್ಆಪ್‌ನಲ್ಲಿ ಮಾತ್ರವೇ ಕಾಂಟ್ಯಾಕ್ಟ್
ಇನ್ಮುಂದೆ ವಾಟ್ಸ್ಆಪ್‌ಗೆ ನೇರವಾಗಿ ಕಾಂಟ್ಯಾಕ್ಟ್ ಸೇರಿಸುವುದಕ್ಕೆ ಆಯ್ಕೆ ಇರಲಿದೆ. ವಾಟ್ಸ್ಆಪ್ ನಲ್ಲಿಯೇ ಕಾಂಟ್ಯಾಕ್ಟ್ ಅನ್ನು ಸೇರಿಸಿಕೊಳ್ಳುವುದಕ್ಕೆ ಈ ಫೀಚರ್ ಸಹಾಯಕವಾಗಿರುತ್ತದೆ. ಅಂದರೆ ಈ ಫೀಚರ್ ನಿಮಗೆ ದೇಶವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೇಳುತ್ತದೆ ಮತ್ತು ಕಾಂಟ್ಯಾಕ್ಟ್‌ನಲ್ಲಿ ಸ್ವಯಂಚಾಲಿತವಾಗಿ ಫೋನ್ ನಂಬರ್‌ಗೆ ಸಂಬಂಧಿಸಿದ ಕಂಟ್ರಿಕೋಡ್ ಸಿಗುತ್ತದೆ.

ಎಕ್ಸ್ ಟರ್ನಲ್ ಸರ್ವೀಸ್
ವಾಟ್ಸ್ಆಪ್ ಇದುವರೆಗೂ ಪ್ರಕಟಿಸಿರದ ಫೀಚರ್ ಇದಾಗಿದ್ದು, ಎಕ್ಸ್ ಟರ್ನಲ್ ಸರ್ವೀಸ್ ಜೊತೆಗೆ ವಾಟ್ಸ್ಆಪ್ ಅಕೌಂಟ್ ಲಿಂಕ್ ಮಾಡುವುದಕ್ಕೆ ನೆರವು ನೀಡುತ್ತದೆ. ಇದು ವಾಟ್ಸ್ಆಪ್ ಬ್ಯುಸಿನೆಸ್ ಆಪ್ ಜೊತೆಗೆ ಅಕೌಂಟ್ ಪಾಸ್‌ವರ್ಡ್ ಅನ್ನು ರಿಕವರ್ ಮಾಡಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಆದಷ್ಟು ಬೇಗನೆ ಈ ಫೀಚರ್ ನಿಮಗೆ ಲಭ್ಯವಾಗುತ್ತದೆ ಎಂದು ತಿಳಿದುಬಂದಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090