ಈ ಉಚಿತ ಆಪ್‌ನಲ್ಲಿ IPL ಮ್ಯಾಚ್‌ಗಳ ತಾಜಾ ಅಪ್‌ಡೇಟ್ಸ್‌ ಲಭ್ಯ.!

|

2019ರ ಐಪಿಎಲ್ ಶುರುವಾಗಿದ್ದು, ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾದಂತಾಗಿದೆ ಯಾವ ಮ್ಯಾಚನ್ನು ಮಿಸ್‌ ಮಾಡದೇ ನೋಡುತ್ತಿದ್ದಾರೆ. ಆದರೆ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಟಿವಿಯಲ್ಲಿ ಐಪಿಎಲ್ ಮ್ಯಾಚ್‌ ನೋಡಲು ಸಾಧ್ಯವಾಗದಿದ್ದಾಗ ಹಾಟ್‌ಸ್ಟಾರ್‌ ಆಪ್‌ ಅಥವಾ ಜಿಯೋ ಟಿವಿಗಳ ಮೋರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಐಪಿಎಲ್ ಅಪ್‌ಡೇಟ್ಸ್‌ಗೆ ಅತ್ಯುತ್ತಮ ಆಪ್‌ ಯಾವುದಾದರೂ ಇದೆಯಾ ಅಂತಾ ಸರ್ಚ್‌ ಮಾಡುತ್ತಿದ್ದಾರೆ.

ಈ ಉಚಿತ ಆಪ್‌ನಲ್ಲಿ IPL ಮ್ಯಾಚ್‌ಗಳ ತಾಜಾ ಅಪ್‌ಡೇಟ್ಸ್‌ ಲಭ್ಯ.!

ಹೌದು, ಕ್ರಿಕೆಟ್‌ ಕ್ರೇಜ್‌ ಅಂದರೇ ಅದು ಹಾಗೆನೇ, ಅಭಿಮಾನಿಗಳಲ್ಲಿ ಮ್ಯಾಚ್‌ನ ಕ್ಷಣ ಕ್ಷಣದ ಅಪ್‌ಡೇಟ್‌ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಹೆಚ್ಚುತ್ತಲೆ ಇರುತ್ತದೆ. ಅದಕ್ಕಾಗಿ ಐಪಿಎಲ್‌ನ ಅಧಿಕೃತ ಆಪ್‌ 'IPL 2019' ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆಪ್‌ ಸಂಪೂರ್ಣ ಜಾಹಿರಾತು ಮುಕ್ತವಾಗಿದ್ದು, ಪ್ರತಿ ಮ್ಯಾಚಿನ ಬಾಲ್‌ ಟು ಬಾಲ್‌ ಲೈವ್‌ ಅಪ್‌ಡೇಟ್‌ ಮಾಹಿತಿಗಳು ಗ್ರಾಹಕರಿಗೆ ದೊರೆಯಲಿವೆ. ಹಾಗಾದರೇ ಐಪಿಎಲ್‌ ಆಪ್‌ನಲ್ಲಿ ಲಭ್ಯವಿರುವ ಫೀಚರ್ಸ್‌ಗಳೆನು ಎಂಬುದನ್ನು ನೋಡೋಣ ಬನ್ನಿರಿ.

ಬಾಲ್ ಟು ಬಾಲ್ ಕಾಮೆಂಟರಿ

ಬಾಲ್ ಟು ಬಾಲ್ ಕಾಮೆಂಟರಿ

ಪ್ರತಿ ಮ್ಯಾಚ್‌ ಆರಂಭದಿಂದ ಹಿಡಿದು ಕೊನೆಯವರೆಗೂ ಸಂಪೂರ್ಣ ಲೈವ್‌ ಅಪ್‌ಡೇಟ್ಸ್‌ ಸೀಗಲಿದ್ದು, ಅತ್ಯುತ್ತಮ ವೀಕ್ಷಕ ವಿವರಣೆ ಸಹ ಕೇಳಬಹುದಾಗಿದೆ. ಇದರೊಂದಿಗೆ ಬಾಲ್‌ ಟು ಬಾಲ್‌ನ ಸ್ಕೋರ್‌ ಮಾಹಿತಿಗಳು ಕ್ವಿಕ್‌ ಆಗಿ ಆಪ್‌ಡೇಟ್‌ ಆಗುತ್ತಲಿರುತ್ತವೆ.

ಟಿಕೆಟ್‌ ಖರೀದಿಸಬಹುದು

ಟಿಕೆಟ್‌ ಖರೀದಿಸಬಹುದು

ಐಪಿಎಲ್‌ನ ಅಧಿಕೃತ ಆಪ್‌ನಲ್ಲಿ ಮ್ಯಾಚ್‌ಅಪ್‌ಡೇಟ್ಸ್‌ಗಳು ದೊರೆಯುವುದರೊಂದಿಗೆ ಮ್ಯಾಚ್‌ಗಳ ಟಿಕೆಟ್‌ ಝರೀದಿಸುವ ಆಯ್ಕೆಯನ್ನು ನೀಡಲಾಗಿದ್ದು, ಗ್ರಾಹಕರು ಐಪಿಎಲ್‌ ಮ್ಯಾಚ್‌ಗಳ ಟಿಕೆಟ್‌ ಖರೀದಿಸಿ ಸ್ಟೇಡಿಯಂನಲ್ಲಿ ಮ್ಯಾಚ್‌ ವೀಕ್ಷಿಸಬಹುದು.

ವಿಡಿಯೊ ಹೈಲೈಟ್ಸ್‌

ವಿಡಿಯೊ ಹೈಲೈಟ್ಸ್‌

ಐಪಿಎಲ್‌ ಮ್ಯಾಚ್‌ ಮಾಹಿತಿಗೆ ಅತ್ಯುತ್ತಮ ಆಪ್‌ ಇದಾಗಿದ್ದು, ಇದರ ಇನ್ನೊಂದು ವಿಶೇಷವೆಂದರೇ ಮ್ಯಾಚ್‌ಗಳಲ್ಲಿನ ಸಿಕ್ಸ್‌, ವಿಕೆಟ್, ಕ್ಯಾಚ್‌, ಹಲವು ರೋಚಕ ಸನ್ನಿವೇಶಗಳ ಪ್ರಮುಖ ಹೈಲೈಟ್ಸ್‌ ವಿಡಿಯೊಗಳನ್ನು ಸಹ ವೀಕ್ಷಿಸಬಹುದಾಗಿದೆ.

ಐಪಿಎಲ್‌ ಸೆಲ್ಫಿ

ಐಪಿಎಲ್‌ ಸೆಲ್ಫಿ

ಐಪಿಎಲ್‌ ಮ್ಯಾಚ್‌ನ ಆರಂಭದ ಮೊದಲು ಮತ್ತು ಮ್ಯಾಚ್‌ ಮುಗಿದ ಬಳಿಕ ವಿಶೇಷ ಸೆಲ್ಫಿ ಫೋಟೊಗಳನ್ನು ಆಪ್‌ನಲ್ಲಿ ನೋಡಬಹುದಾಗಿದೆ. ಆಟಗಾರರ ಸೆಲ್ಫಿ ಕ್ಲಿಕ್ಕ್‌ಗಳನ್ನು ಸಹ ಆಪ್‌ನಲ್ಲಿ ಅಪ್‌ಡೇಟ್‌ ಮಾಡುತ್ತಾರೆ.

ನ್ಯೂಸ್‌ ಮತ್ತು ಇಂಟರ್‌ವ್ಯೂವ್‌

ನ್ಯೂಸ್‌ ಮತ್ತು ಇಂಟರ್‌ವ್ಯೂವ್‌

ಐಪಿಎಲ್‌ನ ಅಧಿಕೃತ ಆಪ್‌ ಆಗಿರುವುದರಿಂದ ಈ ಆಪ್‌ನಲ್ಲಿ ಐಪಿಎಲ್‌ನ ಬ್ರೇಕಿಂಗ್ ತಾಜಾ ಸುದ್ದಿಗಳನ್ನು ವೀಕ್ಷಿಸಬಹುದಾಗಿದೆ. ಹಾಗೇ ಆಟಗಾರರ ಮತ್ತು ಕ್ರಿಕೆಟ್‌ಗೆ ಸಂಭಂದಿಸಿದ ಸಂಪನ್ಮೂಲ ವ್ಯಕ್ತಿಗಳ ಇಂಟರ್‌ವ್ಯೂವ್‌ ಗಳನ್ನು ಸಹ ಆಪ್‌ನಲ್ಲಿ ಅಪ್‌ಡೇಟ್‌ ಮಾಡುತ್ತಾರೆ.

ಓದಿರಿ : ಸ್ಮಾರ್ಟ್‌ಫೋನಿನಲ್ಲಿ 'ಐಪಿಎಲ್‌' ಲೈವ್‌ ಮ್ಯಾಚ್ ವೀಕ್ಷಿಸುವುದು ಹೇಗೆ ಗೊತ್ತಾ.!ಓದಿರಿ : ಸ್ಮಾರ್ಟ್‌ಫೋನಿನಲ್ಲಿ 'ಐಪಿಎಲ್‌' ಲೈವ್‌ ಮ್ಯಾಚ್ ವೀಕ್ಷಿಸುವುದು ಹೇಗೆ ಗೊತ್ತಾ.!

Best Mobiles in India

English summary
IPL cricket in India official app IPL 2019.to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X