ಬಿಜಿನೆಸ್ ಮಾಡುವವರಿಗೆ ಬೇಕಾದ ಮಾಹಿತಿ ನೀಡಲಿದೆ ಈ ಆಪ್!!
ಈ ಆಪ್ ಮೂಲಕ ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರು ಸರಳವಾಗಿ ವಾಣಿಜ್ಯ ಮಾಹಿತಿ ಪಡೆಯಬಹುದು ಮತ್ತು ಹಂಚಿಕೊಳ್ಳಬಹುದಾದ ಸೌಲಭ್ಯವಿದೆ.!!
ಬಿಜಿನೆಸ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದವರು ಈಗಲೂ ಕೂಡ ಬಿಜಿನೆಸ್ ಎಂದರೆ ಮೂಗು ಮುರಿರುತ್ತಾರೆ. ಏಕೆಂದರೆ ಷೇರು ಮಾಹಿತಿ, ಪೇಟೆ ಸಮಾಚರ, ಸರಕುಗಳ ಮಾಹಿತಿ, ಗುಣಮಟ್ಟದಂತಹ ಪದಗಳು ಬಿಜಿನೆಸ್ ಮಾಡಬಯಸುವ ಹೊಸಬರಿಗೆ ತಲೆಕೆಡಿಸಿಬಿಡುತ್ತವೆ ಎಂದರೆ ತಪ್ಪಾಗಲಾರದು.!!
ಹಾಗಾಗಿಯೇ, ವಾಣಿಜ್ಯ ಚಟುವಟಿಕೆಗಳನ್ನು ಜಾಗತಿಕವಾಗಿ ವಿಸ್ತರಿಸುವವರ ಅನುಕೂಲಕ್ಕಾಗಿ 'ಜಸ್ಟ್ ಬಿಜಿನೆಸಸ್' (Just Businesses App) ಎಂಬ ಆಪ್ ಅನ್ನು ರೂಪಿಸಲಾಗಿದೆ. ಈ ಆಪ್ ಮೂಲಕ ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರು ಸರಳವಾಗಿ ವಾಣಿಜ್ಯ ಮಾಹಿತಿ ಪಡೆಯಬಹುದು ಮತ್ತು ಹಂಚಿಕೊಳ್ಳಬಹುದಾದ ಸೌಲಭ್ಯವಿದೆ.!!

ಷೇರು ಮಾಹಿತಿ, ಪೇಟೆ ಸಮಾಚರ, ಸರಕುಗಳ ಮಾಹಿತಿ, ಗುಣಮಟ್ಟ, ಸರಕುಗಳ ಉತ್ಪಾದನೆ, ಕಚ್ಛಾ ಸರಕುಗಳ ಲಭ್ಯತೆ, ತಂತ್ರಜ್ಞಾನ ವಿನಿಮಯ, ಮಾನವ ಸಂಪನ್ಮೂಲ, ಆಮದು, ರಫ್ತು ಸೇರಿದಂತೆ ವ್ಯಾಪಾರ ವಹಿವಾಟಿನ ಎಲ್ಲ ಮಾಹಿತಿ ಈ ಮೊಬೈಲ್ ಅಪ್ಲಿಕೇಶನ್ ಒಂದರಲ್ಲಿಯೇ ದೊರೆಯಲಿದೆ.!!

ಈ ಮೊಬೈಲ್ ಅಪ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮಾದರಿಗಳಲ್ಲಿ ಸಹ ಲಭ್ಯವಿದ್ದು, ಆಪ್ ಡೌನ್‌ಲೋಡ್ ಮಾಡಿದ ನಂತರ ಅಕೌಂಟ್ ತೆರೆದು ಆಪ್ ಬಳಕೆ ಮಾಡಬಹುದು. ಆಪ್‌ನಲ್ಲಿರುವ ಕೊಳ್ಳುವವರು ಮತ್ತು ಮಾರುವವರು ಎಂಬ ಎರಡು ವಿಭಾಗಗಳಲ್ಲಿಯೂ ಸಹ ನಿಮಗೆ ಬೇಕಾದ ಮಾಹಿತಿ ಪಡೆಯಬಹುದು.!!
ಓದಿರಿ: ಸರಿಯಾಗಿ ತರಕಾರಿ ಸೇವಿಸಲು ವಿಜ್ಞಾನಿಗಳು ಲಾಂಚ್ ಮಾಡಿದ್ದಾರೆ "ವೆಜ್ ಈಜೀ'' ಆಪ್!!


Click it and Unblock the Notifications








