ಮನೆಯ TV ಅನ್ನು ಇನ್ಮುಂದೆ ಕಂಪ್ಯೂಟರ್ ಆಗಿ ಬಳಕೆ ಮಾಡಬಹುದು!..ಇಲ್ಲಿದೆ ಮಾಹಿತಿ
ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ (Jio Cloud PC) ಹೆಸರಿನ ಈ ತಂತ್ರಜ್ಞಾನವು ಕೇವಲ ನೂರು ರೂ. ಗಳಿಗೆ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತನೆ ಮಾಡಲಿದೆ. ಇದಕ್ಕೆ ಬೇಕಾಗಿರುವುದು ಇಂಟರ್ ನೆಟ್ ಕನೆಕ್ಷನ್, ಸ್ಮಾರ್ಟ್ ಟಿವಿ, ಟೈಪಿಂಗ್ ಕೀಬೋರ್ಡ್, ಮೌಸ್ ಹಾಗೂ ಜಿಯೋ ಕ್ಲೌಡ್ ಪಿಸಿ ಆಪ್.
ಹೌದು, ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ಬಗ್ಗೆ ರಿಲಯನ್ಸ್ ಜಿಯೋ ಪ್ರದರ್ಶಿಸಿ ಅಚ್ಚರಿ ಮೂಡಿಸಿದೆ. ಬರೀ ಸ್ಮಾರ್ಟ್ ಟಿವಿಗಳು ಅಷ್ಟೇ ಅಲ್ಲದೇ, ಟಿವಿಗಳು ಸ್ಮಾರ್ಟ್ ಅಲ್ಲದಿದ್ದಲ್ಲಿ ಸಾಮಾನ್ಯ ಟಿವಿಗಳು ಸಹ ಜಿಯೋಫೈಬರ್ ( Jio Fiber ) ಅಥವಾ ಜಿಯೋಏರ್ ಫೈಬರ್ ( JioAir Fiber ) ಜೊತೆಗೆ ಬರುವ ಸೆಟ್-ಟಾಪ್ ಬಾಕ್ಸ್ ಮೂಲಕ ಕಂಪ್ಯೂಟರ್ ಆಗಬಹುದು.

ಜಿಯೋ ಕ್ಲೌಡ್ ಪಿಸಿ (Jio Cloud PC) ಎಂಬುದು ತಂತ್ರಜ್ಞಾನ ಆಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಬಳಸುವುದಕ್ಕೆ ಕೂಡಾ ಸುಲಭ. ಆದರೆ ಗ್ರಾಹಕರು ಆಪ್‌ಗೆ ಲಾಗಿನ್ ಮಾಡಬೇಕಾಗುತ್ತದೆ ಹಾಗೂ ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಡೇಟಾ ಟಿವಿಯಲ್ಲಿ ಕಾಣಿಸುತ್ತದೆ.
ಇ-ಮೇಲ್, ಮೆಸೆಜ್ ಕಳುಹಿಸುವುದು, ಸಾಮಾಜಿಕ ನೆಟ್‌ವರ್ಕಿಂಗ್, ಇಂಟರ್ ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್ ಗಳು, ಕಚೇರಿ ಪ್ರಸೆಂಟೇಷನ್ ಮುಂತಾದ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಮನೆಯ ಟಿವಿಯಲ್ಲಿ ಮಾಡಬಹುದು. ಈ ಬಗ್ಗೆ ಸರಳವಾಗಿ ಹೇಳುವುದಾದರೆ, ಎಲ್ಲ ಡೇಟಾವು ಕ್ಲೌಡ್‌ನಲ್ಲಿ ಇರುತ್ತದೆ ಮತ್ತು ಸರ್ವರ್, ಸ್ಟೋರೇಜ್, ಡೇಟಾಬೇಸ್, ನೆಟ್‌ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಅನಲಿಟಿಕ್ಸ್ ತರಹದ ಸೇವೆಗಳ ಅನ್ನು ಟಿವಿ ಮೂಲಕ ಬಳಕೆ ಮಾಡಬಹುದು.
ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್‌ಗೆ ಸಂಪರ್ಕ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನ ವರದಾನ ಇದ್ದಂತೆ. ಏಕೆಂದರೆ ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಸಹ ಮಾಡಬಹುದು.
ಇದು ಸುರಕ್ಷಿತ ಮಾತ್ರವಲ್ಲ, ಡೇಟಾ ಮರುಪಡೆಯುವಿಕೆ ಸಹ ಸಾಮಾನ್ಯ ಕಂಪ್ಯೂಟರ್ ಅನ್ನು ಬಳಸುವುದಕ್ಕಿಂತ ಸುಲಭವಾಗಿದೆ. ಇದನ್ನು ಟಿವಿ ಜೊತೆಗೆ ಮೊಬೈಲ್ ನಲ್ಲೂ ಸಹ ಬಳಸಬಹುದು. ಸಂಸ್ಥೆಯು ಈ ಅಪ್ಲಿಕೇಷನ್ ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ ಮುಂದಿನ ಕೆಲವು ತಿಂಗಳಲ್ಲಿ ಇದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.
ಜಿಯೋಭಾರತ್ ಹೊಸ ಫೋನ್
ಜಿಯೋ ಸಂಸ್ಥೆಯು ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್- 2024 ರಲ್ಲಿ ನೂತನವಾಗಿ ಜಿಯೋಭಾರತ್ ಸರಣಿಯಲ್ಲಿ 4G ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳು ಕ್ರಮವಾಗಿ ಜಿಯೋಭಾರತ್ V3 ಮತ್ತು ಜಿಯೋಭಾರತ್ V4 ಫೋನ್‌ಗಳು ಆಗಿವೆ. ಅಂದಹಾಗೆ ಈ ಹೊಸ ಮಾಡೆಲ್‌ಗಳು 1099 ರೂ. ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಿವೆ.
ಇನ್ನು ಈ ಎರಡೂ ಫೋನ್‌ಗಳಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಪೇ ಮತ್ತು ಜಿಯೋ ಚಾಟ್ ನಂತಹ ಕೆಲವು ಪ್ರೀ- ಲೋಡ್ ಮಾಡಿದ ಆಪ್ ಸೌಲಭ್ಯ ಪಡೆದಿವೆ. ಜೊತೆಗೆ 455 ಲೈವ್ ಟಿವಿ ಚಾನೆಲ್‌ಗಳ ಜೊತೆಗೆ ಚಲನಚಿತ್ರಗಳು, ವಿಡಿಯೋಗಳು ಮತ್ತು ಕ್ರೀಡಾ ಕಂಟೆಂಟ್ ಗಳು ಸಹ ಗ್ರಾಹಕರಿಗೆ ಒಂದು ಕ್ಲಿಕ್‌ನಲ್ಲಿ ಲಭ್ಯವಿರುತ್ತವೆ. ಹಾಗೆಯೇ ಜಿಯೋಪೇ ಪೇಮೆಂಟ್ ಸೇವೆ ಸಹ ಲಭ್ಯ ಇರುತ್ತದೆ.


Click it and Unblock the Notifications








