ಬೆಂಗಳೂರಿನ ಮಹಿಳೆಯರಿಗೆ ಇನ್ನು ಭಯವಿಲ್ಲ..! ಬಂದಿದೆ ಸುರಕ್ಷ ಆಪ್‌..!

|

ಬೆಂಗಳೂರು ನಗರ ಪೊಲೀಸರು ಡಿಜಿಟಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಜನ ಸಾಮಾನ್ಯರನ್ನು ತಲುಪುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜಧಾನಿಯ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷ ಆಪ್ ಸೇವೆಯನ್ನು ಆರಂಭಿಸಿದ್ದಾರೆ. ಈ ಮೂಲಕ ಸ್ಮಾರ್ಟ್‌ ಪೊಲೀಸ್ ಸೇವೆಯನ್ನು ನೀಡಲು ಮುಂದಾಗಿದ್ದಾರೆ.

ಬೆಂಗಳೂರಿನ ಮಹಿಳೆಯರಿಗೆ ಇನ್ನು ಭಯವಿಲ್ಲ..! ಬಂದಿದೆ ಸುರಕ್ಷ ಆಪ್‌..!

ಓದಿರಿ: ಸ್ಯಾಮ್‌ಸಂಗ್‌ನೊಂದಿಗೆ ಕೈ ಜೋಡಿಸಿದ ವೊಡಾಫೋನ್: ವಿಶೇಷ ಆಫರ್-ಭರ್ಜರಿ ಕ್ಯಾಷ್ ಬ್ಯಾಕ್..!

ದಿಂನದಿಂದ ದಿನಕ್ಕೆ ಮಹಿಳೆಯರ ಹಾಗೂ ಮಕ್ಕಳ ಮೇಲೆನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದ ಇದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಪೊಲೀಸರು ರಕ್ಷಣೆ ಒದಗಿಸಲು ಮುಂದಾಗಿದ್ದಾರೆ. ಸರಗಳ್ಳತನ, ದರೋಡೆ, ದೌರ್ಜನ್ಯ ಕ್ಕೆ ಗುರಿಯಾದ ಮಹಿಳೆಯರು ಸಹಾಯಕ್ಕೆ ಸುರಕ್ಷ ಆಪ್ ಬಿಡುಗಡೆಯಾಗಿದ್ದು, ಮಹಿಳೆಯರ ರಕ್ಷಣೆಗೆ ಇದು ಸಹಾಯಕಾರಿಯಾಗಿದೆ.

ಸುರಕ್ಷ ಆಪ್..!

ಸುರಕ್ಷ ಆಪ್..!

ಮಹಿಳೆಯರ ರಕ್ಷಣೆಗೆ ಬಿಡುಗಡೆಯಾಗಿರುವ ಈ ಆಪ್ ಅನ್ನು ಪ್ಲೇ ಸ್ಟೋರ್ ಮೂಲಕ ಸ್ಮಾರ್ಟ್​ಫೋನ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬೇಕಾಗಿದೆ. ಇದಾದ ನಂತರ ಹೆಸರು, ವಿಳಾಸ ನಮೂದಿಸಿ. ತುರ್ತು ಸಮಯದಲ್ಲಿ ಸಂರ್ಪಸಬೇಕಾದ ಸ್ನೇಹಿತ/ಸಂಬಂಧಿಕರ (ಇಬ್ಬರು) ಮೊಬೈಲ್ ಸಂಖ್ಯೆ ದಾಖಲಿಸಬೇಕಾಗಿದ್ದು, ಇದಾದ ನಂತರದಲ್ಲಿ ಬರುವ OTP ಪಡೆದು ದೃಢೀಕರಿಸಿಕೊಳ್ಳಬೇಕಾಗಿದೆ.

ಕಾರ್ಯನಿರ್ವಹಣೆಗೆ ಹೇಗೆ..?

ಕಾರ್ಯನಿರ್ವಹಣೆಗೆ ಹೇಗೆ..?

ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭದಲ್ಲಿ ಆಪ್​ನಲ್ಲಿ ನೀಡಿರುವ ಕೆಂಪು ಬಟನ್ ಒತ್ತಿದ್ದಾಗ ಅಥವಾ ಮೊಬೈಲ್ ಪವರ್ ಬಟನ್​ನನ್ನು 5 ಬಾರಿ ಒತ್ತಿದರೆ ಪೊಲೀಸರಿಗೆ ಹಾಗೂ ಆಪ್​ನಲ್ಲಿ ದಾಖಲಿಸಿರುವ ಇಬ್ಬರು ವ್ಯಕ್ತಿಗಳ ಮೊಬೈಲ್​ಗೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಲೈವ್ ವೆಹಿಕಲ್ ಟ್ರ್ಯಾಕಿಂಗ್..!

ಲೈವ್ ವೆಹಿಕಲ್ ಟ್ರ್ಯಾಕಿಂಗ್..!

ದೂರನ್ನು ಸ್ವೀಕರಿಸುವ ಕಮಾಂಡ್ ಸೆಂಟರ್ ಸಿಬ್ಬಂದಿ ಸ್ವೀಕರಿಸಿ ತುರ್ತು ಸ್ಥಿತಿಯಲ್ಲಿರುವ ಮಹಿಳೆ/ಮಕ್ಕಳ ಸ್ಥಳವನ್ನು ‘ಲೈವ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ' ಮೂಲಕ ಗುರುತಿಸಿ ತಕ್ಷಣ ಎಚ್ಚರಿಕೆ ಸಂದೇಶಗಳನ್ನು ನೋಂದಾಯಿತ ಸ್ನೇಹಿತ/ಸಂಬಂಧಿಕರ ಮೊಬೈಲ್​ಗೆ ಕಳುಹಿಸುತ್ತಾರೆ.

ರಕ್ಷಣೆಗೆ ಪಿಂಕ್ ಹೊಯ್ಸಳ:

ರಕ್ಷಣೆಗೆ ಪಿಂಕ್ ಹೊಯ್ಸಳ:

ದೂರು ಸ್ವೀಕರಿಸಿದ ನಂತರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯರ ಸಮೀಪದಲ್ಲಿರುವ ಪಿಂಕ್ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಪಿಂಕ್ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಂಕಷ್ಟದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲಿದ್ದಾರೆ ಎನ್ನಲಾಗಿದೆ.

Best Mobiles in India

English summary
Karnataka Launches 'Suraksha' App For Women Safety. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X